ಕರ್ನಾಟಕದ ಉದ್ಯೋಗಾಕಾಂಕ್ಷಿಗಳಿಗೆ ಇಸ್ರೇಲ್ ಪ್ರಮುಖ ತಾಣ: ಕಾರಣ ಕೇಳಿದ್ರೆ ಅಚ್ಚರಿಯಾಗ್ತೀರಿ!

|

Updated on: Nov 23, 2024 | 9:54 AM

ಕರ್ನಾಟಕದ ಉದ್ಯೋಗಾಂಕ್ಷಿಗಳು ಇಸ್ರೇಲ್‌ನಲ್ಲಿ ಕೆಲಸ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಯ ಪ್ರಕಾರ, ಈ ವರ್ಷ ಇಸ್ರೇಲ್‌ಗೆ 2200ಕ್ಕೂ ಹೆಚ್ಚು ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್‌ಗಳನ್ನು ನೀಡಲಾಗಿದೆ. ಇದು ಕಳೆದ ವರ್ಷಕ್ಕಿಂತ ಗಣನೀಯ ಏರಿಕೆಯಾಗಿದೆ.

ಕರ್ನಾಟಕದ ಉದ್ಯೋಗಾಕಾಂಕ್ಷಿಗಳಿಗೆ ಇಸ್ರೇಲ್ ಪ್ರಮುಖ ತಾಣ: ಕಾರಣ ಕೇಳಿದ್ರೆ ಅಚ್ಚರಿಯಾಗ್ತೀರಿ!
ಕರ್ನಾಟಕದ ಉದ್ಯೋಗಾಂಕ್ಷಿಗಳಿಗೆ ಇಸ್ರೇಲ್ ಪ್ರಮುಖ ತಾಣ: ಕಾರಣ ಕೇಳಿದ್ರೆ ಅಚ್ಚರಿಯಾಗ್ತೀರಿ!
Follow us on

ಬೆಂಗಳೂರು, ನವೆಂಬರ್ 23: ಕರ್ನಾಟಕದ ಉದ್ಯೋಗಾಂಕ್ಷಿಗಳಿಗೆ ಇಸ್ರೇಲ್ ಪ್ರಮುಖ ತಾಣವಾಗಿ ಗುರುತಿಸಿಕೊಂಡಿದೆ ಎಂಬುದು ಅಂಕಿಅಂಶಗಳಿಂದ ತಿಳಿದುಬಂದಿದೆ. ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ (ಆರ್‌ಪಿಒ) ಪ್ರಕಾರ, ಕರ್ನಾಟಕದ ಹೆಚ್ಚಿನ ಜನರು ಈ ವರ್ಷ ಇಸ್ರೇಲ್‌ನಲ್ಲಿ ಕೆಲಸ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ.

ಇಸ್ರೇಲ್ ಸರ್ಕಾರ ಎರಡು ತಿಂಗಳ ಹಿಂದೆ 10,000 ಕಟ್ಟಡ ಕಾರ್ಮಿಕರು ಮತ್ತು 5,000 ಶುಶ್ರೂಷಕರನ್ನು ಕೋರಿ ಭಾರತವನ್ನು ಸಂಪರ್ಕಿಸಿತ್ತು.

ಇಸ್ರೇಲ್‌ನ ನಿರ್ಮಾಣ ವಲಯವು ಒಂದು ಲಕ್ಷ ಪ್ಯಾಲೆಸ್ತೀನಿಯರ ಬದಲಿಗೆ ಸಾವಿರಾರು ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಬಯಸುತ್ತಿರುವುದಾಗಿ ಕಳೆದ ನವೆಂಬರ್‌ನಲ್ಲಿ ಸಾರ್ವಜನಿಕವಾಗಿ ಘೋಷಿಸಲಾಗಿತ್ತು. ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಪ್ರಕಾರ, ಉದ್ಯೋಗಕ್ಕಾಗಿ ಹಲವು ದೇಶಗಳಲ್ಲಿ ಕಡ್ಡಾಯವಾಗಿ ಅಗತ್ಯವಿರುವ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಸರ್ಟಿಫಿಕೇಟ್​​ಗಾಗಿ ಕರ್ನಾಟಕದ ಜನರು ಸಲ್ಲಿಸಿದ ಮನವಿಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.

