Karnataka Weather Today: ಚಳಿಗೆ ಬೆಂಗಳೂರು ಗಡಗಡ; ಕೆಲವು ಜಿಲ್ಲೆಗಳಲ್ಲಿ ಇಂದು ಕೂಡ ಶೀತ ಅಲೆ

| Updated By: ಸುಷ್ಮಾ ಚಕ್ರೆ

Updated on: Jan 12, 2023 | 6:12 AM

ಈ ವರ್ಷ ಕರ್ನಾಟಕದಲ್ಲಿ ಡಿಸೆಂಬರ್​ವರೆಗೂ ಮಳೆಗಾಲವೇ ಇದ್ದುದರಿಂದ ತಡವಾಗಿ ಚಳಿಗಾಲ ಶುರುವಾಗಿದೆ. ಈ ಚಳಿಗಾಲ ಮಾರ್ಚ್​ವರೆಗೂ ಮುಂದುವರೆಯುವ ಸಾಧ್ಯತೆಯಿದೆ.

Karnataka Weather Today: ಚಳಿಗೆ ಬೆಂಗಳೂರು ಗಡಗಡ; ಕೆಲವು ಜಿಲ್ಲೆಗಳಲ್ಲಿ ಇಂದು ಕೂಡ ಶೀತ ಅಲೆ
ಬೆಂಗಳೂರಿನಲ್ಲಿ ಕವಿದ ಮಂಜು
Image Credit source: Twitter
Follow us on

ಬೆಂಗಳೂರು: ಕೆಲವು ದಿನಗಳಿಂದ ಕರ್ನಾಟಕದಲ್ಲಿ ಚಳಿ (Karnataka Weather Today) ಹೆಚ್ಚಾಗಿದೆ. ರಾಜ್ಯಾದ್ಯಂತ ಇಂದು ಕೂಡ ಶೀತ ಅಲೆ (Cold Wave) ಮುಂದುವರೆಯಲಿದೆ. ಕೆಲವು ಜಿಲ್ಲೆಗಳಲ್ಲಿ ಇಂದು ಸಾಮಾನ್ಯಕ್ಕಿಂತಲೂ 5ರಿಂದ 6 ಡಿಗ್ರಿ ಸೆಲ್ಸಿಯಸ್ ಕಡಿಮೆ ಉಷ್ಣಾಂಶ ದಾಖಲಾಗುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲಿ (Bengaluru Weather) ಬೆಳಗ್ಗೆ ದಟ್ಟವಾದ ಮಂಜು ಆವರಿಸಲಿದೆ. ಗರಿಷ್ಠ 27 ಮತ್ತು ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆಗಳಿವೆ.

ಈ ವರ್ಷ ಕರ್ನಾಟಕದಲ್ಲಿ ಡಿಸೆಂಬರ್​ವರೆಗೂ ಮಳೆಗಾಲವೇ ಇದ್ದುದರಿಂದ ತಡವಾಗಿ ಚಳಿಗಾಲ ಶುರುವಾಗಿದೆ. ಈ ಚಳಿಗಾಲ ಮಾರ್ಚ್​ವರೆಗೂ ಮುಂದುವರೆಯುವ ಸಾಧ್ಯತೆಯಿದೆ. ಇದೀಗ ಉತ್ತರ ಭಾರತದಿಂದ ದಕ್ಷಿಣ ಭಾರತದ ಕಡೆಗೆ ಶೀತ ಗಾಳಿ ಬೀಸಲಾರಂಭಿಸಿದೆ. ಇದರಿಂದ ಕರ್ನಾಟಕದಲ್ಲಿ ಚಳಿ ವಿಪರೀತ ಹೆಚ್ಚಾಗಿದೆ.

ಇದನ್ನೂ ಓದಿ: Heart Attack In Winter: ಇದು ಹೃದಯಗಳ ವಿಷಯ: ಬೆಂಗಳೂರಲ್ಲಿ ಮೈಕೊರೆಯುವ ಚಳಿ, ಈ ಕಾಯಿಲೆ ಇರುವವರಿಗೆ ಹೃದಯ ಜೋಪಾನ ಎನ್ನುತ್ತಿದ್ದಾರೆ ತಜ್ಞರು

ಬೆಂಗಳೂರು, ಮಲೆನಾಡು ಭಾಗಗಳಲ್ಲಿ ವಿಪರೀತ ಚಳಿ ಶುರುವಾಗಿದ್ದು, ಇಂದು ಕೂಡ ಬೆಂಗಳೂರಿನಲ್ಲಿ ದಟ್ಟ ಮಂಜು ಕವಿಯಲಿದೆ. ಇಂದು ಉತ್ತರ ಕರ್ನಾಟಕದಲ್ಲಿ ಕೂಡ ಚಳಿ ಗಾಳಿಯ ಅಲೆ ಇರಲಿದೆ. ಇಂದಿನಿಂದ ನಾಲ್ಕೈದು ದಿನಗಳ ಕಾಲ ರಾಜ್ಯಾದ್ಯಂತ ಚಳಿ ವಾತಾವರಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಉತ್ತರ ಕರ್ನಾಟಕದಲ್ಲಿ ಚಳಿ ಹೆಚ್ಚಾಗಿದೆ. ಇಂದು ಬೀದರ್, ವಿಜಯಪುರ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಶೀತ ಅಲೆಯ ಮುನ್ಸೂಚನೆ ನೀಡಲಾಗಿದ್ದು, ಹಳದಿ ಅಲರ್ಟ್​ ಘೋಷಿಸಲಾಗಿದೆ. ರಾಜ್ಯಾದ್ಯಂತ ಶೀತ ಅಲೆ ಹೆಚ್ಚಾಗಿರುವುದರಿಂದ ಕನಿಷ್ಠ ಮೂರರಿಂದ ನಾಲ್ಕು ಪದರಗಳ ಬಟ್ಟೆಗಳನ್ನು ಧರಿಸಬೇಕು, ಸಾಧ್ಯವಾದಾಗ ಮನೆಯೊಳಗೇ ಉಳಿಯಬೇಕು, ದೇಹವನ್ನು ಪೂರ್ತಿಯಾಗಿ ಕವರ್ ಮಾಡಿಕೊಳ್ಳಬೇಕು ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಇದನ್ನೂ ಓದಿ: Karnataka Weather: ಉತ್ತರ ಕರ್ನಾಟಕದಲ್ಲಿ ಇಂದಿನಿಂದ ವಿಪರೀತ ಚಳಿ ಗಾಳಿ; ಬೆಂಗಳೂರಿನಲ್ಲೂ ದಟ್ಟ ಮಂಜು

ಈ ಚಳಿ ಗಾಳಿ ಇತರ ಆರೋಗ್ಯ ಸಮಸ್ಯೆಗಳಾದ ಮೂಗು ಸೋರುವಿಕೆ, ಅಸ್ತಮಾ ಹದಗೆಡುವುದು, ಜ್ವರದ ಲಕ್ಷಣಗಳು ಮತ್ತು ಚರ್ಮದ ತುರಿಕೆ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಶೀತ ಅಲೆಯಿಂದ ಶಿಶುಗಳು, ಗರ್ಭಿಣಿ ಮಹಿಳೆ, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ವೃದ್ಧರು ಮುಂತಾದವರಿಗೆ ಹೆಚ್ಚಿನ ಸಮಸ್ಯೆ ಉಂಟಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