ಬೆಂಗಳೂರು, ಜೂನ್ 28: ಮಾಜಿ ಸಚಿವ ಹೆಚ್ಡಿ ರೇವಣ್ಣ(HD Revanna) ವಿರುದ್ಧದ ಸಂತ್ರಸ್ತೆ ಕಿಡ್ನ್ಯಾಪ್ ಪ್ರಕರಣದ (Kidnap Case) ತನಿಖೆ ಅಂತಿಮ ಹಂತಕ್ಕೆ ತಲುಪ್ಪಿದ್ದು, ಈ ಸಂಬಂಧ ಎಸ್ಐಟಿ ಅಧಿಕಾರಿಗಳು ಚಾರ್ಜ್ ಶೀಟ್ ತಯಾರಿ ನಡೆಸಿದೆ. ಸಂತ್ರಸ್ತೆ ಕಿಡ್ನ್ಯಾಪ್ ಸಂಬಂಧ ರೇವಣ್ಣ ಸೇರಿ ಎಂಟು ಜನರನ್ನು ಎಸ್ಐಟಿ ಬಂಧಿಸಿತ್ತು. ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಬಳಿಕ ಎಸ್ಐಟಿಗೆ ವರ್ಗಾವಣೆ ಮಾಡಲಾಗಿತ್ತು. ಕಳೆದ ಎರಡು ತಿಂಗಳಿನಿಂದ ಅಧಿಕಾರಿಗಳು ತನಿಖೆ ನಡೆಸಿದ್ದರು. ಸದ್ಯ ಅಂತಿಮ ಹಂತಕ್ಕೆ ಬಂದಿದೆ.
ಸದ್ಯ ಪ್ರಕರಣ ಸಂಬಂಧ ಬಹುತೇಕ ತನಿಖೆ ಪೂರ್ಣಗೊಂಡಿದ್ದು, ಸುಮಾರು 25 ಕಡೆ ಸ್ಥಳ ಮಹಜರು ಮಾಡಿದ್ದರು. ಜೊತೆಗೆ ಸಾಕ್ಷಿಗಳ ಹೇಳಿಕೆ, ತಾಂತ್ರಿಕ ಸಾಕ್ಷ್ಯಗಳು, ಡಿಜಿಟಲ್ ಸಾಕ್ಷ್ಯಗಳು ಸಂಗ್ರಹಿಸಲಾಗಿದೆ. ಆ ಮೂಲಕ 100 ಕ್ಕೂ ಹೆಚ್ಚು ಸಾಕ್ಷ್ಯಗಳ ಸಂಗ್ರಹ ಮಾಡಲಾಗಿದೆ.
ಇದನ್ನೂ ಓದಿ: ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಎಚ್ಡಿ ರೇವಣ್ಣಗೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್
ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಎಸ್ಐಟಿ ತಂಡ ಸಿದ್ದತೆ ನಡೆಸಿದೆ. ಇದೇ ಪ್ರಕರಣದಲ್ಲಿ ಭವಾನಿ ರೇವಣ್ಣರನ್ನೂ ವಿಚಾರಣೆ ಮಾಡಲಾಗಿತ್ತು. ಭವಾನಿ ರೇವಣ್ಣ ಬಂಧನಕ್ಕೆ ಎಸ್ಐಟಿ ವಾರೆಂಟ್ ಪಡೆದಿತ್ತು. ಬಳಿಕ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದರು. ಸದ್ಯ ಅವರ ಹೇಳಿಕೆಯನ್ನು ಎಸ್ಐಟಿಯಿಂದ ದಾಖಲಿಸಲಾಗಿದೆ.
ಕಿಡ್ನ್ಯಾಪ್ ಸಂತ್ರಸ್ತೆಯ ದೂರಿನ ಮೇಲೆ ರೇವಣ್ಣ ವಿರುದ್ಧ ಕೇಸ್ ದಾಖಲಾಗಿತ್ತು. 10 ದಿನ ಜೈಲು ಅನುಭವಿಸಿ ಹೆಚ್ಡಿ ರೇವಣ್ಣ ಈಗ ಹೊರ ಬಂದಿದ್ದರು. 3 ದಿನ ಪೊಲೀಸ್ ಕಸ್ಟಡಿ ಮತ್ತು 6 ದಿನ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದರು. ಪತ್ನಿ ಭವಾನಿ ರೇವಣ್ಣ ವಿರುದ್ಧ ಮೈಸೂರು ಜಿಲ್ಲೆ ಕೆ.ಆರ್.ನಗರ ಮಹಿಳೆ ಕಿಡ್ನ್ಯಾಪ್ ಕೇಸ್ ದಾಖಲಾಗಿತ್ತು.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಣ್ತಮ್ಮಾಸ್: ಕ್ವಾರಂಟೈನ್ ಬ್ಯಾರಕ್ನಲ್ಲಿ ರೇವಣ್ಣ ಸನ್ಸ್
ಭವಾನಿ ರೇವಣ್ಣ ಸೂಚನೆ ಮೇರೆಗೆ ಕಾರು ಚಾಲಕ ಅಜಿತ್, ಸಂತ್ರಸ್ತೆಯನ್ನು ಮನೆಯಿಂದ ಕಾರಿನಲ್ಲಿ ಕರೆದೊಯ್ದ ಆರೋಪವಿತ್ತು. ಕಿಡ್ನ್ಯಾಪ್ ಬಗ್ಗೆ K.R.ನಗರ ಠಾಣೆಯಲ್ಲಿ ದೂರು ಸಂತ್ರಸ್ತೆ ಮಗ ದೂರು ನೀಡಿದ್ದರು. ವಿಚಾರಣಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಹೈಕೋರ್ಟ್ ಮೆಟ್ಟಿಲೇರಿದ್ದ ಭವಾನಿಗೆ ಮಧ್ಯಂತರ ಜಾಮೀನು ಸಿಕ್ಕಿತ್ತು. ಆದರೆ, ಕೆ.ಆರ್.ನಗರ ಮತ್ತು ಹಾಸನಕ್ಕೆ ಹೋಗುವಂತಿಲ್ಲ ಅಂತಾ ಷರತ್ತು ವಿಧಿಸಿ ಭವಾನಿಗೆ ಬೇಲ್ ನೀಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:38 pm, Fri, 28 June 24