Karnataka Weather Today: ರಾಜ್ಯದಲ್ಲಿ ಮುಂಗಾರು ದುರ್ಬಲ; ಮುಂದಿನ 24ಗಂಟೆಯಲ್ಲಿ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ

Karnataka Weather Updates: ಜೂ.24ರವರೆಗೆ ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವೇ ಮುಂದುವರಿಯಲಿದ್ದು, ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 31 ಡಿಗ್ರಿ ಇದ್ದು, ಕನಿಷ್ಠ ತಾಪಮಾನ 21ರಷ್ಟಿರಲಿದೆ.

Karnataka Weather Today: ರಾಜ್ಯದಲ್ಲಿ ಮುಂಗಾರು ದುರ್ಬಲ; ಮುಂದಿನ 24ಗಂಟೆಯಲ್ಲಿ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ
ಪ್ರಾತಿನಿಧಿಕ ಚಿತ್ರ

ರಾಜ್ಯಾದ್ಯಂತ ನಿನ್ನೆಯಿಂದ ನೈಋತ್ಯ ಮುಂಗಾರು ದುರ್ಬಲಗೊಂಡಿದ್ದು, ಮಲೆನಾಡು, ದಕ್ಷಿಣ ಕನ್ನಡ ಹೊರತುಪಡಿಸಿದರೆ ಉಳಿದೆಲ್ಲ ಕಡೆ ಕಡಿಮೆ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ನಿನ್ನೆ ಉತ್ತರ ಮತ್ತು ದಕ್ಷಿಣ ಒಳನಾಡು, ಕರಾವಳಿ ಪ್ರದೇಶಗಳಲ್ಲಿ ತುಸು ಹೆಚ್ಚಾಗಿ ಮಳೆ ಸುರಿದಿದ್ದರೂ, ಮಧ್ಯೆ ಮಧ್ಯೆ ಬಿಸಿಲೂ ಕೂಡ ಇತ್ತು. ಹಾಗೇ, ಮುಂದಿನ 24ಗಂಟೆಯಲ್ಲಿ ಕೂಡ ರಾಜ್ಯದಲ್ಲಿ ಕರಾವಳಿ ಭಾಗಗಳಲ್ಲಿ, ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗಿನಿಂದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜೂ.24ರವರೆಗೂ ಒಂದೇ ತೆರನಾದ ಅಂದರೆ ವಾತಾವರಣ ಮುಂದುವರಿಯಲಿದ್ದು, ಹೆಚ್ಚೇನೂ ಬದಲಾವಣೆ ಇರುವುದಿಲ್ಲ. ಮುಂಗಾರು ದುರ್ಬಲ ಆಗಿರುವುದರಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗುವುದಿಲ್ಲ. ಕರಾವಳಿ ಭಾಗದಲ್ಲಿ ಮಳೆಯಾದರೂ ಅಂಥ ಭಯಂಕರ ಮಳೆ ಸುರಿಯುವುದಿಲ್ಲವಾದ್ದರಿಂದ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿಲ್ಲ ಎಂದು ಐಎಂಡಿ ಹೇಳಿದೆ.

ಬೆಂಗಳೂರು ಹವಾಮಾನ
ಇನ್ನು ಜೂ.24ರವರೆಗೆ ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವೇ ಮುಂದುವರಿಯಲಿದ್ದು, ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 31 ಡಿಗ್ರಿ ಇದ್ದು, ಕನಿಷ್ಠ ತಾಪಮಾನ 21ರಷ್ಟಿರಲಿದೆ. ಹಾಗೇ, ಗಾಳಿಯ ಪ್ರಮಾಣವೂ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೂನ್​ 26ರವರೆಗೂ ಮೋಡ ಕವಿದ ವಾತಾವರಣವೇ ಇರಲಿದ್ದು, ಮಳೆ ಬೀಳಲೂ ಬಹುದು..ಬೀಳದೆಯೂ ಇರಬಹುದು. ಆದರೆ ಜೂ.27ರಿಂದ 29ರವರೆಗೆ ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮಳೆ ಬೀಳಲಿದೆ. 28 ಮತ್ತು 29ರಂದು ಗುಡುಗು-ಮಿಂಚು ಸಹಿತ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದೇಶಾದ್ಯಂತ ಎಲ್ಲೆಲ್ಲಿ ಮಳೆ?
ನಿನ್ನೆ ಜಾರ್ಖಂಡ, ಪಶ್ಚಿಮ ಮಧ್ಯಪ್ರದೇಶದಲ್ಲಿ ಸಿಕ್ಕಾಪಟೆ ಮಳೆಯಾಗಿದ್ದು, ಛತ್ತೀಸ್​ಗಢ್​ದ ಹಲವು ಭಾಗಗಳಲ್ಲಿ ಮಳೆ ಬಿದ್ದಿದೆ. ಇನ್ನುಳಿದಂತೆ ಪಶ್ಚಿಮಬಂಗಾಳ, ಸಿಕ್ಕಿಂ, ಓಡಿಶಾ, ಕೇರಳ, ಕರ್ನಾಟಕದ ಕರಾವಳಿ ತೀರಗಳು, ಅರುಣಾಚಲ ಪ್ರದೇಶ, ಬಿಹಾರ ಸೇರಿ ಬಹುತೇಕ ರಾಜ್ಯಗಳಲ್ಲಿ ಕೆಲವೇ ಭಾಗಳಲ್ಲಿ ವರುಣ ಸಿಂಚನವಾಗಿತ್ತು. ಇಂದು ಕೂಡ ಜಾರ್ಖಂಡ, ಛತ್ತೀಸ್​ಗಢ, ಉತ್ತರ ಪ್ರದೇಶ, ಜಮ್ಮು-ಕಾಶ್ಮೀರ, ಲಡಾಖ್​, ಪಶ್ಚಿಮ ಬಂಗಾಳ, ಸಿಕ್ಕಿಂ, ಆಂಧ್ರಪ್ರದೇಶ, ಕೇರಳ ಸೇರಿ ಅನೇಕ ರಾಜ್ಯಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗಲಿದೆ. ಮಹಾರಾಷ್ಟ್ರದಲ್ಲೂ ಭರ್ಜರಿ ಮಳೆ ಮುಂದುವರಿದಿದೆ.

ಇದನ್ನೂ ಓದಿ: Coronavirus cases in India: ಕಳೆದ 24 ಗಂಟೆಗಳಲ್ಲಿ 50,581 ಹೊಸ ಕೊವಿಡ್ ಪ್ರಕರಣ ಪತ್ತೆ, ಚೇತರಿಕೆ ಪ್ರಮಾಣ ಶೇ 96.56