ಕೆಮ್ಮಣ್ಣುಗುಂಡಿ ಪ್ರವಾಸ: ಬಿಡುವಿಲ್ಲದ ಕೆಲಸಕ್ಕೆ ಬ್ರೇಕ್ ಹಾಕಿ ಕೆಮ್ಮಣ್ಣುಗುಂಡಿಯತ್ತ ಹೆಜ್ಜೆ ಹಾಕಿ

|

Updated on: Apr 30, 2024 | 2:48 PM

ಕರ್ನಾಟಕದ ಎಲ್ಲೆಲ್ಲೂ ಶಾಖದ ಅಲೆ, ಬಿಸಿಲ ಬೇಗೆಯಿಂದ ನೀವು ಸ್ವಲ್ಪ ಬಿಡುವು ಪಡೆಯಬೇಕು, ಈ ಬೇಸಿಗೆಯಲ್ಲಿ ಎಲ್ಲಿಗೆ ಹೋಗೋದು ಎನ್ನುವ ಆಲೋಚನೆ ಮಾಡುತ್ತಿದ್ದರೆ ಕೆಮ್ಮಣ್ಣುಗುಂಡಿ ಬೆಸ್ಟ್​ ಪ್ಲೇಸ್​ ಎಂದೇ ಹೇಳಬಹುದು.

ಕೆಮ್ಮಣ್ಣುಗುಂಡಿ ಪ್ರವಾಸ: ಬಿಡುವಿಲ್ಲದ ಕೆಲಸಕ್ಕೆ ಬ್ರೇಕ್ ಹಾಕಿ ಕೆಮ್ಮಣ್ಣುಗುಂಡಿಯತ್ತ ಹೆಜ್ಜೆ ಹಾಕಿ
ಕೆಮ್ಮಣ್ಣುಗುಂಡಿ
Image Credit source: Chikmagalur Tourism
Follow us on

ಕರ್ನಾಟಕ ಭಾಗದ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ಬರುವ ಅನೇಕ ಪ್ರವಾಸಿ ಧಾಮಗಳ ಪೈಕಿ ಕೆಮ್ಮಣ್ಣುಗುಂಡಿ(Kemmannu Gundi) ಕೂಡ ಒಂದು. ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನಲ್ಲಿರುವ ಈ ಸುಂದರ ಗಿರಿಧಾಮವು ಕರ್ನಾಟಕದಲ್ಲಿ ಕಂಡುಬರುವ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಚಿಕ್ಕಮಗಳೂರಿನಿಂದ ಕೆಮ್ಮಣ್ಣುಗುಂಡಿಗೆ ಸುಮಾರು 61 ಕಿಲೋ ಮೀಟರ್ ದೂರದ ಪ್ರಯಾಣ ಇದಾಗಿದೆ.

ತೋಟಗಾರಿಕಾ ಇಲಾಖೆ ನಿರ್ವಹಿಸುತ್ತಿರುವ ಗೆಸ್ಟ್ ಹೌಸ್ ಆವರಣದಲ್ಲಿ ರಾಕ್ ಗಾರ್ಡನ್ ಸಹ ಇದೆ. ಹಾಗೆಯೇ, ಒಂದು ಪ್ರಸಿದ್ಧ ಕಲ್ಲತ್ತಗಿರಿ ಜಲಪಾತ ಅಲ್ಲಿಯೇ 10 ಕಿಲೋ ಮೀಟರ್ ದೂರದಲ್ಲಿದೆ. ಅಲ್ಲಿ 122 ಮೀಟರ್ ಎತ್ತರದಿಂದ ಕೆಳಕ್ಕೆ ಬೀಳುವ ನೀರು ನೋಡಲು ಸುಂದರವಾಗಿ ಕಾಣುತ್ತದೆ. ನೀವು 8 ಕಿಲೋ ಮೀಟರ್ ದೂರದಲ್ಲಿರುವ ಹೆಬ್ಬೆ ಜಲಪಾತಕ್ಕೂ ಭೇಟಿ ನೀಡಬಹುದು.
ಕೆಮ್ಮಣ್ಣುಗುಂಡಿಯ ಆಕರ್ಷಣೆಗಳು

ಝಡ್ ಪಾಯಿಂಟ್‌ನಿಂದ ವೀಕ್ಷಣೆ: ಕೆಮ್ಮಣ್ಣುಗುಂಡಿಯ ಪ್ರಮುಖ ಆಕರ್ಷಣೆಯಾಗಿದ್ದು, ನಿಮ್ಮ ಕಣ್ಣುಗಳು ತಲುಪುವಷ್ಟು ದೂರದವರೆಗೂ ಪಶ್ಚಿಮ ಘಟ್ಟಗಳ ನಯನ ಮನೋಹರ ನೋಟವನ್ನು ನೀಡುತ್ತದೆ.
ಶಾಂತಿ ಜಲಪಾತ: ಝಡ್ ಪಾಯಿಂಟ್‌ನಿಂದ 1 ಕಿ.ಮೀ. ದೂರದಲ್ಲಿದ್ದು ಚಾರಣದ ಮೂಲಕ ತಲುಪಬಹುದಾಗಿದೆ.
ಹೆಬ್ಬೆ ಜಲಪಾತ: ಕೆಮ್ಮಣ್ಣುಗುಂಡಿಯಿಂದ 8 ಕಿ.ಮೀ ದೂರದಲ್ಲಿ, ಚಾರಣದ ಮೂಲಕ ಅಥವಾ 4×4 ಜೀಪ್‌ಗಳ ಮೂಲಕ ತಲುಪಬಹುದಾಗಿದೆ.

