ಶಾಸಕ ತನ್ವೀರ್ ಸೇಠ್ಗೆ ಐಸಿಯುನಲ್ಲಿ ಮುಂದುವರಿದ ಚಿಕಿತ್ಸೆ
ಮೈಸೂರು: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಮೈಸೂರಿನಲ್ಲಿ ತನ್ವೀರ್ ಸೇಠ್ ಕಾರ್ಪೊರೇಟರ್ ಅಫ್ತಾಬ್ ಮನೆಯ ಮದುವೆಯ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು ಈ ಸಂರ್ದಭದಲ್ಲಿ ಶಾಸಕರ ಬೆಂಬಲಿಗನೇ ಆದ ಫರಾನ್ ಎಂಬ ಯುವಕ ತನ್ವೀರ್ ಸೇಠ್ ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಬಲವಾಗಿ ಹೊಡೆದಿದ್ದ. ನಿನ್ನೆ ರಾತ್ರಿ ತನ್ವೀರ್ ಸೇಠ್ರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವೈದ್ಯರಾದ ಡಾ.ದತ್ತಾತ್ರೆ ಹಾಗೂ ಡಾ.ಪ್ರವೀಣ್ ತಡರಾತ್ರಿ 2 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಶಸ್ತ್ರ ಚಿಕಿತ್ಸೆ […]
ಮೈಸೂರು: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಮೈಸೂರಿನಲ್ಲಿ ತನ್ವೀರ್ ಸೇಠ್ ಕಾರ್ಪೊರೇಟರ್ ಅಫ್ತಾಬ್ ಮನೆಯ ಮದುವೆಯ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು ಈ ಸಂರ್ದಭದಲ್ಲಿ ಶಾಸಕರ ಬೆಂಬಲಿಗನೇ ಆದ ಫರಾನ್ ಎಂಬ ಯುವಕ ತನ್ವೀರ್ ಸೇಠ್ ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಬಲವಾಗಿ ಹೊಡೆದಿದ್ದ. ನಿನ್ನೆ ರಾತ್ರಿ ತನ್ವೀರ್ ಸೇಠ್ರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆ ದಾಖಲಿಸಲಾಗಿತ್ತು.
ಆಸ್ಪತ್ರೆಯ ವೈದ್ಯರಾದ ಡಾ.ದತ್ತಾತ್ರೆ ಹಾಗೂ ಡಾ.ಪ್ರವೀಣ್ ತಡರಾತ್ರಿ 2 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಈಗ ಸದ್ಯ ಐಸಿಯುನಲ್ಲಿ ಶಾಸಕ ತನ್ವಿರ್ ಸೇಠ್ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ನಿಖರವಾಗಿ ಇನ್ನು ಆರೋಗ್ಯದ ಬಗ್ಗೆ ಏನು ಹೇಳಲು ಸಾಧ್ಯವಿಲ್ಲ. ಇನ್ನು 48 ಗಂಟೆಗಳ ಕಾಲ ಕಾಯಬೇಕು ಎಂದು ತಿಳಿಸಿದ್ದಾರೆ.
Published On - 12:46 pm, Mon, 18 November 19