Kodagu News: ರಾಜಾಸೀಟ್ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ: ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ ಜಿಲ್ಲಾಡಳಿತ

ಮಡಿಕೇರಿಯ ಪ್ರಸಿದ್ಧ ಪ್ರವಾಸಿತಾಣ ರಾಜಾಸೀಟ್​ನ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಾಸೀಟ್​​​​ನ ಬೀದಿ ಬದಿ ಇದ್ದ 20ಕ್ಕೂ ಹೆಚ್ಚು ಅಂಗಡಿ ಮತ್ತು ತಳ್ಳುವ ಗಾಡಿಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದೆ.

Kodagu News: ರಾಜಾಸೀಟ್ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ: ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ ಜಿಲ್ಲಾಡಳಿತ
ಬೀದಿ ಬದಿ ವ್ಯಾಪಾರಿಗಳ ತೆರವು (ಎಡಚಿತ್ರ) ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ (ಬಲಚಿತ್ರ)

Updated on: Jun 06, 2023 | 3:13 PM

ಕೊಡಗು: ಮಡಿಕೇರಿಯ (Madikeri) ಪ್ರಸಿದ್ಧ ಪ್ರವಾಸಿತಾಣ ರಾಜಾಸೀಟ್​​ನ (Raja’s seat) ಭದ್ರತಾ ಸಿಬ್ಬಂದಿ (Security guard) ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಾಸೀಟ್​​​​ನ ಬೀದಿ ಬದಿ ಇದ್ದ 20ಕ್ಕೂ ಹೆಚ್ಚು ಅಂಗಡಿ ಮತ್ತು ತಳ್ಳುವ ಗಾಡಿಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಇನ್ನು ಜಿಲ್ಲಾಡಳಿತದ ಈ ಕ್ರಮಕ್ಕೆ ಬೀದಿ ಬದಿ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಿದ್ದಾರೆ.

ರಾಜಾಸೀಟ್ ಭದ್ರತಾ ಸಿಬ್ಬಂದಿ ಮೇಲೆ ಮಾರಣಾಂತಿಕ‌ ಹಲ್ಲೆ

ನಗರದ ರಾಜಾಸೀಟಿ ಉದ್ಯಾನವನ ನಿನ್ನೆ (ಜೂ.05) ಸಾಯಂಕಾಲ ರಾಜಾಸೀಟ್ ಭದ್ರತಾ ಸಿಬ್ಬಂದಿ ಮೇಲೆ ಜೆಮ್ಶದ್ ಎಂಬ ವ್ಯಾಪರಿ ದೊಣ್ಣೆಯಿಂದ ಮಾರಣಾಂತಿಕ‌ವಾಗಿ ಹಲ್ಲೆ ಮಾಡಿದ್ದನು. ಜಯಣ್ಣ (45) ಹಲ್ಲೆಗೊಳಗಾದ ರಾಜಾಸೀಟ್ ಭದ್ರತಾ ಸಿಬ್ಬಂದಿ. ಆರೋಪಿ ಜೆಮ್ಶದ್ ರಾಜಾಸೀಟ್​ನಲ್ಲಿ ಚಿಪ್ಸ್ ವ್ಯಾಪಾರ ಮಾಡುತ್ತಿದ್ದನು.

ಇದನ್ನೂ ಓದಿ: ಕೊಡಗಿನಲ್ಲಿ ಮತ್ತೆ ಮಳೆ ಆತಂಕ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜನರಿಗೆ ಸೂಚನೆ

ಈತನ ಬಳಿ ಕಡಿಮೆ ಬೆಲೆಗೆ ಚಿಪ್ಸ್ ಕೇಳಿದ್ದಕ್ಕೆ ಜಯಣ್ಣ ಅವರಿಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ಜಯಣ್ಣ ಅವರ ತಲೆಗೆ ತೀವ್ರ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗೆ ಜಯಣ್ಣ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