AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್​ ಸಿಬ್ಬಂದಿಗೆ ಟೆನ್ಷನ್ ತಂದಿಟ್ಟ ‘ಕರ್ತವ್ಯ ಆ್ಯಪ್’: ಕಡ್ಡಾಯ ಹಾಜರಾತಿ ನಿಯಮದಿಂದ ಕರ್ತವ್ಯಕ್ಕೆ ಅಡ್ಡಿ

ಸರ್ಕಾರಿ ನೌಕರರ ಹಾಜರಾತಿ ನಿಯಂತ್ರಿಸಲು ಜಾರಿಯಾಗಿರುವ ಕರ್ತವ್ಯ ಆ್ಯಪ್ ಪೊಲೀಸ್ ಸಿಬ್ಬಂದಿಗೆ ಇದೀಗ ಟೆನ್ಷನ್ ತಂದಿಟ್ಟಿದೆ. ಲಾಗಿನ್-ಲಾಗ್‌ಔಟ್ ಕಡ್ಡಾಯದಿಂದ ಭದ್ರತೆ, ತನಿಖೆ ಹಾಗೂ ಹೊರ ಜಿಲ್ಲೆಗಳ ಕರ್ತವ್ಯಗಳಿಗೆ ಅಡ್ಡಿಯಾಗಿದೆ. ಪೊಲೀಸರ ದೈನಂದಿನ ಕೆಲಸದ ಸ್ವರೂಪ ಅರ್ಥಮಾಡಿಕೊಳ್ಳದೆ ಜಾರಿಗೊಳಿಸಿದ ಈ ನಿಯಮದಿಂದ ಸಿಬ್ಬಂದಿಯಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಪೊಲೀಸ್​ ಸಿಬ್ಬಂದಿಗೆ ಟೆನ್ಷನ್ ತಂದಿಟ್ಟ ‘ಕರ್ತವ್ಯ ಆ್ಯಪ್’: ಕಡ್ಡಾಯ ಹಾಜರಾತಿ ನಿಯಮದಿಂದ ಕರ್ತವ್ಯಕ್ಕೆ ಅಡ್ಡಿ
ಕರ್ತವ್ಯ ಆ್ಯಪ್Image Credit source: tv9 kannada
ಶಿವಪ್ರಸಾದ್​ ಬಿ.
| Edited By: |

Updated on: Oct 08, 2026 | 3:15 PM

Share

ಮುಖ್ಯಾಂಶಗಳು

  • ಸರ್ಕಾರಿ ನೌಕರರ ಕಳ್ಳಾಟ ತಡೆಯಲು ಜಾರಿಗೆ ತಂದಿರುವ ಕರ್ತವ್ಯ ಆ್ಯಪ್
  • ಪೊಲೀಸ್​ ಸಿಬ್ಬಂದಿಗೆ ತಲೆನೋವಾದ ಆ್ಯಪ್
  • ಪೊಲೀಸ್ ಸಿಬ್ಬಂದಿ ವರ್ಗದಲ್ಲಿ ತೀವ್ರ ಅಸಮಾಧಾನ

ಬೆಂಗಳೂರು, ಅಕ್ಟೋಬರ್​​ 08: ರಾಜ್ಯ ಸರ್ಕಾರವು ಸರ್ಕಾರಿ ನೌಕರರ ಹಾಜರಾತಿ ಕಳ್ಳಾಟ ತಡೆಯಲು ಇತ್ತೀಚೆಗೆ ‘ಕರ್ತವ್ಯ ಆ್ಯಪ್’ ಜಾರಿಗೊಳಿಸಿದೆ. ಇದು ಪೊಲೀಸ್​ ಇಲಾಖೆಗೂ ಕಡ್ಡಾಯಗೊಳಿಸಲಾಗಿದೆ. ಆ ಮೂಲಕ ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿತ್ಯದ ಹಾಜರಾತಿಯನ್ನು ಇದೇ ಆ್ಯಪ್​​ನಲ್ಲಿ ದಾಖಲಿಸಲಾಗುತ್ತಿದೆ. ಆದರೆ ಇದೀಗ ಈ ಆ್ಯಪ್​​ನಿಂದಲೇ ಪೊಲೀಸರ ದೈನಂದಿನ ಕರ್ತವ್ಯಕ್ಕೆ ಅಡ್ಡಿ ಉಂಟಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪೊಲೀಸರು ಸಮಯ ನೋಡಿಕೊಂಡು ಕೆಲಸ ಮಾಡಲು ಸಾಧ್ಯವೆ? 

