AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Weather: ಉತ್ತರ ಕರ್ನಾಟಕದಲ್ಲಿ ಇಂದಿನಿಂದ ವಿಪರೀತ ಚಳಿ ಗಾಳಿ; ಬೆಂಗಳೂರಿನಲ್ಲೂ ದಟ್ಟ ಮಂಜು

Bengaluru Weather: ಇಂದು ಬೀದರ್, ವಿಜಯಪುರ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಶೀತ ಅಲೆಯ ಮುನ್ಸೂಚನೆ ನೀಡಲಾಗಿದ್ದು, ಹಳದಿ ಅಲರ್ಟ್​ ಘೋಷಿಸಲಾಗಿದೆ.

Karnataka Weather: ಉತ್ತರ ಕರ್ನಾಟಕದಲ್ಲಿ ಇಂದಿನಿಂದ ವಿಪರೀತ ಚಳಿ ಗಾಳಿ; ಬೆಂಗಳೂರಿನಲ್ಲೂ ದಟ್ಟ ಮಂಜು
ಕರ್ನಾಟಕದ ಹಲವೆಡೆ ಶೀತ ಗಾಳಿಯ ಎಚ್ಚರಿಕೆImage Credit source: PTI
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 11, 2023 | 6:24 AM

ಬೆಂಗಳೂರು: ಕರ್ನಾಟಕದಲ್ಲಿ (Karnataka Weather Today) ಕಳೆದೊಂದು ವಾರದಿಂದ ಚಳಿ ಹೆಚ್ಚಾಗಿದೆ. ಬೆಂಗಳೂರು (Bengaluru Weather), ಮಲೆನಾಡು ಭಾಗಗಳಲ್ಲಿ ವಿಪರೀತ ಚಳಿ ಶುರುವಾಗಿದ್ದು, ಇಂದು ಕೂಡ ಬೆಂಗಳೂರಿನಲ್ಲಿ ದಟ್ಟ ಮಂಜು ಕವಿಯಲಿದೆ. ಇಂದು ಉತ್ತರ ಕರ್ನಾಟಕದಲ್ಲಿ ಕೂಡ ಚಳಿ ಗಾಳಿಯ (Cold Wave) ಅಲೆ ಇರಲಿದೆ. ಇಂದಿನಿಂದ ಐದಾರು ದಿನಗಳ ಕಾಲ ರಾಜ್ಯಾದ್ಯಂತ ಚಳಿ ವಾತಾವರಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಇಂದು ಬೀದರ್, ವಿಜಯಪುರ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಶೀತ ಅಲೆಯ ಮುನ್ಸೂಚನೆ ನೀಡಲಾಗಿದ್ದು, ಹಳದಿ ಅಲರ್ಟ್​ ಘೋಷಿಸಲಾಗಿದೆ. ಬೀದರ್ ಜಿಲ್ಲೆಯಲ್ಲಿ ಮಂಗಳವಾರ ಅತಿ ಕಡಿಮೆ ಉಷ್ಣಾಂಶ 5.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಬಾಗಲಕೋಟೆ ಮತ್ತು ವಿಜಯಪುರದಲ್ಲಿ ತಾಪಮಾನ 6 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಹೀಗಾಗಿ, ಹವಾಮಾನ ಇಲಾಖೆ ಶೀತ ಅಲೆಯ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: Health Tips: ಚಳಿಗಾಲದಲ್ಲಿ ಎದೆನೋವು ಕಾಣಿಸಿಕೊಂಡರೆ ಈ ಜೀವನಶೈಲಿ ಪಾಲಿಸಿ

ರಾಜ್ಯಾದ್ಯಂತ ಶೀತ ಅಲೆ ಹೆಚ್ಚಾಗಿರುವುದರಿಂದ ಕನಿಷ್ಠ ಮೂರರಿಂದ ನಾಲ್ಕು ಪದರಗಳ ಬಟ್ಟೆಗಳನ್ನು ಧರಿಸಬೇಕು, ಸಾಧ್ಯವಾದಾಗ ಮನೆಯೊಳಗೇ ಉಳಿಯಬೇಕು, ದೇಹವನ್ನು ಪೂರ್ತಿಯಾಗಿ ಕವರ್ ಮಾಡಿಕೊಳ್ಳಬೇಕು ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಚಳಿ ಗಾಳಿ ಇತರ ಆರೋಗ್ಯ ಸಮಸ್ಯೆಗಳಾದ ಮೂಗು ಸೋರುವಿಕೆ, ಅಸ್ತಮಾ ಹದಗೆಡುವುದು, ಜ್ವರದ ಲಕ್ಷಣಗಳು ಮತ್ತು ಚರ್ಮದ ತುರಿಕೆ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಶೀತ ಅಲೆಯಿಂದ ಶಿಶುಗಳು, ಗರ್ಭಿಣಿ ಮಹಿಳೆ, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ವೃದ್ಧರು ಮುಂತಾದವರಿಗೆ ಹೆಚ್ಚಿನ ಸಮಸ್ಯೆ ಉಂಟಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: Health Tips: ಚಳಿಗಾಲದಲ್ಲಿ ರಾತ್ರಿ ಸಾಕ್ಸ್​ ಹಾಕಿಕೊಂಡು ಮಲಗುತ್ತೀರಾ?; ಆ ಅಭ್ಯಾಸ ಬಿಟ್ಟುಬಿಡಿ

