ನಿರ್ಜೀವವಾದ ಜೀವನದಿ: ಸಂಪೂರ್ಣ ಬತ್ತಿ ಬರಡಾಗುತ್ತಿರೋ ಕಾವೇರಿ ಒಡಲು, ಜನರಲ್ಲಿ ಆತಂಕ
ಕಾವೇರಿ ನದಿ ಬತ್ತಿ ಹೋಗಿರುವುದರಿಂದ ನದಿಯನ್ನೇ ಅವಲಂಭಿಸಿರುವ ಕಾಫಿ ಕೃಷಿಕರು ಇತರ ರೈತರು ಇದೀಗ ಕಂಗಾಲಾಗಿದ್ದಾರೆ. ಈಗ ನೀರಿಲ್ಲದೇ ಇರುವುದರಿಂದ ಮುಂದಿನ ವರ್ಷ ಕಾಫಿ ಬೆಳೆ ಕೈಗೇ ಸಿಗುವುದಿಲ್ಲ. ಏಪ್ರಿಲ್ ತಿಂಗಳ ಆರಂಭದಲ್ಲೇ ಜೀವನ ಈ ಸ್ಥಿತಿಗೆ ತಲುಪಿದರೆ ಇನ್ನು ಏಪ್ರಿಲ್ ಅಂತ್ಯದವೇಳೆಗೆ ಸ್ಥಿತಿ ಏನಾಗಬಹುದು ಎಂಬುದು ಆತಂಕಕಾರಿಯಾಗಿದೆ.
ಕೊಡಗು, ಏಪ್ರಿಲ್ 09: ನಾಡಿನ ಜೀವನದಿ ಕಾವೇರಿ (Kaveri River) ನಿರ್ಜೀವವಾಗಿದೆ. ಕೊಡಗು ಜಿಲ್ಲೆಯಲ್ಲಿ ತನ್ನ ಹರಿಯುವಿಕೆಯನ್ನೇ ನಿಲ್ಲಿಸಿದೆ. ಸಂಪೂರ್ಣ ಬತ್ತಿ ಬರಡಾಗಿರೋ ಕಾವೇರಿ ಒಡಲು ಮುಂದಿನ ದಿನಗಳಲ್ಲಿ ಮತ್ತಷ್ಟು ಭೀಕರ ಬರಗಾಲದ ಮುನ್ಸೂಚನೆ ನೀಡಿದೆ. ಕಾವೇರಿ ಬರಗಾಲದ ಬೆಂಗಾಡಲ್ಲಿ ಬೆಂದು ಅಕ್ಷರಶಃ ಬರಡಾಗಿ ಕುಳಿತಿದೆ. ಏಪ್ರಿಲ್, ಮೇ ತಿಂಗಳಲ್ಲಿ ಸಾಕಷ್ಟು ಸಮೃದ್ಧವಾಗಿಯೇ ಹರಿಯುತ್ತಿದ್ದ ಕಾವೇರಿ. ಈ ವರ್ಷ ನೀರೇ ಇಲ್ಲ. ಅಂತರ್ಜಲ ಕುಸಿತದ ಪರಿಣಾಮ ಕಾವೇರಿ ಹರಿಯುವಿಕೆ ನಿಂತು ಹೋಗಿದೆ. ಈ ನದಿಗೆ ಇದುವರೆಗೂ ಇಂತಹ ಸ್ಥಿತಿ ಬಂದಿರಲಿಲ್ಲ ಎನ್ನುತ್ತಾರೆ ಸ್ಥಳೀಯರು.
ಏಪ್ರಿಲ್, ಮೇ ತಿಂಗಳಲ್ಲಿ ನಿರಿನ ಹರಿವು ಕಡಿಯಾದಾಗ ಮೊಣಕಾಲುದ್ದದ ನೀರಿನಲ್ಲಿ ಜನರು ನಡೆದು ನದಿ ದಾಟುತ್ತಿದ್ದರು. ನದಿಯಲ್ಲಿ ಮಿಂದೆದ್ದು ಖುಷಿ ಪಡ್ತಾ ಇದ್ದರು. ಆದರೆ ಈ ವರ್ಷ ಮಾತ್ರ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ನಿಂತು ಹೋಗಿದೆ. ಕೆಲವು ಕಡೆ ತಗ್ಗು ಪ್ರದೇಶಗಳಲ್ಲಿ ಮಾತ್ರ ನೀರು ನಿಂತಿದೆ. ಕುಶಾಲನಗರ ತಾಲ್ಲೂಕಿನ ರಂಗ ಸಮುದ್ರ, ತೆಪ್ಪದ ಕಂಡಿ, ದುಬಾರೆ ವ್ಯಾಪ್ತಿಯಲ್ಲಿ ಕಾವೇರಿ ಸ್ತಬ್ಧವಾಗಿದೆ.