ಪಾಸ್​ಪೋರ್ಟ್ ಕಚೇರಿ ಅಧಿಕಾರಿಗಳು ಹೇಳಿದ್ದೇನು?

ನಾವು ಪಶ್ಚಿಮ ಏಷ್ಯಾ, ಆಸ್ಟ್ರೇಲಿಯಾ, ಯುಕೆಯ ಹಲವು ದೇಶಗಳಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡುತ್ತೇವೆ ಮತ್ತು ಈಗ ಇಸ್ರೇಲ್‌ಗೆ ಹೋಗಲು ಜನರಿಂದ ಬೇಡಿಕೆಯಿದೆ. ಇಸ್ರೇಲ್‌ನಲ್ಲಿ ಕೆಲಸ ಮಾಡಲು ಹೊರಟಿರುವ ಕರ್ನಾಟಕದ ಜನರಿಗೆ ನಾವು ಈ ವರ್ಷ ಇದುವರೆಗೆ ಸುಮಾರು 2,200 ಪ್ರಮಾಣಪತ್ರಗಳನ್ನು ನೀಡಿದ್ದೇವೆ. ನಾವು 2023 ರಲ್ಲಿ ಅಂತಹ 1,576 ಪ್ರಮಾಣಪತ್ರಗಳನ್ನು ಮಾತ್ರ ನೀಡಿದ್ದೆವು ಎಂದು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಕೃಷ್ಣ ಕೆ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

ಇಸ್ರೇಲ್, ಹಮಾಸ್ ಸಂಘರ್ಷದ ನಂತರ ಹೆಚ್ಚಿದ ಬೇಡಿಕೆ

ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಪ್ರಾರಂಭವಾದ ನಂತರ ಕಳೆದ ವರ್ಷವೂ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್​ಗಳಿಗೆ ಬೇಡಿಕೆ ಹೆಚ್ಚಾಗಿತ್ತು ಎಂದು ಅವರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಬೆಂಗಳೂರಿಗರು ಗೋವಾಗೆ ಟ್ರಿಪ್ ಹೋಗಲು ಹಿಂದೇಟು ಹಾಕುತ್ತಿರುವುದು ಏಕೆ? ಇದೇ ನೋಡಿ ಕಾರಣ

ಕುವೈತ್ (6,000), ಇಸ್ರೇಲ್ (2,200), ಆಸ್ಟ್ರೇಲಿಯಾ (2,000) ಮತ್ತು ಯುಕೆ (1,382) ಗೆ ಹೋಗಲು ರಾಜ್ಯದ ಜನರಿಂದ ಬೇಡಿಕೆಯೊಂದಿಗೆ ಈ ವರ್ಷ ಇಲ್ಲಿಯವರೆಗೆ ಸುಮಾರು 25,000 ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್​ಗಳನ್ನು ನೀಡಲಾಗಿದೆ. ಆದಾಗ್ಯೂ, ಯುಕೆಗೆ ಹೋಗಲು ಅಂತಹ ಪ್ರಮಾಣಪತ್ರಗಳನ್ನು ಬಯಸುವವರಲ್ಲಿ ಕುಸಿತ ಕಂಡುಬಂದಿದೆ. ಒಟ್ಟಾರೆಯಾಗಿ, 2023 ರಲ್ಲಿ 2,396 ಪ್ರಮಾಣಪತ್ರಗಳನ್ನು ನೀಡಲಾಗಿದೆ ಮತ್ತು ಈ ವರ್ಷ ಇದುವರೆಗೆ 1,382 ಮಾತ್ರ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:47 am, Sat, 23 November 24