ಮತ್ತಷ್ಟು ಓದಿ: ಬೇಸಿಗೆಯಲ್ಲೂ ಜನರ ಕೈಬೀಸಿ ಕರೆಯುವ ಕಾಫಿನಾಡಿನ ಸ್ವರ್ಗ ಮುಳ್ಳಯ್ಯನಗಿರಿ, ರೈಲಿನಲ್ಲಿ ಹೋಗುವುದು ಹೇಗೆ?

ಬಂಡೆ ಉದ್ಯಾನ
ಗುಲಾಬಿ ಉದ್ಯಾನ

ಕಲ್ಲತ್ತಿಗಿರಿ ಜಲಪಾತ: ಕಲ್ಲತ್ತಿಗಿರಿ (ಕಲ್ಹತ್ತಿ) ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಒಂದು ಸಣ್ಣ, ಸುಂದರ ದೇವಾಲಯ ಮತ್ತು ಜಲಪಾತವಾಗಿದೆ. ಕಲ್ಲತ್ತಿಗಿರಿ ಜಲಪಾತವು ಕೆಮ್ಮಣ್ಣುಗುಂಡಿಗೆ ಹೋಗುವ ದಾರಿಯಲ್ಲಿದೆ. ಕೆಮ್ಮಣ್ಣುಗುಂಡಿಗೆ ಹೋಗುವ ಹೆಚ್ಚಿನ ಪ್ರವಾಸಿಗರು ಕಲ್ಲತ್ತಿಗಿರಿ ಜಲಪಾತಕ್ಕೂ ಭೇಟಿನೀಡುತ್ತಾರೆ. ಜಲಪಾತದ ಹತ್ತಿರ ಶ್ರೀ ವೀರ ಭದ್ರೆಶ್ವರ ಸ್ವಾಮಿ ದೇವಸ್ಥಾನ ಇದೆ.

ಹತ್ತಿರದಲ್ಲಿ ಇನ್ನೇನಿದೆ?: ಮುಲ್ಲಯನಗಿರಿ (68 ಕಿ.ಮೀ), ಭದ್ರಾ ವನ್ಯಜೀವಿ ಅಭಯಾರಣ್ಯ (53 ಕಿ.ಮೀ), ಅಯ್ಯನ ಕೆರೆ (58 ಕಿ.ಮೀ) ಕೆಮ್ಮಣ್ಣುಗುಂಡಿಯೊಂದಿಗೆ ಭೇಟಿ ನೀಡಬಹುದಾದ ಕೆಲವು ಆಕರ್ಷಣೆಗಳಾಗಿವೆ.

ಕೆಮ್ಮಣ್ಣುಗುಂಡಿಗೆ ಭೇಟಿ ನೀಡುವುದು ಹೇಗೆ? ಕೆಮ್ಮಣ್ಣುಗುಂಡಿ ಬೆಂಗಳೂರಿನಿಂದ 250 ಕಿ.ಮೀ ಮತ್ತು ಚಿಕ್ಕಮಗಳೂರಿನಿಂದ (60 ಕಿ.ಮೀ) ದೂರದಲ್ಲಿದೆ.

ಬೀರೂರು ಜಂಕ್ಷನ್ ಹತ್ತಿರದ ರೈಲ್ವೆ ನಿಲ್ದಾಣ (33 ಕಿ.ಮೀ) ಮತ್ತು ಬಸ್ ನಿಲ್ದಾಣವಾಗಿದೆ. ಕೆಮ್ಮಣ್ಣುಗುಂಡಿಗೆ ಭೇಟಿ ನೀಡಲು ಹತ್ತಿರದ ನಗರಗಳಾದ ಬೀರೂರು, ಶಿವಮೊಗ್ಗ (72 ಕಿ.ಮೀ), ಭದ್ರಾವತಿ (51 ಕಿ.ಮೀ) ಅಥವಾ ಚಿಕ್ಕಮಗಳೂರಿನಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದಾಗಿದೆ.

ವಸತಿ: ತೋಟಗಾರಿಕೆ ಇಲಾಖೆ ಕೆಮ್ಮಣ್ಣುಗುಂಡಿಯಲ್ಲಿ ಅತಿಥಿಗೃಹವನ್ನು ನಡೆಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವಾರು ಐಷಾರಾಮಿ ರೆಸಾರ್ಟ್‌ಗಳು ಮತ್ತು ಹೋಂ ಸ್ಟೇಗಳು ಕಾರ್ಯನಿರ್ವಹಿಸುತ್ತವೆ.
ಹಿಂದೆ ಮೈಸೂರು ಸಂಸ್ಥಾನದ ನಾಲ್ಕನೆಯ ಕೃಷ್ಣರಾಜ ವಡೇಯರ್ ಅವರ ಬೇಸಿಗೆಯ ರಾಜಧಾನಿಯಾಗಿ ಕೆಮ್ಮಣ್ಣುಗುಂಡಿ ಹೆಸರುವಾಸಿಯಾಗಿತ್ತು. ಈ ಕಾರಣದಿಂದಾಗಿ ಈ ಗಿರಿಧಾಮವನ್ನು ಶ್ರೀಕೃಷ್ಣರಾಜೇಂದ್ರ ಗಿರಿಧಾಮ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

 

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:46 pm, Tue, 30 April 24