ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜಕೀಯ ಬ್ರಹ್ಮ ಅಲ್ಲ, ಅವರು ಕುತಂತ್ರದಿಂದ ರಾಜಕೀಯವನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಕುತಂತ್ರದಿಂದ ರಾಜಕೀಯ ಮಾಡುತ್ತಾರೆ:
ನಮಗೂ ರಾಜಕೀಯ ಮಾಡೋಕೆ ಬರುತ್ತೆ, ಅವರು ಕುತಂತ್ರದಿಂದ ರಾಜಕೀಯ ಮಾಡುತ್ತಾರೆ. ಎರಡನೆ ಬಾರಿ ಮುಖ್ಯಮಂತ್ರಿ ಆಗುತ್ತೇನೆ ಅಂದ್ರು ಆದರೆ ಅದು ಆಗಲಿಲ್ಲ. 130 ಸೀಟ್ಗಳಿಂದ 80 ಸೀಟುಗಳಿಗೆ ಬಂದಿದ್ದಾರೆ. ಅವರ ಬಂಡಾವಳ ಗೊತ್ತು ನಮಗೆ ಎಂದಿದ್ದಾರೆ.
ಶರತ್ ಬಚ್ಚೇಗೌಡಗೆ ಕಟ್ಟಾ ವಾರ್ನಿಂಗ್:
ಶರತ್ ಬಚ್ಚೇಗೌಡ ಸ್ವತಂತ್ರ ಅಭ್ಯರ್ಥಿ,ಅವರಿಗೆ ಪಕ್ಷ ಏನಾದರೂ ಮಾಡಿದೆಯಾ, ಅವರಿಗೆ ಇನ್ನು ಬಿಜೆಪಿ ಬಾಗಿಲು ತೆರೆದಿದೆ. ಅವರು ಬಂದರೆ ಬರಲಿ ಇಲ್ಲ ಅಂದರೆ ಪಕ್ಷ ಸೂಕ್ತವಾದ ಕ್ರಮ ಕೈಗೊಳುತ್ತೆ ಎಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಶರತ್ ಬಚ್ಚೇಗೌಡಗೆ ವಾರ್ನಿಂಗ್ ಕೊಟ್ಟಿದ್ದಾರೆ.
Published On - 11:56 am, Mon, 18 November 19