ವಿಷವೇರಿ ಬಣ್ಣ ಬದಲಾಯಿಸುತ್ತಿದ್ದಾಳೆ ಕಾವೇರಿ; ಕಣ್ಮುಚ್ಚಿದೆಯಾ ಆಡಳಿತ ಮಂಡಳಿ?
ಕೊರೊನಾದಿಂದ ಎಲ್ಲ ಕಾರ್ಯಚಟುವಟಿಕೆ ನಿಂತಿತ್ತು. ಹೀಗಾಗಿ, ನೀರು ಮಲೀನಗೊಳ್ಳದೆ ತಿಳಿಯಾಗಿತ್ತು. ಆದರೆ, ಈಗ ಮತ್ತೆ ಕಾವೇರಿ ಒಡಲನ್ನು ಶುಂಠಿ ಶುದ್ಧೀಕರಣ ಮಾಡಿದ ನೀರು ಸೇರಿಕೊಳ್ಳುತ್ತಿದೆ.
ಕೊಡಗು: ಇಲ್ಲಿನ ಶುಂಠಿ ಶುದ್ಧೀಕರಣ ಘಟಕಗಳಿಂದ ಹೊರ ಬರುವ ವಿಷಯುಕ್ತ ನೀರು ಕಾವೇರಿ ಒಡಲು ಸೇರುತ್ತಿದ್ದು, ನದಿ ಕಲುಷಿತಗೊತ್ತಿದೆ. ಹಗಲು-ರಾತ್ರಿ ಎನ್ನದೇ ಕಾರ್ಖಾನೆಯ ಯಂತ್ರಗಳು ಸದ್ದು ಮಾಡುತ್ತಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಶುದ್ಧೀಕರಣ ಘಟಕಗಳಿಂದ ನೇರವಾಗಿ ಕಾಲುವೆ ಮೂಲಕ ನದಿ ಒಡಲಿಗೆ ವಿಷಯುಕ್ತ ಸೇರ್ಪಡೆಯಾಗುತ್ತಿದೆ. ತವರಿನಲ್ಲೇ ಬಣ್ಣ ಬದಲಿಸಿ ಕಾವೇರಿ ಹರಿಯುತ್ತಿದ್ದು, ಕುಡಿಯುವ ನೀರಿಗೆ ಕಂಟಕ ಎದುರಾಗುವ ಆತಂಕ ಕಾಡಿದೆ. ಕೊರೊನಾದಿಂದ ಎಲ್ಲ ಕಾರ್ಯಚಟುವಟಿಕೆ ನಿಂತಿತ್ತು. ಹೀಗಾಗಿ, ನೀರು ಮಲೀನಗೊಳ್ಳದೆ ತಿಳಿಯಾಗಿತ್ತು. ಆದರೆ, ಈಗ ಮತ್ತೆ ಕಾವೇರಿ ಒಡಲನ್ನು ಶುಂಠಿ ಶುದ್ಧೀಕರಣ ಮಾಡಿದ ನೀರು ಸೇರಿಕೊಳ್ಳುತ್ತಿದೆ.
ಬೇಸಿಗೆ ಸಮೀಪಿಸಿದ ಕಾರಣ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಇಂತಹ ವೇಳೆಯಲ್ಲಿ ಇರೋ ನೀರಿಗೂ ವಿಷ ಸೇರ್ಪಡೆ ಆಗುತ್ತಾ ಇದೆ. ಕೊಡಗಿನ ಕುಶಾಲನಗರ, ಶಿರಂಗಾಲ, ಮೈಸೂರಿನ ಕೊಪ್ಪ ಮೊದಲಾದ ಪ್ರದೇಶಗಳಲ್ಲಿ 30 ಕ್ಕೂ ಹೆಚ್ಚು ಶುಂಠಿ ಶುದ್ಧೀಕರಣ ಘಟಕಗಳು ತಲೆ ಎತ್ತಿವೆ. ಪ್ರತಿನಿತ್ಯ ಇಲ್ಲಿ ಮೂರು ಸಾವಿರದಿಂದ ಎಂಟು ಸಾವಿರ ಚೀಲ ಶುಂಠಿಯನ್ನು ಸ್ವಚ್ಛ ಮಾಡಲಾಗುತ್ತಿದೆ.
ಶುಂಠಿ ಬೆಳೆಗೆ ಹಾಕುವ DAP, MOP, ಯೂರಿಯಾದಂಥ ಗೊಬ್ಬರಗಳು, Ecalex, Karate, Milestones ನಂತಹ ವಿಷಕಾರಿ ರಾಸಾಯನಿಕಗಳು ಕಾವೇರಿ ನದಿ ಸೇರುತ್ತಿದೆ. ನದಿ ತಟದ ಶುದ್ಧೀಕರಣ ಘಟಕಗಳಲ್ಲಿ ಶುಂಠಿಯನ್ನು ತೊಳೆದ ಬಳಿಕ ರಾಸಾಯನಿಕ ಗುಣವುಳ್ಳ ನೀರನ್ನು ನೇರವಾಗಿ ನದಿಗೆ ಹರಿಬಿಡಲಾಗುತ್ತಿದೆ. ಹೊಳೆಯಂತೆ ಹರಿಯುವ ವಿಷಯುಕ್ತ ನೀರು ಕಾವೇರಿಯನ್ನು ಕಲುಶಿತ ಮಾಡುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಸ್ಥಳೀಯ ಆಡಳಿತ ಮಾತ್ರ ಇಂತಹ ಶುದ್ಧೀಕರಣ ಘಟಕಗಳ ಮೇಲೆ ಕ್ರಮಕ್ಕೆ ಮುಂದಾಗದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕೊಡಗು ತೋಟದಲ್ಲಿ ಮತ್ತೊಂದು ಹೆಬ್ಬಾವು ಪತ್ತೆ, ಸೀದಾ ಅರಣ್ಯಕ್ಕೆ ಶಿಫ್ಟ್
Published On - 1:56 pm, Wed, 9 December 20