Milk Price Hike: ಗ್ರಾಹಕರಿಗೆ ಮತ್ತೆ ಶಾಕ್​! ನಂದಿನಿ ಹಾಲು ಮತ್ತು ಮೊಸರಿನ ದರ 3 ರೂ. ಏರಿಕೆ ಮಾಡಿದ ಕೆಎಂ​ಎಫ್​

ನಂದಿನಿ ಪ್ರತಿ ಲೀಟರ್ ಹಾಲು ಮತ್ತು ಮೊಸರಿನ ದರ 3 ರೂಪಾಯಿ ಏರಿಕೆ ಮಾಡಿ ಕೆಎಂಎಫ್ ಆದೇಶ ಹೊರಡಿಸಿದೆ.

Milk Price Hike: ಗ್ರಾಹಕರಿಗೆ ಮತ್ತೆ ಶಾಕ್​! ನಂದಿನಿ ಹಾಲು ಮತ್ತು ಮೊಸರಿನ ದರ 3 ರೂ. ಏರಿಕೆ ಮಾಡಿದ ಕೆಎಂ​ಎಫ್​
ನಂದಿನಿ ಹಾಲು
Follow us
TV9 Web
| Updated By: Digi Tech Desk

Updated on:Nov 14, 2022 | 6:18 PM

ಬೆಂಗಳೂರು: ಶೀಘ್ರದಲ್ಲೇ ನಂದಿನಿ ಹಾಲಿನ (Nandini Milk Price) ದರ ಏರಿಕೆ ಮಾಡುತ್ತೇವೆ ಎಂದು ಕೆಎಂಎಫ್​ (KMF) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (ಅ.31) ರಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಅದರಂತೆ ಈಗ ನಂದಿನಿ ಪ್ರತಿ ಲೀಟರ್ ಹಾಲು ಮತ್ತು ಮೊಸರಿನ ದರ 3 ರೂಪಾಯಿ ಏರಿಕೆ ಮಾಡಿ ಕೆಎಂಎಫ್ ಆದೇಶ ಹೊರಡಿಸಿದೆ. ಈ ಹೊಸ ದರ ಇಂದು (ನ.14) ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ. ಇನ್ನು ಹೆಚ್ಚಳ ಮಾಡಲಾದ ದರವನ್ನು, ಪ್ರೋತ್ಸಾಹ ಧನದ ರೂಪದಲ್ಲಿ ರೈತರಿಗೆ ವರ್ಗಾವಣೆ ಮಾಡಲಾಗುವುದು ಎಂದು ಕೆಎಂಫ್​​ ತಿಳಿಸಿದೆ.

ಯಾವ ಹಾಲಿಗೆ ಎಷ್ಟು ದರ ಇಲ್ಲಿದೆ ವಿವರ

  1. ಟೋನ್ಡ್ ಹಾಲು 37 ರೂ ರಿಂದ 40 ರೂಗೆ ಏರಿಕೆ
  2. ಹೋಮೋಜಿನೈಸ್ಡ್ ಹಾಲು 38 ರೂ ರಿಂದ 41 ರೂಗೆ ಏರಿಕೆ
  3. ಹೊಮೊಜಿನೈಸ್ಡ್ ಹಸುವಿನ ಹಾಲು 42 ರೂ ರಿಂದ 45 ರೂಗೆ ಏರಿಕೆ
  4. ಸ್ಪೆಷಲ್ ಹಾಲು 43 ರೂ ರಿಂದ 46 ರೂಗೆ ಏರಿಕೆ
  5. ಶುಭಂ ಹಾಲು 43 ರೂ ರಿಂದ 46 ರೂಗೆ ಏರಿಕೆ
  6. ಹೊಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು 44 ರೂ ರಿಂದ 47 ರೂಗೆ ಏರಿಕೆ
  7. ಸಮೃದ್ಧಿ ಹಾಲು 48 ರೂ ರಿಂದ 51 ರೂಗೆ ಏರಿಕೆ
  8. ಸಂತೃಪ್ತಿ ಹಾಲು 50 ರೂ ರಿಂದ 53 ರೂಗೆ ಏರಿಕೆ
  9. ಡಬಲ್ ಟೋನ್ಡ್ ಹಾಲು 36 ರೂ ರಿಂದ 39 ರೂಗೆ ಏರಿಕೆ
  10. ಮೊಸರು ಪ್ರತಿ ಕೆಜಿಗೆ 45 ರೂ ರಿಂದ 48 ರೂಗೆ ಏರಿಕೆ

ಸದ್ಯ ಇರುವ ಬೇರೆ ಬೇರೆ ಹಾಲುಗಳ ದರ

  1. ನಂದಿನಿ 37 ರೂ
  2. ದೊಡ್ಲ 44 ರೂ
  3. ಜೆರ್ಸಿ 44 ರೂ
  4. ಹೆರಿಟೇಜ್ 48 ರೂ
  5. ತಿರುಮಲ 48 ರೂ
  6. ಗೋವರ್ಧನ್ 46 ರೂ
  7. ಆರೋಗ್ಯ 50 ರೂ

