ತವರು ಮನೆಗೆ ಬಂದ್ದಿದ್ದ ಪತ್ನಿ ಕೊಂದವನಿಗೆ ಜೀವಾವಧಿ ಶಿಕ್ಷೆ ನೀಡಿ 60 ಸಾವಿರ ದಂಡ ವಿಧಿಸಿದ ಮಧುಗಿರಿ ನ್ಯಾಯಾಲಯ
ಮಧುಗಿರಿಯ 4 ನೇ ಅಧಿಕ ಮತ್ತು ಸತ್ರ ನ್ಯಾಯಾಲಯವು ಪತ್ನಿಯನ್ನು ಕೊಂದವನಿಗೆ ಜೀವಾವಧಿ ಶಿಕ್ಷೆ ಹಾಗೂ 60 ಸಾವಿರ ದಂಡ ವಿಧಿಸಿದೆ. 2014 ರ ಸೆಪ್ಟೆಂಬರ್ 2 ರಂದು ಘಟನೆ ನಡೆದಿತ್ತು.
ತುಮಕೂರು: ತವರು ಮನೆಗೆ ಆಗಮಿಸಿದ್ದ ಹೆಂಡತಿಯ ಮೇಲೆ ಅನುಮಾನ ಪಟ್ಟು ಕೊಲೆ ಮಾಡಿದ್ದ ಗಂಡನಿಗೆ ಜೀವಾವಧಿ ವಿಧಿಸಿದ ಘಟನೆ ನಡೆದಿದೆ. ಮಧುಗಿರಿಯ 4 ನೇ ಅಧಿಕ ಮತ್ತು ಸತ್ರ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.
ಮಧುಗಿರಿಯ 4 ನೇ ಅಧಿಕ ಮತ್ತು ಸತ್ರ ನ್ಯಾಯಾಲಯವು ಪತ್ನಿಯನ್ನು ಕೊಂದವನಿಗೆ ಜೀವಾವಧಿ ಶಿಕ್ಷೆ ಹಾಗೂ 60 ಸಾವಿರ ದಂಡ ವಿಧಿಸಿದೆ. 2014 ರ ಸೆಪ್ಟೆಂಬರ್ 2 ರಂದು ಘಟನೆ ನಡೆದಿತ್ತು. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮದ್ದನಹಳ್ಳಿ ಗ್ರಾಮದ ವೆಂಕಟೇಶಪ್ಪ ಎಂಬುವರ ಮನೆಗೆ ಗೌರಿಹಬ್ಬಕ್ಕೆ ಆಗಮಿಸಿದ್ದ ವೇಳೆ ಪತ್ನಿಯ ಮೇಲೆ ಅನೈತಿಕ ಸಂಬಂಧ ಅನುಮಾನ ಪಟ್ಟು ಪತಿ ಹರೀಶ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.
ಹರೀಶ್ ಬೆಂಗಳೂರು ಉತ್ತರ ತಾಲ್ಲೂಕು ಚಿಕ್ಕಜಾಲದ ಮಾರಸಂದ್ರ ನಿವಾಸಿ ಎನ್ನಲಾಗಿದೆ. ಈತನ ವಿರುದ್ಧ ಕೊರಟಗೆರೆ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ್ ಪ್ರಕರಣ ದಾಖಲಿಸಿ ದೋಷಾರೋಪಣ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸದ್ಯ ಮಧುಗಿರಿಯ 4 ನೇ ಜಿಲ್ಲಾ ಹಾಗೂ ಸತ್ರ ನ್ಯಾಯಾಧಿಶರಾದ ತಾರಕೇಶ್ವರಗೌಡ ಪಾಟೀಲ್, ಕೊಲೆ ಆರೋಪಿ ಹರೀಶ್ ನಿಗೆ ಜೀವಾವಧಿ ಶಿಕ್ಷೆ ಹಾಗೂ 60 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ದಂಡದ ಹಣದಲ್ಲಿ 50 ಸಾವಿರವನ್ನ ಮೃತಳ ಗಾಯಿತ್ರಿ ತಾಯಿಗೆ ಪರಿಹಾರವಾಗಿ ನೀಡಲು ಆದೇಶಿಸಿದ್ದಾರೆ. ಸರಕಾರಿ ಅಭಿಯೋಜಕ ನಿರಂಜನಮೂರ್ತಿ ವಾದ ಮಂಡಿಸಿದ್ದರು.
ವರದಿ: ಮಹೇಶ್, ಟಿವಿ9 ತುಮಕೂರು
ಇದನ್ನೂ ಓದಿ: ಕೊವಿಡ್ ಸಾವಿನ ಸಂಖ್ಯೆಯಲ್ಲಿ ಮಹಾ ಎಡವಟ್ಟು ಬಯಲು ಮಾಡಿದ ಕೊಪ್ಪಳ ಜಿಲ್ಲಾಧಿಕಾರಿ