AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kodagu News: ಮಳೆಗಾಲದ ಒಂದು ವಾರದ ಮೊದಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳಿಗೆ ಮುಂದಾದ ಜಿಲ್ಲಾಡಳಿತ

ಕೊಡಗು ಜಿಲ್ಲೆಯಲ್ಲಿ ಇನ್ನೇನು ಒಂದು ವಾರದಲ್ಲಿ ಮುಂಗಾರು ಮಳೆ ಆರಂಭವಾಗಲಿದೆ. ಪ್ರತಿ ವರ್ಷದಂತೆ ಈ ಭಾರಿಯೂ ಪ್ರವಾಹ ಮತ್ತು ಭೂ ಕುಸಿತದ ಆತಂಕ ಇದ್ದೇ ಇದೆ. ಹಾಗಾಗಿ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳಿಗೆ ಮುಂದಾಗಿದೆ.

Kodagu News: ಮಳೆಗಾಲದ ಒಂದು ವಾರದ ಮೊದಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳಿಗೆ ಮುಂದಾದ ಜಿಲ್ಲಾಡಳಿತ
ಕೊಡಗು
ಕಿರಣ್ ಹನುಮಂತ್​ ಮಾದಾರ್
|

Updated on: May 26, 2023 | 1:49 PM

Share

ಕೊಡಗು: ಜಿಲ್ಲೆಗೆ ಕಳೆದ ವರ್ಷಗಳಿಂದ ಮಳೆಗಾಲ ಅಂದ್ರೆ, ಶಾಪವಾಗಿದೆ. ಅಪಾರ ಮಳೆಯಿಂದಾದ ಅನಾಹುತಗಳು ಒಂದೆರಡಲ್ಲ. ಭಾರೀ ಭೂ ಕುಸಿತ, ಪ್ರವಾಹದಿಂದಾಗಿ 20ಕ್ಕೂ ಅಧಿಕ ಜೀವ ನಷ್ಟವಾಗಿದೆ. ಸಾವಿರಾರು ಎಕರೆ ಕೃಷಿ ಭೂಮಿ ನಾಮಾವಶೇಷವಾಗಿದೆ. 1000ಕ್ಕೂ ಅಧಿಕ ಮನೆಗಳು ನಾಶವಾಗಿವೆ. ಈ ಬಾರಿಯೂ ಮತ್ತೆ ಮಳೆಗಾಲ ಬಂದಿದೆ. ಹಾಗಾಗಿ ಸಂಭಾವ್ಯ ಅನಾಹುತ ಎದುರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಮೊದಲನೆಯದಾಗಿ ಜಿಲ್ಲೆಯಲ್ಲಿ ಸುಮಾರು 90 ಪ್ರದೇಶಗಳನ್ನ ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಲಾಗಿದೆ. ಅದರಲ್ಲಿ 45 ಪ್ರದೇಶಗಳಲ್ಲಿ ಭೂ ಕುಸಿತ ಸಂಭವಿಸಬಹುದು ಎಂದು ಗುರುತಿಸಲಾದರೆ, 40 ಸ್ಥಳಗಳಲ್ಲಿ ಪ್ರವಾಹ ತಲೆದೋರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ, ಇವೆಲ್ಲವೂ ಕಳೆದ ಮುರ್ನಾಲ್ಕು ವರ್ಷಗಳಲ್ಲಿ ಅಪಾಯಕ್ಕೊಳಗಾದ ಪ್ರದೇಶಗಳೇ ಆಗಿವೆ. ಈ ನಿಟ್ಟಿನಲ್ಲಿ ಸಂಭಾವ್ಯ ಅಪಾಯ ಎದುರಿಸಲು ಅಗತ್ಯ ಕ್ರಮಕ್ಕೆ ಜಿಲ್ಲಾಡಳಿತ ಸಜ್ಜಾಗಿದೆ.

ಮುಂಜಾಗೃತ ಕ್ರಮವಹಿಸಿದ ಜಿಲ್ಲಾಡಳಿತ

ಪ್ರತಿ ಹೋಬಳಿ ಮಟ್ಟದಲ್ಲಿ ನೋಡಲ್ ಆಫಿಸರ್​ ನೇಮಕ ಮಾಡಲಾಗಿದ್ದು, ತುರ್ತು ಕರೆಗೆ ಸ್ಪಂದಿಸುವಂತೆ ಆದೇಶ ನೀಡಲಾಗಿದೆ. ಸ್ಥಳೀಯ ಗ್ರಾಮಸ್ಥರನ್ನು ಕೂಡ ಕಾರ್ಯಪಡೆಗಳಲ್ಲಿ ಬಳಕೆ ಮಾಡಲು ಯೋಜನೆ ಹಾಕಲಾಗಿದೆ. ಅಲ್ಲದೆ, ಎನ್​ಡಿಆರ್​ಎಫ್​ ತಂಡ ಇನ್ನು ಕೆಲವೇ ದಿನಗಳಲ್ಲಿ ಜಿಲ್ಲೆಗೆ ಆಗಮಿಸಲಿದೆ. ಇದರೊಂದಿಗೆ ಅಗ್ನಿಶಾಮಕ ಮತ್ತು ಪೊಲಿಸ್ ಇಲಾಖೆಯುನ್ನು ಕೂಡ ಸರ್ವ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಸಧ್ಯ 20 ಕೋಟಿ ರೂ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಲ್ಲಿದೆ. ಏನೇ ಆದ್ರೂ, ಸಂಭಾವ್ಯ ಅಪಾಯ ಎದುರಿಸಲು ಜಿಲ್ಲಾಡಳಿತ ಜನರ ನೆರವಿಗೆ ಸದಾ ಸನ್ನದ್ಧವಾಗಿರಬೇಕೆಂದು ನಾಗರಿಕರು ಕೂಡ ಮನವಿ ಮಾಡಿದ್ದಾರೆ. ಇನ್ನು 2018 ಮತ್ತು 19ಕ್ಕೆ ಹೋಲಿಸಿದ್ರೆ, ನಂತರದ ದಿನಗಳಲ್ಲಿ ಅಂತಹ ಮಹಾ ಆಪತ್ತು ಸಂಭವಿಸಿಲ್ಲ. ಹಾಗಾಗಿ ಈ ಬಾರಿಯೂ ಹೆಚ್ಚು ಆತಂಕ ಪಡುವ ಅಗತ್ಯ ಇಲ್ಲ ಎನ್ನುತ್ತಾರೆ ಅಧಿಕಾರಿಗಳು ಮತ್ತು ವಿಜ್ಞಾನಿಗಳು.

