ಬಿಜೆಪಿಯಲಿ ಅವಮಾನ ಆಗಿದೆ ಮತ್ತೆ ಹೋಗಲ್ಲ ಎಂದಿದ್ದರು, ಕಾಂಗ್ರೆಸ್ ಪಕ್ಷದಲ್ಲಿ ಶೆಟ್ಟರ್​ಗೆ​​​​ ಯಾವುದೇ ಅನ್ಯಾಯ ಆಗಿಲ್ಲ -ಸಿಎಂ ಸಿದ್ದರಾಮಯ್ಯ

| Updated By: ಆಯೇಷಾ ಬಾನು

Updated on: Jan 25, 2024 | 1:59 PM

ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಯಾವುದೇ ಅನ್ಯಾಯ ಆಗಿಲ್ಲ. ಒಮ್ಮೆ ಅವರು ನನಗೆ ಬಿಜೆಪಿಯಲಿ ಅವಮಾನ ಆಗಿದೆ ಮತ್ತೆ ಹೋಗಲ್ಲ ಎಂದಿದ್ದರು ಎಂದಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಶೆಟ್ಟರ್ ಕಾಂಗ್ರೆಸ್ ತೊರೆದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಸಂಜೆ ನಾಲ್ಕು ಗಂಟೆಗೆ ಪ್ರತಿಭಟನೆ‌ ಹಮ್ಮಿಕೊಂಡಿದ್ದಾರೆ.

ಬಿಜೆಪಿಯಲಿ ಅವಮಾನ ಆಗಿದೆ ಮತ್ತೆ ಹೋಗಲ್ಲ ಎಂದಿದ್ದರು, ಕಾಂಗ್ರೆಸ್ ಪಕ್ಷದಲ್ಲಿ ಶೆಟ್ಟರ್​ಗೆ​​​​ ಯಾವುದೇ ಅನ್ಯಾಯ ಆಗಿಲ್ಲ -ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Follow us on

ಕೊಡಗು, ಜ.25: ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ರಾಜಕೀಯ ವಲಯದಲ್ಲಿ ಭಾರೀ ಬೆಳವಣಿಗೆಯೊಂದು ನಡೆದಿದೆ. ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಎಂಎಲ್​ಸಿ ಜಗದೀಶ್ ಶೆಟ್ಟರ್ (Jagadish Shettar) ಅವರು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ಈ ವಿಚಾರ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಶೆಟ್ಟರ್ ಕಾಂಗ್ರೆಸ್ ತೊರೆದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಸಂಜೆ ನಾಲ್ಕು ಗಂಟೆಗೆ ಪ್ರತಿಭಟನೆ‌ ಹಮ್ಮಿಕೊಂಡಿದ್ದಾರೆ. ಇನ್ನು ಮತ್ತೊಂದೆಡೆ ಘಟನೆ ಸಂಬಂಧ ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿ ಸಿಎಂ‌ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯೆ ನೀಡಿದ್ದು ಕಾಂಗ್ರೆಸ್ ಪಕ್ಷದಲ್ಲಿ ಶೆಟ್ಟರ್​ಗೆ​​​​ ಯಾವುದೇ ಅನ್ಯಾಯ ಆಗಿಲ್ಲ ಎಂದಿದ್ದಾರೆ.

ಕೊಡಗಿನಲ್ಲಿ ಮಾತನಾಡಿದ ಸಿಎಂ‌ ಸಿದ್ದರಾಮಯ್ಯ, ನಾವು ಅವರಿಗೆ ಟಿಕೆಟ್ ಕೊಟ್ಟಿದ್ದೆವು. ಚುನಾವಣೆಯಲ್ಲಿ ಸೋತರೂ ಶೆಟ್ಟರನ್ನು ಎಂಎಲ್​ಸಿ ಮಾಡಿದ್ದೆವು. ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಯಾವುದೇ ಅನ್ಯಾಯ ಆಗಿಲ್ಲ. ಒಮ್ಮೆ ಅವರು ನನಗೆ ಬಿಜೆಪಿಯಲಿ ಅವಮಾನ ಆಗಿದೆ ಮತ್ತೆ ಹೋಗಲ್ಲ ಎಂದಿದ್ದರು ಎಂದು ತಿಳಿಸಿದ್ದಾರೆ. ಇನ್ನು ನಿಗಮ‌ ಮಂಡಳಿ‌ ನೇಮಕ ವಿಚಾರ ಸಂಬಂಧ ಮಾತನಾಡಿದ ಸಿಎಂ, ನಾವೇನು ಗುಲಾಮರಾ ಎಂಬ ಸಚಿವ ಕೆ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ವೊಬ್ಬರು ಒಂದೊಂದು ಹೆಸರನ್ನ ಸಜೆಸ್ಟ್ ಮಾಡ್ತಾರೆ. ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​​​ಗೆ ಕೈಕೊಟ್ಟ ಜಗದೀಶ್​ ಶೆಟ್ಟರ್​​ ಮಾತೃಪಕ್ಷ ಬಿಜೆಪಿಗೆ ಘರ್​ವಾಪಸಿ ಆದರು

ಟಿಕೆಟ್​ ತಪ್ಪಿಸಿದಾಗ ಶೆಟ್ಟರ್​ಗೆ ದೇಶದ ಹಿತ ಗೊತ್ತಿರಲಿಲ್ವಾ?

