ಬೆಂಗಳೂರು ಕಿಮ್ಸ್ನಲ್ಲಿ ನಿರ್ಲಕ್ಷ್ಯ, ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಓಡಾಡ್ತಿದ್ದಾರೆ ಸೋಂಕಿತರು
ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಕೊವಿಡ್ ರೂಲ್ಸ್ ಪಾಲನೆಯಾಗುತ್ತಿಲ್ಲ, ಕೊರೊನಾ ಬಗ್ಗೆ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಸೋಂಕಿತರು ಓಡಾಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರು: ಕೊರೊನಾ ಸೋಂಕು ಹೆಚ್ಚಾಗಲು ಕಾರಣ ದೊಡ್ಡ ದೊಡ್ಡ ಹಾಸ್ಪಿಟಲ್ಗಳ ನಿರ್ಲಕ್ಷ್ಯ. ಏಕೆಂದರೆ ಇಲ್ಲೊಂದು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರನ್ನು ಬೇಕಾಬಿಟ್ಟಿಯಾಗಿ ಬಿಟ್ಟಿದ್ದಾರೆ. ಅವರಿಗೆ ಸರಿಯಾಗಿ ಚಿಕಿತ್ಸೆ ಕೊಡುತ್ತಿಲ್ಲ. ಸರಿಯಾದ ವ್ಯವಸ್ಥೆ ಮಾಡಿಲ್ಲ. ಈ ಆಸ್ಪತ್ರೆಯಲ್ಲಿ ಸೋಂಕಿತರ್ಯಾರು ರೋಗಿಗಳ್ಯಾರು ಎಂದು ಗೊತ್ತೇ ಆಗಲ್ಲ.
ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಕೊವಿಡ್ ರೂಲ್ಸ್ ಪಾಲನೆಯಾಗುತ್ತಿಲ್ಲ, ಕೊರೊನಾ ಬಗ್ಗೆ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಸೋಂಕಿತರು ಓಡಾಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿಗಳು ಯಾರು? ಕೊರೊನಾ ಸೋಂಕಿತರು ಯಾರೆಂದು ತಿಳಿಯುವುದೇ ಕಷ್ಟವಾಗಿದೆ.
ಮಹಾಮಾರಿಯ ಭೀಕರತೆ ಬಗ್ಗೆ ತಿಳಿದಿದ್ದರೂ ಆಸ್ಪತ್ರೆ ಸಿಬ್ಬಂದಿಯೇ ಕೊರೊನಾವನ್ನು ನಿರ್ಲಕ್ಷಿಸುತ್ತಿದ್ದಾರೆ. ಕೊರೊನಾ ಸೋಂಕಿತರು ಆಸ್ಪತ್ರೆಯ ಎಲ್ಲ ಕಡೆ ಓಡಾಡುತ್ತಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಯಾವುದೇ ಮಾರ್ಗಸೂಚಿ ಪಾಲಿಸ್ತಿಲ್ಲ. ಸೋಂಕಿತರು ಎಲ್ಲಿ ಹೋಗಬೇಕೆಂದು ಸೂಚನೆಯೇ ಇಲ್ಲ. ಯಾವ ವಾರ್ಡ್‌ಗೆ ಹೋಗಬೇಕು ಎಂಬ ಸ್ಪಷ್ಟ ಮಾಹಿತಿ ಇಲ್ಲ. ಆಸ್ಪತ್ರೆಯ ಸಿಬ್ಬಂದಿಯೂ ಯಾವುದೇ ಸೂಚನೆ ನೀಡುತ್ತಿಲ್ಲ. ಹೀಗಾಗಿ ಕಿಮ್ಸ್‌ನಲ್ಲಿ ಸೋಂಕಿತರು ಎಲ್ಲೆಂದರಲ್ಲಿ ಓಡಾಡ್ತಿದ್ದಾರೆ.
ಇಂತಹ ಸ್ಥಿತಿಯೊಂದು ಕಿಮ್ಸ್ನಲ್ಲಿ ಕಂಡು ಬಂದಿದೆ. ಆದಷ್ಟು ಬೇಗ ಆಸ್ಪತ್ರೆ ಆಡಳಿತ ಮಂಡಳಿ ಈ ಬಗ್ಗೆ ಗಮನಹರಿಸಬೇಕು. ಇಲ್ಲದಿದ್ದರೆ ಕೊರೊನಾ ಮತ್ತಷ್ಟು ಜನರಿಗೆ ಹರಡಬಹುದು.