ಹಾಲಿನ ದರ ಏಕೆ ಏರಿಸಲಾಯಿತು

ಹಾಲಿನ ದರ ಪರಿಷ್ಕರಿಸುವಂತೆ ರಾಜ್ಯದ 16ಹಾಲು ಒಕ್ಕೂಟಗಳು ಕೆಎಂಫ್​ಗೆ ಮನವಿ ಸಲ್ಲಿಸಿದ್ದವು. ದರ ಏರಿಕೆಯ ಹಣವನ್ನು ರೈತರಿಗೆ ನೀಡುವುದಾಗಿ ಹೇಳಿದ್ದವು. ಇದರಿಂದ ಕೆಎಂಎಫ್​ ಮತ್ತು ಸರ್ಕಾರದ ಮೇಲೆ ಒತ್ತಡ ಬಿದ್ದಿತ್ತು. ಈ ಸಂಬಂಧ ವಿಧಾನಪರಿಷತ್​ನಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್  ಮುಖ್ಯಮಂತ್ರಿಗಳ ಗಮನಕ್ಕೆ ತಂದು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದರು.

ಹಾಲಿನ ದರ ಹೆಚ್ಚಳ ಮಾಡುವಂತೆ ಕಳೆದ 8 ತಿಂಗಳಿನಿಂದ ಕೆಎಂಎಫ್‌ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಿದೆ. ಆದರೆ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಕೆಎಂಎಫ್  ರೈತರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿ,  ರಾಜ್ಯ ಸರ್ಕಾರದ ಅನುಮೋದನೆ ಇಲ್ಲದೆ ಹಾಲಿನ ಬೆಲೆಯನ್ನು ಒಂದು ಲೀಟರ್​ಗೆ 3 ರೂಪಾಯಿ ಹೆಚ್ಚಿಸಿದೆ

ಈ ಹಿಂದೆ ಬೆಂಗಳೂರಿನಲ್ಲಿ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆದ ಕೆಎಂಎಫ್‌ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಕೆಎಂಎಫ್‌ನ ಎಲ್ಲ 14 ಜಿಲ್ಲಾ ಹಾಲು ಒಕ್ಕೂಟಗಳು ಹಾಲಿನ ದರ ಹೆಚ್ಚಳ ಮಾಡುವುದಕ್ಕೆ ಬೆಂಬಲ ವ್ಯಕ್ತಪಡಿಸಿದ್ದವು.

ಕೆಎಂಎಫ್ ಜಾರಿಗೊಳಿಸಿರುವ ಹಲವು ಯೋಜನೆಗಳಿಗೆ ಸರ್ಕಾರದ ಆರ್ಥಿಕ ನೆರವು ಇದೆ. ಹೀಗಾಗಿ ಬೆಲೆ ಹೆಚ್ಚಳ ಸೇರಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ರಾಜ್ಯ ಸರ್ಕಾರದ ಅನುಮೋದನೆ ಪಡೆದುಕೊಳ್ಳುತ್ತಿತ್ತು. ಆದರೆ ಈ ಬಾರಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಇರುವ ಅಧಿಕಾರವನ್ನು ಬಳಸಿಕೊಂಡು ದರ ಹೆಚ್ಚಳದ ಆದೇಶ ಮಾಡಬೇಕು ಎಂದು ಒಕ್ಕೂಟಗಳು ಅಧ್ಯಕ್ಷರ ಮೇಲೆ ಒತ್ತಡ ಹೇರಿದ್ದವು.

ಈ ಬಗ್ಗೆ ಅ.31 ರಂದು ಶೀಘ್ರದಲ್ಲೇ ನಂದಿನಿ ಹಾಲಿನ ದರ ಏರಿಕೆ ಮಾಡುತ್ತೇವೆ ಎಂದು ಕೆಎಂಎಫ್​ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ  ಕಿತ್ತೂರು ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು. ರಾಜ್ಯದ 16ಹಾಲು ಒಕ್ಕೂಟಗಳು ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸಿವೆ. ಇನ್ನೂ ಗ್ರಾಹಕರಿಗೆ ಹೆಚ್ಚು ಮಾಡಿದ ಹಣವನ್ನ ರೈತರಿಗೆ ಕೊಡಲು ತೀರ್ಮಾನ ಮಾಡಿದ್ದೇವೆ. ಅತೀ ಶೀಘ್ರದಲ್ಲಿ ಮೂರು ರೂಪಾಯಿ ಹಾಲಿನ ದರ ಏರಿಸುತ್ತೇವೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:28 pm, Mon, 14 November 22