ಬಿಜೆಪಿಗೆ ಜಗದೀಶ್ ಶೆಟ್ಟರ್​ ಮರು ಸೇರ್ಪಡೆಯಾದ ವಿಚಾರ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ನಾನು ಕರೆ ಮಾತಾಡಿದಾಗ ನಾನು ಹೋಗಲ್ಲ ಎಂದಿದ್ದರು. ನಾವು ಸೀನಿಯರ್​ ಲೀಡರ್​ ಎಂದು ಸ್ಥಾನಮಾನ ಕೊಟ್ಟಿದ್ವಿ. ಈಗ ನಾನು ಫ್ಯಾಕ್ಸ್​​ನಲ್ಲಿ ರಾಜೀನಾಮೆ ಕೊಟ್ತೇನೆ ಅಂದಿದ್ದಾರೆ. ಒತ್ತಡದಲ್ಲಿ ಕರೆದುಕೊಂಡು ಹೋಗಿದ್ದಾರೋ ಏನೋ ಗೊತ್ತಿಲ್ಲ. ಟಿಕೆಟ್​ ತಪ್ಪಿಸಿದಾಗ ಶೆಟ್ಟರ್​ಗೆ ದೇಶದ ಹಿತ ಗೊತ್ತಿರಲಿಲ್ವಾ? ನಾವು ಅವರನ್ನ ಬಹಳ ಗೌರವದಿಂದ ನಡೆಸಿಕೊಂಡಿದ್ದೇವೆ. ನನಗೆ ಈವರೆಗೂ ರಾಜೀನಾಮೆ ಪತ್ರ ತಲುಪಿಲ್ಲ. ಶೆಟ್ಟರ್ ಅವರು ಮಾತಾಡಲಿ ಬಳಿಕ ಮುಂದಿನ ದಿನಗಳಲ್ಲಿ ನಾನು ಮಾತಾಡ್ತೇನೆ ಎಂದರು.

ಶೆಟ್ಟರ್ ಅಲ್ಲಿ ಇರುತ್ತಾರೆ ಅನ್ನೋದು ಯಾವ ಗ್ಯಾರಂಟಿ?

ತುಮಕೂರಿನಲ್ಲಿ ಸಹಕಾರ ಸಚಿವ ಕೆ.ಎನ್​.ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.  ಜಗದೀಶ್ ಶೆಟ್ಟರ್ ಬಿಜೆಪಿ ಸೇರಿದ ವಿಚಾರ ಈಗ ತಿಳಿಯಿತು. ನನಗೆ ನ್ಯೂಟನ್​ ನೆನಪಾದ. ಅವರನ್ನ ಅವಮಾನ ಮಾಡಿ ಹೊರಹಾಕಿದ್ದರು. ಈಗ ಮತ್ತೆ ಅವರೇ ಸೇರ್ಪಡೆ ಮಾಡಿಕೊಂಡಿದ್ದಾರೆ. ಅಲ್ಲಿ ಇರುತ್ತಾರೆ ಅನ್ನೋದು ಯಾವ ಗ್ಯಾರಂಟಿ. ಯಾವುದೇ ತತ್ವ ಸಿದ್ದಾಂತ ಪಾಲನೆ ಮಾಡದೇ ಸ್ವಾರ್ಥಕ್ಕೋಸ್ಕರ ಪಕ್ಷ ಬದಲಾವಣೆ ಮಾಡಿದ್ದಾರೆ. ಯಾವುದೇ ತತ್ವ ಸಿದ್ದಾಂತದ ಗೋಜಿಗೆ ಹೋಗದೇ ವೈಯಕ್ತಿಕಗಾಗಿ ಪಕ್ಷಾಂತರ ಮಾಡುವುದು ಒಪ್ಪುವ ಕ್ರಮವಲ್ಲ. ಕಾಂಗ್ರೆಸ್ ನಿಂದಲೂ ಅವರಿಗೆ ಗೌರವ ಸಿಕ್ಕಿತ್ತು. ಯಾವುದೋ ಒತ್ತಡದಿಂದ ಹೀಗೆ ಆಗಿರಬಹುದೆನೋ ಗೊತ್ತಿಲ್ಲ. ಅವರು ಬಿಜೆಪಿ ಸೇರ್ಪಡೆಯಿಂದ ಅವರ ಗೌರವ ಕಡಿಮೆ ಆಗಿದೆ ಎನ್ನೋದು ನನ್ನ ಅಭಿಪ್ರಾಯ. ಹೀಗೆ ಯಾರೇ ಮಾಡಿದ್ರೂ ಜನರು ಒಪ್ಪುವುದಿಲ್ಲ. ಲೋಕಸಭಾ ಚುನಾವಣೆ ಸಮೀಪ ಇರುವ ಕಾರಣ ಹೋಗೊದು ಬರೋದು ಇದ್ದೆ ಇರುತ್ತದೆ. ಇವರು ಹೋದರೆ ಬೇರೆಯವರು ಬರುತ್ತಾರೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:46 pm, Thu, 25 January 24