ಕರ್ತವ್ಯ ಆ್ಯಪ್​​ನಲ್ಲಿ ಲಾಗಿನ್ ಮತ್ತು ಲಾಗ್​ಔಟ್​ ಕಡ್ಡಾಯಗೊಳಿಸಿ ಡಿಜಿ ಮತ್ತು ಐಜಿಪಿ ಆದೇಶ ಹೊರಡಿಸಿದ್ದರು. ಸದ್ಯ ಈ ನಿಯಮದಿಂದ ಪೊಲೀಸ್ ಸಿಬ್ಬಂದಿ ವರ್ಗದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಪೊಲೀಸರು ಸಮಯ ನೋಡಿಕೊಂಡು ಕೆಲಸ ಮಾಡಲು ಸಾಧ್ಯವೆ ಎಂದು ಪ್ರಶ್ನಿಸಲಾಗುತ್ತಿದೆ.

ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳಿನ್ನು ಬೆಳಗ್ಗೆ 10 ಗಂಟೆಗೆ ಆಫೀಸ್​ನಲ್ಲಿರಲೇಬೇಕು: ಇಲ್ಲಾಂದ್ರೆ ಇಲಾಖಾ ಮುಖ್ಯಸ್ಥರಿಗೆ ಹೋಗುತ್ತೆ AI ರಿಪೋರ್ಟ್!

‘ಕರ್ತವ್ಯ ಆ್ಯಪ್’ ಸದ್ಯ ಪೊಲೀಸ್​ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಭದ್ರತೆ, ತನಿಖೆಗೆ ಬೇರೆ ಜಿಲ್ಲೆಗೆ ಅಥವಾ ರಾಜ್ಯಗಳಿಗೆ ತೆರಳುವ ಅನಿವಾರ್ಯತೆ ಇರುತ್ತದೆ. ಬೆಳಗಿನ ರೋಲ್​ ಕಾಲ್ ಅಥವಾ ಬಂದೋಬಸ್ತ್ ವೇಳೆ ಕರ್ತವ್ಯ ಆ್ಯಪ್​ನಲ್ಲಿ ಲಾಗಿನ್​​ ಆಗಿ ಬಳಿಕ ಲಾಗ್​​ಔಟ್​​ ಆಗುವುದು ಪ್ರಾಯೋಗಿಕವಾಗಿ ಅಸಾಧ್ಯ ಎನ್ನಲಾಗುತ್ತಿದೆ.

LIVE TV

ಪೊಲೀಸ್​ ಇಲಾಖೆ ಸ್ವರೂಪವನ್ನೇ ಅರ್ಥೈಸಿಕೊಳ್ಳದೆ ಆ್ಯಪ್​​ ಜಾರಿ ಆರೋಪ

ಇನ್ನು ಶಿಫ್ಟ್ ಮುಗಿದರೂ, ಲಾಗ್​​ಔಟ್ ಆದರೂ ಕರ್ತವ್ಯ ಮುಂದುವರೆಸಬೇಕು. ಹಾಗಾಗಿ ಪೊಲೀಸರ ದೈನಂದಿನ ಕರ್ತವ್ಯಕ್ಕೆ ಅಡ್ಡಿಯುಂಟಾಗಿದೆ. ಪೊಲೀಸ್​ ಇಲಾಖೆ ಸ್ವರೂಪವನ್ನೇ ಅರ್ಥೈಸಿಕೊಳ್ಳದೆ ಆ್ಯಪ್​​ ಜಾರಿ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಒಟ್ಟಿನಲ್ಲಿ ‘ಕರ್ತವ್ಯ ಆ್ಯಪ್’ ಇದೀಗ ಪೊಲೀಸ್​​ ಸಿಬ್ಬಂದಿಗೆ ಟೆನ್ಷನ್​​ ತಂದಿಟ್ಟಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸಿ ತ್ವರಿತ ಕ್ರಮಕ್ಕೆ ಆಗ್ರಹಿಸಲಾಗಿದೆ.

ಇದನ್ನೂ ಓದಿ: ಇನ್ಮುಂದೆ ರೇಷನ್ ಕಾರ್ಡ್ ಇ-ಕೆವೈಸಿ ಮತ್ತಷ್ಟು ಸುಲಭ: ಆಹಾರ ಇಲಾಖೆಯಿಂದ ‘ಅನ್ನ ಸೇವೆ ಆ್ಯಪ್’ ಬಿಡುಗಡೆ

