Sign In

By signing in or creating an account, you agree with Associated Broadcasting Company's Terms & Conditions and Privacy Policy.

Weather Today: ಜ. 7ರವರೆಗೂ ದೆಹಲಿ, ಚಂಡೀಗಢ, ಪಂಜಾಬ್, ಹರಿಯಾಣದಲ್ಲಿ ಶೀತ ಗಾಳಿ, ದಟ್ಟ ಮಂಜು

ಮುಂದಿನ 5 ದಿನಗಳಲ್ಲಿ ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ವಾಯುವ್ಯ ಭಾರತದ ಬಯಲು ಪ್ರದೇಶಗಳಲ್ಲಿ ದಟ್ಟವಾದ ಮಂಜು ಮತ್ತು ಶೀತ ಗಾಳಿಯ ಪರಿಸ್ಥಿತಿಗಳು ಮುಂದುವರಿಯುವ ಸಾಧ್ಯತೆಯಿದೆ.

Weather Today: ಜ. 7ರವರೆಗೂ ದೆಹಲಿ, ಚಂಡೀಗಢ, ಪಂಜಾಬ್, ಹರಿಯಾಣದಲ್ಲಿ ಶೀತ ಗಾಳಿ, ದಟ್ಟ ಮಂಜು
ದೆಹಲಿಯಲ್ಲಿ ದಟ್ಟ ಮಂಜು
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 03, 2023 | 8:51 AM

ನವದೆಹಲಿ: ಇಂದಿನಿಂದ ಜನವರಿ 7ರವರೆಗೂ ಪಂಜಾಬ್, ಹಿಮಾಚಲ ಪ್ರದೇಶ, ದೆಹಲಿ, ರಾಜಸ್ಥಾನ, ಚಂಡೀಗಢ ಮತ್ತು ಹರಿಯಾಣ ರಾಜ್ಯಗಳಲ್ಲಿ ಶೀತ ಗಾಳಿ (Cold Wave) ಮತ್ತು ದಟ್ಟವಾದ ಮಂಜು ಆವರಿಸಲಿದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ (IMD) ಮುನ್ನೆಚ್ಚರಿಕೆ ನೀಡಿದ್ದು, ಭಾರತದ ವಾಯುವ್ಯ ಭಾಗಗಳಲ್ಲಿ 5 ದಿನಗಳ ಶೀತ ಅಲೆಯ ಮುನ್ಸೂಚನೆ ನೀಡಿದೆ.

“ಮುಂದಿನ 5 ದಿನಗಳಲ್ಲಿ ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ವಾಯುವ್ಯ ಭಾರತದ ಬಯಲು ಪ್ರದೇಶಗಳಲ್ಲಿ ದಟ್ಟವಾದ ಮಂಜು ಮತ್ತು ಶೀತ ಗಾಳಿಯ ಪರಿಸ್ಥಿತಿಗಳು ಮುಂದುವರಿಯುವ ಸಾಧ್ಯತೆಯಿದೆ. ಹಿಂದಿನ 24 ಗಂಟೆಗಳಲ್ಲಿ ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶದ ಹಲವು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು 3ರಿಂದ 7 ಡಿಗ್ರಿ ಸೆಲ್ಸಿಯಸ್​​ವರೆಗೆ ಇತ್ತು” ಎಂದು IMD ಹೇಳಿದೆ.

ಇದನ್ನೂ ಓದಿ: Winter: ಚಳಿಯಾದಾಗ ನಾವು ನಡುಗುವುದೇಕೆ, ದೇಹದೊಳಗೆ ಏನೇನಾಗುತ್ತೆ?

ನಿನ್ನೆಯವರೆಗೂ ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಕೆಲವು ಸ್ಥಳಗಳಲ್ಲಿ ಮತ್ತು ರಾಜಸ್ಥಾನದ ಉತ್ತರ ಭಾಗಗಳಲ್ಲಿ ಶೀತ ಅಲೆಗಳ ಪರಿಸ್ಥಿತಿಗಳು ಕಂಡುಬಂದಿತ್ತು. IMD ಪ್ರಕಾರ, ಮುಂದಿನ 5 ದಿನಗಳಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶಗಳಲ್ಲಿ ಶೀತ ಅಲೆಯ ಪರಿಸ್ಥಿತಿಗಳು ಉಂಟಾಗುವ ಸಾಧ್ಯತೆಯಿದೆ.

ಇಂದಿನಿಂದ ಜನವರಿ 6ರವರೆಗೆ ಉತ್ತರ ರಾಜಸ್ಥಾನದಲ್ಲಿ, ಹಾಗೆಯೇ ಇಂದು ಮತ್ತು ಜ. 4ರಂದು ಪಂಜಾಬ್‌ನಲ್ಲಿ ಶೀತಗಾಳಿ ಇರಲಿದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಮುಂದಿನ 5 ದಿನಗಳವರೆಗೆ ಬೆಳಿಗ್ಗೆ ಮತ್ತು ಸಂಜೆ ಅತ್ಯಂತ ದಟ್ಟವಾದ ಮಂಜು ಆವರಿಸುವ ಮುನ್ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ರಾಜ್ಯಾದ್ಯಂತ ಶೀತಗಾಳಿ, ಮಳೆ: ಉಸಿರಾಟದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ, ಆರೋಗ್ಯ ಸಚಿವರ ಸಲಹೆ ಪಾಲನೆ ಮಾಡುವುದು ಅವಶ್ಯ

ಹಾಗೇ, ವಾಯುವ್ಯ ಭಾರತದ ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್ ರಾಜ್ಯಗಳಲ್ಲಿ ಐಎಂಡಿ ಮಳೆಯ ಮುನ್ಸೂಚನೆ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