ಇದನ್ನೂ ಓದಿ: ಬತ್ತಲಾರಂಭಿಸಿದ ಜೀವನದಿ; ಕಾವೇರಿ ತವರು ಕೊಡಗಿನಲ್ಲೇ ಕುಡಿಯುವ ನೀರಿಗೆ ಹಾಹಾಕಾರ
ಈಗಿನ್ನೂ ಏಪ್ರಿಲ್ ತಿಂಗಳ ಮೊದಲವಾರ. ಈಗಲೇ ನದಿ ನೀರು ಸಂಪೂರ್ಣ ಬತ್ತಿಹೋಗಿದೆ. ಇನ್ನು ಮೇ ಅಂತ್ಯದವೇಳೆ ಸ್ಥಿತಿ ಏನು ಎಂಬುದು ಎಲ್ಲರ ಆತಂಕ. ಕಳೆದ ವರ್ಷ ಜಿಲ್ಲೆಯಲ್ಲಿ ಶೇಕಡಾ 60 ರಷ್ಟು ಮಳೆ ಕೊರತೆಯಾಗಿತ್ತು. ಹಾಗಾಗಿ ಅಂತರ್ಜಲ ಎಲ್ಲಿಯೂ ವೃದ್ಧಿಯಾಗಲಿಲ್ಲ. ಪರಿಣಾಮ ಬೇಸಗೆಗೆ ಮೊದಲೆ ಸಣ್ಣಪುಟ್ಟ ನದಿ ತೊರೆಗಳು, ನೀರಿನ ಸೆಲೆಗಳು ಬತ್ತಿಬಹೋದವು. ಅಲ್ಲದೆ ಸಾಮಾನ್ಯವಾಗಿ ಜನವರಿಯಿಂದ ಮೇ ವರೆಗೆ ಬೇಸಗೆಯಲ್ಲೂ ಒಂದಷ್ಟು ಮಳೆಯಾಗುತ್ತದೆ.
ಹಾಗಾಗಿ ನದಿಗಳು ಬತ್ತುವುದಿಲ್ಲ. ಆದರೆ ಈ ಬಾರಿ ಗಾಯದ ಮೇಲೆ ಬರೆ ಎಳೆದಂತೆ ಜನವರಿಯಿಂದ ಇದುವರೆಗೂ ಜಿಲ್ಲೆಯ ಬಹುತೇಕ ಕಡೆ ಮಳೆಯೇ ಆಗಿಲ್ಲ. ಹಾಗಾಗಿ ಕಾವೇರಿಯ ನೀರಿನ ಮೂಲಗಳಾದ ಸಣ್ಣಪುಟ್ಟ ನದಿತೊರೆಗಳು ನೀರಿನ ಸೆಲೆಗಳು ಬತ್ತಿಹೋದವು. ಇದರಿಂದಾಗಿಯೇ ಇಂದು ಕಾವೇರಿ ಈ ಸ್ಥಿತಿಗೆ ತಲುಪಿದೆ.
ಇದನ್ನೂ ಓದಿ: Karnataka Rain: ಕೊಡಗು ಸೇರಿ ಕೆಲವೆಡೆ ಸುರಿದ ಮಳೆ, ಮುಂದಿನ 2 ದಿನ ರಾಜ್ಯದಲ್ಲಿ ಮಳೆ ಮುನ್ಸೂಚನೆ
ಕಾವೇರಿ ನದಿ ಬತ್ತಿ ಹೋಗಿರುವುದರಿಂದ ನದಿಯನ್ನೇ ಅವಲಂಭಿಸಿರುವ ಕಾಫಿ ಕೃಷಿಕರು ಇತರ ರೈತರು ಇದೀಗ ಕಂಗಾಲಾಗಿದ್ದಾರೆ. ಈಗ ನೀರಿಲ್ಲದೇ ಇರುವುದರಿಂದ ಮುಂದಿನ ವರ್ಷ ಕಾಫಿ ಬೆಳೆ ಕೈಗೇ ಸಿಗುವುದಿಲ್ಲ. ಏಪ್ರಿಲ್ ತಿಂಗಳ ಆರಂಭದಲ್ಲೇ ಜೀವನ ಈ ಸ್ಥಿತಿಗೆ ತಲುಪಿದರೆ ಇನ್ನು ಏಪ್ರಿಲ್ ಅಂತ್ಯದವೇಳೆಗೆ ಸ್ಥಿತಿ ಏನಾಗಬಹುದು ಎಂಬುದು ಆತಂಕಕಾರಿಯಾಗಿದೆ. ಕಾವೇರಿ ಸಂಪೂರ್ಣ ಬತ್ತಿ ಹೋಗಿ ದುಬಾರೆ ಶಿಬಿರದ ಆನೆಗಳಿಗೆ ಒಂದು ಹನಿ ನೀರೂ ಇಲ್ಲದಾಗುವ ಪರಿಸ್ಥಿತಿ ಬರುವ ಆತಂಕ ಎದುರಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.