ಇನ್ನು ಇ-ಆಡಳಿತ ಇಲಾಖೆಯು ಸರ್ಕಾರಿ ನೌಕರರ ಹಾಜರಾತಿಯನ್ನು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ಈ ಕರ್ತವ್ಯ ಆ್ಯಪ್​​ವನ್ನು ಸಿದ್ಧಪಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಶಿವಪ್ರಸಾದ್​ ಬಿ.
ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
ಬೆಂಗಳೂರಿಗೆ ನಾನೇ ಲಾಸ್ಟ್ ಅನ್ ಡಿವೈಡೆಡ್ ಪೊಲೀಸ್ ಕಮಿಷನರ್: ಸೀಮಂತ್ ಕುಮಾರ್
ಬೆಂಗಳೂರಿಗೆ ನಾನೇ ಲಾಸ್ಟ್ ಅನ್ ಡಿವೈಡೆಡ್ ಪೊಲೀಸ್ ಕಮಿಷನರ್: ಸೀಮಂತ್ ಕುಮಾರ್
‘ಆಯುಷ್’ ಸಿನಿಮಾ ವಿವಾದ ಬಗೆಹರಿದಿದ್ದು ಹೇಗೆ? ವಿವರಿಸಿದ ಜಯಮಾಲಾ
‘ಆಯುಷ್’ ಸಿನಿಮಾ ವಿವಾದ ಬಗೆಹರಿದಿದ್ದು ಹೇಗೆ? ವಿವರಿಸಿದ ಜಯಮಾಲಾ
ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಹಿತೇಂದ್ರ ಅಧಿಕಾರ ಸ್ವೀಕಾರ
ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಹಿತೇಂದ್ರ ಅಧಿಕಾರ ಸ್ವೀಕಾರ
ಆಸಿಯಾ ಮೇಲೆ ಹಲ್ಲೆಗೆ ರೆಡಿಯಾದ ಸೌಂದರ್ಯಾ: ವಿಡಿಯೋ
ಆಸಿಯಾ ಮೇಲೆ ಹಲ್ಲೆಗೆ ರೆಡಿಯಾದ ಸೌಂದರ್ಯಾ: ವಿಡಿಯೋ
‘ಆಯುಷ್’ ಸಿನಿಮಾ ವಿವಾದ, ಸಂಧಾನ ಸಭೆ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು
‘ಆಯುಷ್’ ಸಿನಿಮಾ ವಿವಾದ, ಸಂಧಾನ ಸಭೆ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು
ಬಾಳಾಸಾಹೇಬ್ ಠಾಕ್ರೆ ಫೋಟೋ ಹರಿದ ಶಿವಸೇನೆ ನಾಯಕಿ; ಭುಗಿಲೆದ್ದ ವಿವಾದ
ಬಾಳಾಸಾಹೇಬ್ ಠಾಕ್ರೆ ಫೋಟೋ ಹರಿದ ಶಿವಸೇನೆ ನಾಯಕಿ; ಭುಗಿಲೆದ್ದ ವಿವಾದ
ದೇವರನ್ನು ಪೂಜಿಸಲ್ಲ,ಹಾಗಂತ ದೇವರಿಲ್ಲ ಅಂತಾ ಹೇಳಲ್ಲ ಎಂದ ಸಿದ್ದರಾಮಯ್ಯ
ದೇವರನ್ನು ಪೂಜಿಸಲ್ಲ,ಹಾಗಂತ ದೇವರಿಲ್ಲ ಅಂತಾ ಹೇಳಲ್ಲ ಎಂದ ಸಿದ್ದರಾಮಯ್ಯ
ತಾವೇ ಖುದ್ದಾಗಿ ತೆರಳಿ ಟ್ರಂಪ್​ಗೆ ಅದ್ದೂರಿ ಸ್ವಾಗತ ಕೋರಿದ ಚೀನಾ ಅಧ್ಯಕ್ಷ
ತಾವೇ ಖುದ್ದಾಗಿ ತೆರಳಿ ಟ್ರಂಪ್​ಗೆ ಅದ್ದೂರಿ ಸ್ವಾಗತ ಕೋರಿದ ಚೀನಾ ಅಧ್ಯಕ್ಷ
ಜಕ್ಕೂರು-ಯಲಹಂಕ ಜನರ ಕನಸು ನನಸು: ಜಕ್ಕೂರು ಫ್ಲೈಓವರ್ ಉದ್ಘಾಟಿಸಿದ ಸಿಎಂ
ಜಕ್ಕೂರು-ಯಲಹಂಕ ಜನರ ಕನಸು ನನಸು: ಜಕ್ಕೂರು ಫ್ಲೈಓವರ್ ಉದ್ಘಾಟಿಸಿದ ಸಿಎಂ
ಸಕ್ಕರೆ ಕಾರ್ಖಾನೆಗಳ ಜಿದ್ದಾಜಿದ್ದಿಯಲ್ಲಿ ಕಬ್ಬು ಬೆಳೆಗಾರರಿಗೆ ಬಂಪರ್
ಸಕ್ಕರೆ ಕಾರ್ಖಾನೆಗಳ ಜಿದ್ದಾಜಿದ್ದಿಯಲ್ಲಿ ಕಬ್ಬು ಬೆಳೆಗಾರರಿಗೆ ಬಂಪರ್