Heart Attack: ಕೊಡಗಿನಲ್ಲಿ ಹೃದಯಾಘಾತದಿಂದ 12 ವರ್ಷದ ಬಾಲಕ‌ ಸಾವು

| Updated By: ವಿವೇಕ ಬಿರಾದಾರ

Updated on: Jan 08, 2023 | 4:16 PM

Kodagu: ಮಡಿಕೇರಿ ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮದ 12 ವರ್ಷದ ಬಾಲಕ‌ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

Heart Attack: ಕೊಡಗಿನಲ್ಲಿ ಹೃದಯಾಘಾತದಿಂದ 12 ವರ್ಷದ ಬಾಲಕ‌ ಸಾವು
ಮೃತ ಬಾಲಕ ಕೀರ್ತನ್​
Follow us on

ಕೊಡಗು: ಇತ್ತೀಚಿಗೆ ರಾಜ್ಯದಲ್ಲಿ ಯುವಕರು ಮತ್ತು ಬಾಲಕರು ಹೃದಯಾಘತದಿಂದ ಸಾವನ್ನಪ್ಪುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಈ ಘಟನೆಗಳು ಪೋಷಕರಲ್ಲಿ ತೀರ್ವ ಆತಂಕ ಮೂಡಿಸಿದೆ ಮತ್ತು ವೈದ್ಯರಿಗೆ ಸವಾಲಿನ ಸಂಗತಿಯಾಗಿದೆ. ಈಗ ಮಡಿಕೇರಿ ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮದ 12 ವರ್ಷದ ಬಾಲಕ‌ (Young Boy) ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾನೆ. ಕೀರ್ತನ್ (12) ಮೃತ ದುರ್ದೈವಿ.

ಕೂಡುಮಂಗಳೂರು ಗ್ರಾಮದ ಮಂಜಾಚಾರಿ ಪುತ್ರ ಕೀರ್ತನ್ ಕೊಪ್ಪ ಭಾರತ ಮಾತಾ ಶಾಲೆಯಲ್ಲಿ 6 ನೇ ತರಗತಿ ಓದುತ್ತಿದ್ದನು. ಕೀರ್ತನ್​ ಶನಿವಾರ ತಡರಾತ್ರಿ ಅನಾರೋಗ್ಯದಿಂದ ಬಳಲಿದ್ದನು, ಇಂದು (ಜ.08) ಆಸ್ಪತ್ರೆ ಕರೆದೊಯ್ಯವ ವೇಳೆ ದಾರಿ‌ಮಧ್ಯೆ ಸಾವನ್ನಪ್ಪಿದ್ದಾನೆ  ಎಂದು ತಿಳಿದು ಬಂದಿದೆ.

ವಿದ್ಯುತ್ ಶಾಕ್ ನಿಂದ ವಿದ್ಯುತ್ ಕಂಬದ ಮೇಲೆಯೇ ಮೃತಪಟ್ಟ ಲೈನ್ ಮನ್

ಶಿವಮೊಗ್ಗ: ವಿದ್ಯುತ್ ಶಾಕ್​ನಿಂದ ವಿದ್ಯುತ್ ಕಂಬದ ಮೇಲೆಯೇ ಲೈನ್ ಮನ್  ಮೃತಪಟ್ಟಿರುವ  ಘಟನೆ ಶಿಕಾರಿಪುರ ತಾಲೂಕಿನ ಕಾಳೆನಹಳ್ಳಿ ಬಳಿ ನಡೆದಿದೆ. ಬಿಜಾಪುರ ಮೂಲದ ಲೈನ್ ಮನ್ ಶ್ರೀಶೈಲ(30) ಮೃತ  ದುರ್ದೈವಿ. ನೂತನ ಸಬ್ ಸ್ಟೇಷನ್ ಗೆ ಲಿಂಕ್ ಲೈನ್ ಕಾಮಗಾರಿ ನಿರ್ವಹಿಸುವ ವೇಳೆ ನಡೆದ ದುರ್ಘಟನೆ ನಡೆದಿದೆ.