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಮಂಜು ಮುಸುಕಿದ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು (IMD) ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನವು 13-14 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವೆಸ್ಟ್​ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
ವೆಸ್ಟ್​ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
ಮೈಸೂರಿಗೆ 5 ರೂ. ಕೆಲಸ ಮಾಡಿಲ್ಲ ಸಿದ್ದರಾಮಯ್ಯ: ಪ್ರತಾಪ್ ಸಿಂಹ ವಾಗ್ದಾಳಿ
ಮೈಸೂರಿಗೆ 5 ರೂ. ಕೆಲಸ ಮಾಡಿಲ್ಲ ಸಿದ್ದರಾಮಯ್ಯ: ಪ್ರತಾಪ್ ಸಿಂಹ ವಾಗ್ದಾಳಿ
‘ಹುಡುಗಿ ಇದ್ದಾಗ ಒಂತರ, ಇಲ್ಲದಿದ್ದಾಗ ಒಂತರ’; ರಕ್ಷಕ್ ಬಗ್ಗೆ ರಮೋಲಾ ಮಾತು
‘ಹುಡುಗಿ ಇದ್ದಾಗ ಒಂತರ, ಇಲ್ಲದಿದ್ದಾಗ ಒಂತರ’; ರಕ್ಷಕ್ ಬಗ್ಗೆ ರಮೋಲಾ ಮಾತು
ಎಂಭತ್ತು ಶವಗಳ ಗುರುತು ಪತ್ತೆ, 4-ದಿನದಿಂದ ಕಾಯುತ್ತಿರುವ ಸಂಬಂಧಿಕರು
ಎಂಭತ್ತು ಶವಗಳ ಗುರುತು ಪತ್ತೆ, 4-ದಿನದಿಂದ ಕಾಯುತ್ತಿರುವ ಸಂಬಂಧಿಕರು
ಲಕ್ನೋ: ಸೌದಿ ಏರ್​ಲೈನ್ಸ್​ ವಿಮಾನದ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ
ಲಕ್ನೋ: ಸೌದಿ ಏರ್​ಲೈನ್ಸ್​ ವಿಮಾನದ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ
ಸ್ಫೋಟಕ ಬ್ಯಾಟಿಂಗ್​... ಮತ್ತೊಂದು ಟಿ20 ಟ್ರೋಫಿ ಗೆದ್ದ ಜಿತೇಶ್ ಶರ್ಮಾ
ಸ್ಫೋಟಕ ಬ್ಯಾಟಿಂಗ್​... ಮತ್ತೊಂದು ಟಿ20 ಟ್ರೋಫಿ ಗೆದ್ದ ಜಿತೇಶ್ ಶರ್ಮಾ
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ, ಭೋರ್ಗರೆಯುತ್ತಿರುವ ಭದ್ರೆ
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ, ಭೋರ್ಗರೆಯುತ್ತಿರುವ ಭದ್ರೆ
ಮಳೆ ಅಬ್ಬರ, ಈ ನಾಲ್ಕು ಜಿಲ್ಲೆಗಳಲ್ಲಿಂದು ಶಾಲೆ-ಕಾಲೇಜುಗಳಿಗೆ ರಜೆ
ಮಳೆ ಅಬ್ಬರ, ಈ ನಾಲ್ಕು ಜಿಲ್ಲೆಗಳಲ್ಲಿಂದು ಶಾಲೆ-ಕಾಲೇಜುಗಳಿಗೆ ರಜೆ
Daily Devotional: ದೇವರು ಯಾರಿಗೆ ಸಹಾಯ ಮಾಡುತ್ತಾನೆ ಗೊತ್ತಾ?
Daily Devotional: ದೇವರು ಯಾರಿಗೆ ಸಹಾಯ ಮಾಡುತ್ತಾನೆ ಗೊತ್ತಾ?
Daily Horoscope: ಕುಜ ಸಿಂಹ ರಾಶಿಯಲ್ಲಿ ಕೇತುವಿನೊಂದಿಗೆ ಸಂಚಾರ
Daily Horoscope: ಕುಜ ಸಿಂಹ ರಾಶಿಯಲ್ಲಿ ಕೇತುವಿನೊಂದಿಗೆ ಸಂಚಾರ