ಕುಶಾಲನಗರ: ಅಪ್ರಾಪ್ತ ವಯಸ್ಸಿನ ಮಗಳಿಗೆ ವಾಹನ ಚಲಾಯಿಸಲು ನೀಡಿದ್ದ ಹಿನ್ನೆಲೆ ಕೊಡಗು ಜಿಲ್ಲೆಯ ಕುಶಾಲನಗರ ಜೆಎಂಎಫ್ಸಿ ನ್ಯಾಯಾಲಯ ಬಾಲಕಿಯ ತಂದೆಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ. ಜೊತೆಗೆ ತಂದೆಗೆ ಒಂದು ದಿನದ ಜೈಲು ಶಿಕ್ಷೆ ಸಹ ವಿಧಿಸಿದೆ. ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣದ ಅಂತೋಣಿ (58) ಶಿಕ್ಷೆಗೆ ಗುರಿಯಾದವರು. ಇದೇ ಜನವರಿ 6 ರಂದು ಸ್ಕೂಟರ್ ಮತ್ತು ಬೈಕ್ ಮಧ್ಯೆ ಅಪಘಾತ ನಡೆದಿತ್ತು. ನಂಜರಾಯಪಟ್ಟಣ ಗ್ರಾಮದ ದುಬಾರೆ ಜಂಕ್ಷನ್ ಬಳಿ ಈ ಅಪಘಾವಾಗಿತ್ತು. ಅಂಥೋಣಿ ಪುತ್ರಿ ಸ್ಕೂಟರ್ ಚಲಾಯಿಸುತ್ತಿದ್ದಳು. ಹೀಗಾಗಿ ಕಾನೂನು ಉಲ್ಲಂಘನೆಯಡಿ ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಗ್ರಾಮದ ದುಬಾರೆ ಜಂಕ್ಷನ್ ಬಳಿ ಬಾಲಕಿಯ ಸ್ಕೂಟರ್ ಮತ್ತೊಂದು ಬೈಕ್ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡಿದ್ದ. ಈ ಪ್ರಕರಣ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ಸಂದರ್ಭ ಬಾಲಕಿ ಲೈಸೆನ್ಸ್ ಇಲ್ಲದೆ ಅಜಾಗರೂಕರೆಯಿಂದ ಬೈಕ್ ಚಲಾಯಿಸಿದ್ದಳು ಎಂಬುವುದು ಬೆಳಕಿಗೆ ಬಂದಿದೆ. ಇದನ್ನು ಗಂಭಿರವಾಗಿ ಪರಿಗಣಿಸಿದ ಕುಶಾಲನಗರ ಜೆಎಂಎಫ್ಸಿ ನ್ಯಾಯಯ, ಅಪ್ರಾಪ್ತ ಮಗಳಿಗೆ ತಂದೆ ಬೈಕ್ ನೀಡಿದ್ದೇ ತಪ್ಪು ಎಂದು ಅಭಿಪ್ರಾಯಪಟ್ಟಿದೆ. ಮಾತ್ರವಲ್ಲ ಬೈಕ್ ನೀಡಿ ಬೇಜವಾಬ್ದಾರಿ ಮೆರೆದ ತಂದೆಗೆ ಒಂದು ದಿನದಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಇದು ಅಪ್ರಾಪ್ತ ಮಕ್ಕಳಿಗೆ ಕಾರು, ಬೈಕ್ ನೀಡುವ ಪೋಷಕರ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ.
ಕೊಡಗು: ವಿದ್ಯಾರ್ಥಿಗಳ ಮೇಲೆ ನಾಯಿ ದಾಳಿ, ಇಬ್ಬರಿಗೆ ಗಾಯ
ಖಾಸಗಿ ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳ ಮೇಲೆ ಬೀದಿನಾಯಿ ದಾಳಿ ನಡೆಸಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ಪಟ್ಟಣದಲ್ಲಿ ನಡೆದಿದೆ. ಈ ವೇಳೆ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸೋಮವಾರಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ನಾಯಿಗಳ ನಿಯಂತ್ರಣಕ್ಕೆ ಶಾಲಾ ಆಡಳಿತ ಮಂಡಳಿ, ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ದೂರು ನೀಡಿದೆ.
