AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನಗೆ ಕಚ್ಚಿದ ಹಾವನ್ನೇ ಕಚ್ಚಿ ಸಾಯಿಸಿ, ತಾನೂ ಮಸಣ ಸೇರಿದ.. ಎಲ್ಲಿ?

ಹಾವಿನ ಜೊತೆ ಚೆಲ್ಲಾಟವಾಡಲು ಹೋಗಿ ವ್ಯಕ್ತಿ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದಲ್ಲಿ ನಡೆದಿದೆ.

ತನಗೆ ಕಚ್ಚಿದ ಹಾವನ್ನೇ ಕಚ್ಚಿ ಸಾಯಿಸಿ, ತಾನೂ ಮಸಣ ಸೇರಿದ.. ಎಲ್ಲಿ?
ಸಿದ್ದಪ್ಪ ತಳವಾರ
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on: Dec 09, 2020 | 2:52 PM

Share

ಹುಬ್ಬಳ್ಳಿ: ಹಾವು.. ಈ ಹೆಸರು ಕೇಳಿದ್ರೇನೆ ಭಯ ಆಗುತ್ತೆ. ಆದ್ರೆ ಕೆಲವರು ಹಾವನ್ನು ಜೊತೆಯಲ್ಲಿಟ್ಟುಕೊಂಡೆ ತಮ್ಮ ಒಂದೊತ್ತಿನ ಊಟಕ್ಕೆ ದುಡಿಮೆ ಮಾಡ್ಕೊಳ್ಳುತ್ತಾರೆ. ಅವರನ್ನ ಹಾವಾಡಿಗ ಅಂತಾರೆ. ಹಾವಾಡಿಗರಿಗೆ ಹಾವನ್ನು ಪಳಗಿಸುವ ಎಲ್ಲಾ ಟೆಕ್ನಿಕ್ಸ್ ಗೊತ್ತಿರುತ್ತೆ. ಹಾಗಾಗಿ ಅವರು ಹಾವಿನ ಜೊತೆ ಆಟ ಆಟ್ತಾರೆ.. ಆಡುಸ್ತಾರೆ. ಅದಕ್ಕೆ ಬ್ರಿಟಿಷರು ಭಾರತ ಅಂದ್ರೆ Land of snake charmers ಎಂದು ಅವರು ನಮ್ಮ ದೇಶವನ್ನು ಆಳುತ್ತಿದ್ದ ಕಾಲದಲ್ಲಿ ಲೇವಡಿ ಮಾಡಿದ್ದರು.

ಮುಂದುವರಿದ ಇಂದಿನ ಸೆಲ್ಫಿ ಯುಗದಲ್ಲಿ  ಹಾವನ್ನು ಹಿಡಿದು ಫೋಟೋಗೆ ಫೋಸ್ ಕೊಡುತ್ತಾ ಸೆಲ್ಫಿ ತೆಗೆಸಿಕೊಳ್ಳುವ ಸಾಮಾನ್ಯ ಆಸೆ ಜನರಿಗೆ. ಇಲ್ಲೊಬ್ಬ ಭೂಪ ಹಾವಿನ ಜೊತೆ ಸರಸ ಆಡಲು ಹೋಗಿ ಮಸಣ ಸೇರಿದ್ದಾನೆ ಎಂಬುದು ಈಗಿನ ಸುದ್ದಿ. ಈ ಭೂಪ ಒಂದು ಹೆಜ್ಜೆ ಮುಂದೆ ಹೋಗಿ ಹಾವಿನ ಜೊತೆ ಚೆಲ್ಲಾಟವಾಡಲು ಹೋಗಿ ಮೃತಪಟ್ಟಿದ್ದಾನೆ. ಸಿದ್ದಪ್ಪ ತಳವಾರ(45) ಮೃತ ವ್ಯಕ್ತಿ.

ಚಟವೇ ಚಟ್ಟಕ್ಕೆ ದಾರಿಯಾಯ್ತು.. ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದ ನಿವಾಸಿ ಸಿದ್ದಪ್ಪ ತಳವಾರ್​ಗೆ ಹಾವುಗಳೊಂದಿಗೆ ಆಟವಾಡುವ ಹುಚ್ಚಿತ್ತು. ಎಲ್ಲೇ ಹಾವುಗಳು ಕಂಡರೂ ಅವುಗಳನ್ನು ಹಿಡಿದು ಆಟವಾಡುತ್ತಿದ್ದ. ಈ ಬಾರಿ ಸಹ ಅದೇ ರೀತಿ ಕಣ್ಣಿಗೆ ಬಿದ್ದ ಹಾವನ್ನು ಹಿಡಿದು ಆಟವಾಡಲು ಹೋಗಿದ್ದಾನೆ.

ವಿಪರ್ಯಾಸವೆಂದ್ರೆ ಈ ಬಾರಿ ಹಾವು ಯಮನ ರೂಪದಲ್ಲಿ ಸಿದ್ದಪ್ಪನ ಕುತ್ತಿಗೆ ಬಿಗಿದಿದೆ. ರೊಚ್ಚಿಗೆದ್ದ ಹಾವು ಸಿದ್ದಪ್ಪನನ್ನು ಕಚ್ಚಿದೆ. ಬಳಿಕ ಕೋಪಗೊಂಡ ವ್ಯಕ್ತಿ ತಾನೇ ಹಾವನ್ನು ಕೊಂದು ಹಾಕಿದ್ದಾನೆ. ಬಳಿಕ ಹಾವಿನ ವಿಷ ದೇಹಕ್ಕೆ ಏರಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಲಘಟಗಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಹಾವುಗಳನ್ನು ಹಿಡಿದು ಕಾಡಿಗೆ ಬಿಡ್ತಿದ್ದ.. ಆದರೆ ತನಗೆ ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ..

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