ಇದನ್ನೂ ಓದಿ:ಚಿಕ್ಕಮಗಳೂರು: ಭದ್ರಾ ಡ್ಯಾಂ ಪಕ್ಕದ ಕಾಲುವೆಯಲ್ಲಿ ಮುಳುಗಿ ಮೂವರ ಸಾವು

ಕಳೆದ ಬಾರಿ ಮಳೆಯಿಂದ ನಿರಾಶ್ರಿತರಾದ ಕುಟುಂಬಗಳಿಗೆ ಇನ್ನು ಸಿಕ್ಕಿಲ್ಲ ಮನೆ

ಇನ್ನು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಭೂ ಕುಸಿತ ಮತ್ತು ಪ್ರವಾಹ ಸಂಭವಿಸಿ ಸಾವಿರಾರು ಮಂದಿ ನಿರಾಶ್ರಿತರಾಗಿರುವುದು ಗೊತ್ತೇ ಇದೆ. ಈ ನಿರಾಶ್ರಿತರಿಗಾಗಿ ನೂರಾರು ಕೋಟಿ ರೂ ಅನುದಾನ ಹರಿದು ಬಂದಿದೆ. ಅದ್ರಲ್ಲೂ ಇನ್ಫೋಸಿಸ್ ಫೌಂಡೇಷನ್ 250 ಮನೆಗಳನ್ನ ನಿರ್ಮಾಣ ಮಾಡಿಕೊಟ್ಟಿದೆ. ಆದ್ರೆ ನಿರ್ಮಾಣ ಕಾರ್ಯ ಆರಂಭವಾಗಿ ಮೂರು ವರ್ಷಗಳೇ ಕಳೆದಿದ್ದರೂ ಅದು ಇನ್ನೂ ಸಂತ್ರಸ್ತರಿಗೆ ವಿತರಣೆಯಾಗಿಲ್ಲ.

2018 ಮತ್ತು 19ರಲ್ಲಿ ಕೊಡಗು ಜಿಲ್ಲೆಯಲ್ಲಿ ಭೀಕರ ಪ್ರವಾಹ ಮತ್ತು ಭೂ ಕುಸಿತ ಸಂಭವಿಸಿತ್ತು. ಸಾವಿರಾರು ಮಂದಿ ಮನೆ ಕಳೆದುಕೊಂಡಿದ್ದರು. ಇವರಲ್ಲಿ ಸುಮಾರು 750 ಮಂದಿಗೆ ಸರ್ಕಾರ ಈಗಾಗಲೇ ಕೊಡಗಿನ ವಿವಿಧೆಡೆ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದೆ. ಇದೇ ವೇಳೆ ಭೂ ಕುಸಿತ ಮತ್ತು ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಸರ್ಕಾರ ಅಲ್ಲದೆ ಇನ್ಫೋಸಿಸ್ ಪ್ರತಿಷ್ಠಾನ ವತಿಯಿಂದ ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿ 250 ಮನೆಗಳನ್ನು ನಿರ್ಮಿಸಲಾಗಿದೆ. ಮನೆ ಕಾಮಗಾರಿ ಬಹುತೇಕ ಸಂಪೂರ್ಣವಾಗಿದೆ. ಒಂದು ಮನೆಗೆ ತಲಾ 11 ಲಕ್ಷ ರೂ ವೆಚ್ಚ ಮಾಡಲಾಗಿದೆ. ಎಲ್ಲವೂ ಯೋಜನೆ ಪ್ರಕಾರ ನಡೆದಿದ್ದಲ್ಲಿ ಈಗಾಗಲೇ ಸಂತ್ರಸ್ತರು ನೆಮ್ಮದಿಯಿಂದ ಹೊಸ ಮನೆ ಪ್ರವೇಶ ಮಾಡಬೇಕಾಗಿತ್ತು. ಆದ್ರೆ ಮನೆಗಳನ್ನು ಐದು ವರ್ಷವಾದ್ರೂ ಇನ್ನೂ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿಲ್ಲ. ಇನ್ನೇನು ಮಳೆಗಾಲ ಶುರುವಾಗುವುದರೊಳಗಾಗಿ ವಿತರಿಸಲಾಗುತ್ತಾ? ಕಾದು ನೋಡಬೇಕಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