ವಿದ್ಯುತ್ ಲೈನ್​ಗೆ ವಿದ್ಯುತ್​ ಸಂಪರ್ಕ ಕಡಿತಗೊಳಿಸಿಕೊಂಡು ವಿದ್ಯುತ್ ಕಂಬದ ಮೇಲೆ ಇಬ್ಬರು ಲೈನ್ ಮನ್​ಗಳು ಕಾಮಗಾರಿ ನಿರ್ವಹಿಸುತಿದ್ದರು.ಈ ವೇಳೆ ಲೈನ್​ನಲ್ಲಿ ಏಕಾಏಕಿ ವಿದ್ಯುತ್ ಹರಿದಿದೆ. ಇದರಿಂದಾಗಿ  ಶ್ರೀಶೈಲ  ವಿದ್ಯುತ್ ಕಂಬದ ಮೇಲೆಯೇ ಮೃತಪಟ್ಟಿದ್ದಾನೆ. ಇನ್ನೋರ್ವ ಲೈನ್​ಮನ್​ಗೆ ವಿದ್ಯುತ್ ಶಾಕ್ ತಗುಲಿದಾಗ ಮೇಲಿಂದ ಕೆಳಕ್ಕೆ‌ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೃದಯಾಘಾತಕ್ಕೆ ಕಾರಣ

30ರಷ್ಟು ಹೃದಯಾಘಾತಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಸಂಭವಿಸುತ್ತಿದ್ದು, ಯುವಕರು ತಮ್ಮ ಆಯಸ್ಸಿನ 10 ರಿಂದ 15 ವರ್ಷಗಳ ಮುಂಚೆಯೇ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ ಎಂದು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಕೆಲ ತಿಂಗಳ ಹಿಂದೆ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದರು. ಈ ಕುರಿತು ಖಾಸಗಿ ಸುದ್ದಿ ಸಂಸ್ಥೆ ದಿ ಹಿಂದು ವರದಿ ಮಾಡಿದೆ.

ಇದನ್ನೂ ಓದಿ: ಪ್ರತಿ ದಿನ ಇಷ್ಟು ಹೆಜ್ಜೆ ನಡೆದರೆ ಹೃದಯಾಘಾತದ ಅಪಾಯ ಕಡಿಮೆಯಂತೆ

ಯುವಕರಲ್ಲಿ ಹೃದಯಾಘಾತದ ಹೆಚ್ಚಳದ ಅಧ್ಯಯನವನ್ನು ಉಲ್ಲೇಖಿಸಿದ ಡಾ. ಮಂಜುನಾಥ್, ಧೂಮಪಾನಿಗಳಲ್ಲಿ 50 ಪ್ರತಿಶತ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಕುಟುಂಬದ ಇತಿಹಾಸ ಹೊಂದಿರುವ 16 ಪ್ರತಿಶತದಷ್ಟು ಜನರು ಹೃದಯಾಘಾತಕ್ಕೆ ಒಳಗಾಗುತ್ತಾರೆ. ಯಾವುದೇ ಕೆಟ್ಟ ಅಭ್ಯಾಸಗಳು ಮತ್ತು ಕುಟುಂಬದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಲ್ಲದೆ, ಸುಮಾರು 30 ಪ್ರತಿಶತದಷ್ಟು ಜನರು ಕೆಲಸದ ಒತ್ತಡದಿಂದಾಗಿ ಹೃದಯಾಘಾತಕ್ಕೆ ಒಳಗಾಗುತ್ತಾರೆ.

ಒತ್ತಡದಿಂದ ಹೃದಯಾಘಾತಗಳು ಜೀವನದಲ್ಲಿ ಹೆಚ್ಚಿನ ನಿರೀಕ್ಷೆಗಳು ಮತ್ತು ತ್ವರಿತ ಸಮಯದಲ್ಲಿ ಯಶಸ್ಸನ್ನು ಸಾಧಿಸುವ ಕಾರಣದಿಂದಾಗಿರಬಹುದು. ಶೇ.70ರಷ್ಟು ಹೃದಯಾಘಾತಗಳು ಕೆಟ್ಟ ಜೀವನಶೈಲಿಯಿಂದ ಉಂಟಾದರೆ, ಶೇ.30ರಷ್ಟು ಒತ್ತಡದಿಂದ ಉಂಟಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಕೇವಲ ಎದೆನೋವು ಮಾತ್ರವಲ್ಲ ಹೃದಯಾಘಾತದ ಈ ಲಕ್ಷಣಗಳ ಬಗ್ಗೆಯೂ ಎಚ್ಚರವಿರಲಿ 

ಹೃದಯಾಘಾತಕ್ಕೊಳಗಾದವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ವಿಳಂಬ ಮಾಡದಂತೆ ಡಾ.ಮಂಜುನಾಥ್ ಎಚ್ಚರಿಕೆ ನೀಡಿದರು. 30 ನಿಮಿಷಗಳ ವಿಳಂಬವು ಸಾವಿನ ಸಾಧ್ಯತೆಯನ್ನು 7 ಪ್ರತಿಶತದಷ್ಟು ಹೆಚ್ಚಿಸುತ್ತದೆ. ಗೋಲ್ಡನ್ ಅವರ್ ಚಿಕಿತ್ಸೆಯು ಪ್ರಮುಖವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:38 pm, Sun, 8 January 23