ಕೊಡಗು: ಜಿಲ್ಲೆಯ ಮಡಿಕೇರಿ (Madikeri) ತಾಲೂಕು ಚೆಂಬು ಗ್ರಾಮದಲ್ಲಿ ಇಂದು (ಜೂನ್ 28) ಮತ್ತೆ ಲಘು ಭೂಕಂಪನದ (Earthquake) ಅನುಭವವಾಗಿದೆ. ಗ್ರಾಮದಲ್ಲಿ ಇಂದು ಒಂದೇ ದಿನ 2 ಬಾರಿ ಭೂಮಿ ಕಂಪಿಸಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲೆಯ ಹಲವೆಡೆ ಇಂದು ಬೆಳಿಗ್ಗೆ ಭೂಕಂಪನದ ಅನುಭವವಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿತ್ತು. ಬೆಳಗ್ಗೆ 7.45ರ ಸುಮಾರಿಗೆ ಮಡಿಕೇರಿ ತಾಲೂಕಿನ ಕರಿಕೆ, ಪೆರಾಜೆ ಭಾಗಮಂಡಲ ಹಾಗೂ ಸಂಪಾಜೆ ಕರ್ಣಂಗೇರಿ ಸೇರಿ ಹಲವೆಡೆ ಭೂಕಂಪನ ಅನುಭವಾಗಿದೆ. ಇನ್ನು ಮಡಿಕೇರಿ ನಗರದಲ್ಲೂ ಲಘು ಭೂಕಂಪನ ಆಗಿದೆ ಎಂದು ತಿಳಿದುಬಂದಿದೆ. ಕಳೆದ ಮೂರು ದಿನಗಳ ಹಿಂದೆಯೂ ಜಿಲ್ಲೆಯಲ್ಲಿ ಭೂಮಿ ಕಂಪಿಸಿತ್ತು. ಇದಕ್ಕೂ ಮೊದಲು 2018ರಲ್ಲಿ ಇದೇ ರೀತಿ ಕಂಪಿಸಿತ್ತು. ಅದೇ ವರ್ಷ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿತ್ತು.
ಇದನ್ನು ಓದಿ: ಕೊಡಗಿನಲ್ಲಿ ಯೋಧನ ಕುಟುಂಬಕ್ಕೆ ಬಹಿಷ್ಕಾರ! ಸೇನಾಧಿಕಾರಿಗಳಿಂದ ಡಿಸಿ, ಎಸ್ಪಿಗೆ ಪತ್ರ
ಸುಳ್ಯ ಪೇಟೆಯಲ್ಲೂ ಇಂದು ಭೂಕಂಪನ ಅನುಭವ ಆಗಿದ್ದು, ಜನರು ಭಯದಲ್ಲಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಸುಮಾರು 4-5 ಸೆಕೆಂಡ್ಗಳ ಕಾಲ ಕಂಪನ ಆಗಿದೆ. ಕಳೆದ ಬಾರಿಗಿಂತ ಹೆಚ್ಚಿನ ತೀವ್ರತೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಇದನ್ನು ಓದಿ: ಕೊಡಗು ಜಿಲ್ಲೆಗೆ ಮುಂಗಾರು ಪ್ರವೇಶಿಸುವ ಮುನ್ನವೆ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ NDRF ತಂಡ
ಮೂರು ದಿನಗಳ ಹಿಂದೆ ಜಿಲ್ಲೆಯಲ್ಲಿ ಆಗಿದ್ದ ಭೂಕಂಪನ ದೃಢವಾಗಿದೆ. ಈ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಕೋಶ ದೃಢಪಡಿಸಿದ್ದು, ರಿಕ್ಟರ್ ಮಾಪಕದಲ್ಲಿ 2.7ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದಿಂದಾಗಿ ಕೊಡಗು-ದಕ್ಷಿಣ ಕನ್ನಡ ಜಿಲ್ಲೆ ಗಡಿಭಾಗವಾದ ಸಂಪಾಜೆಯಲ್ಲಿ ಮನೆ ಗೋಡೆಗಳು ಬಿರುಕು ಬಿಟ್ಟಿದ್ದವು.
ಚಿಕ್ಕಬಳ್ಳಾಪುರ ತಾಲೂಕಿನ ಬಂಡಹಳ್ಳಿ ಸುತ್ತಮುತ್ತ ಭೂಕಂಪನ ರಾತ್ರಿ 7.45ರ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಬಂಡಹಳ್ಳಿ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 2.8ರಷ್ಟು ದಾಖಲಾಗಿದೆ.