ಬೆಂಗಳೂರು: ಆರೋಪಿ ಕೋರಿಕೆಯಂತೆ ಎಸ್ಐಟಿ ರಚನೆ- ಯುವತಿ ವಕೀಲೆ ಆಕ್ಷೇಪ
ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದ ವಿಚಾರಣೆಯು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ರಾಜ್ಯ ಹೈಕೋರ್ಟ್ನಲ್ಲಿ ನಡೆಯಿತು. ಈ ವೇಳೆ ಎಸ್ಐಟಿ ಅಂತಿಮ ವರದಿ ಸಲ್ಲಿಕೆಗೆ ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ಆಕ್ಷೇಪ ವ್ಯಕ್ತಪಡಿಸಿದರು. ಆರೋಪಿ ಮಾಜಿ ಸಚಿವರ ಮನವಿ ಮೇರೆಗೆ ಎಸ್ಐಟಿ ರಚಿಸಲಾಗಿದೆ. ಹೀಗಾಗಿ SIT ರಚನೆಯೇ ದೋಷಪೂರಿತ ಎಂದು ಅವರು ವಾದ ಮಂಡಿಸಿದರು. ಸಚಿವರಾದರೂ ಕಾನೂನಿನ ಮುಂದೆ ಎಲ್ಲರೂ ಸಮಾನರು. ನಾವು ಯಾರಿಗೂ ಕೇರ್ ಮಾಡುವುದಿಲ್ಲ ಎಂದು ಇದೇ ವೇಳೆ ಹೈಕೋರ್ಟ್ ಸಿಜೆ ರಿತುರಾಜ್ ಅವಸ್ತಿ ಖಾರವಾಗಿ ಪ್ರತಿಕ್ರಿಯೆ ನೀಡಿದರು.
ವಿಡಿಯೋ ಕಾನ್ಫರೆನ್ಸ್‌ನಲ್ಲಿ ಅರೆಬೆತ್ತಲೆ ವ್ಯಕ್ತಿ ಪ್ರತ್ಯಕ್ಷ
ಇನ್ನು ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಅರೆಬೆತ್ತಲೆ ವ್ಯಕ್ತಿ ಪ್ರತ್ಯಕ್ಷವಾದ ಮುಜುಗರದ ಪ್ರಸಂಗವೂ ನಡೆಯಿತು. ಉಜಿರೆ ಎಸ್‌ಡಿಎಂಸಿಯ ಶ್ರೀಧರ್ ಭಟ್ ಎಂಬಾತ ಹೀಗೆ ಪ್ರತ್ಯಕ್ಷವಾಗಿದ್ದ. ಅರೆಬೆತ್ತಲೆ ವ್ಯಕ್ತಿ ಹಾಜರಿಗೆ ಇಂದಿರಾ ಜೈಸಿಂಗ್ ಆಕ್ಷೇಪ ವ್ಯಕ್ತಪಡಿಸಿದರು. ಮಹಿಳೆಯಾದ ನಾನು ವಾದಿಸುತ್ತಿರುವಾಗ ಅರೆಬೆತ್ತಲೆ ವ್ಯಕ್ತಿ ಹಾಜರಾಗುದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಅರೆಬೆತ್ತಲೆ ದೇಹ ತೋರಿಸುತ್ತಿದ್ದಾನೆ. ಇದು ಮಹಿಳೆಯಾದ ನನಗೆ ಮುಜುಗರ ತರುವಂತಿದೆ ಎಂದು ವಕೀಲೆ ಇಂದಿರಾ ಕಿಡಿಕಾರಿದರು.
ಇದನ್ನೂ ಓದಿ:
Video: ಅಪಘಾತದಲ್ಲಿ ಗಾಯಗೊಂಡ ಹಿರಿಯ ನಾಗರಿಕನನ್ನು ರಕ್ಷಿಸಲು ಹೋದವರ ಮೇಲೆ ಗುಂಪು ಹಲ್ಲೆ; ಪ್ರಾಣವನ್ನೇ ಕಳೆದುಕೊಂಡ ಯುವಕ
ತವರು ಮನೆಗೆ ಬಂದ್ದಿದ್ದ ಪತ್ನಿ ಕೊಂದವನಿಗೆ ಜೀವಾವಧಿ ಶಿಕ್ಷೆ ನೀಡಿ 60 ಸಾವಿರ ದಂಡ ವಿಧಿಸಿದ ಮಧುಗಿರಿ ನ್ಯಾಯಾಲಯ
Published On - 1:51 pm, Tue, 30 November 21