ಮೊಬೈಲ್‌ನಲ್ಲೇ ಪತ್ನಿಗೆ ತಲಾಖ್ ನೀಡಿದ್ದ ಪ್ರಕರಣ; ಪತಿ, ಪತಿಯ ತಂದೆ-ತಾಯಿ ಜಮಾತ್ ಸದಸ್ಯತ್ವದಿಂದ ಅಮಾನತು
ಪತಿ ರುವೈಸ್, ತಂದೆ ಅಬ್ದುಲ್ಲಾ, ತಾಯಿ ಜಮೀಲರನ್ನು ಜಮಾತ್ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ. ಜಮಾತ್ ಆಡಳಿತ ಮಂಡಳಿ ಈ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಕೊಡಗು: ಮೊಬೈಲ್‌ನಲ್ಲೇ ಪತ್ನಿಗೆ ಪತಿ ತಲಾಖ್ ನೀಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲಾಖ್ ನೀಡಿದ್ದ ಪತಿ, ಪತಿಯ ತಂದೆ, ತಾಯಿಗೆ ಶಿಕ್ಷೆ ವಿಧಿಸಲಾಗಿದೆ. ಪತಿ ರುವೈಸ್, ತಂದೆ ಅಬ್ದುಲ್ಲಾ, ತಾಯಿ ಜಮೀಲರನ್ನು ಜಮಾತ್ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ. ಜಮಾತ್ ಆಡಳಿತ ಮಂಡಳಿ ಈ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಕುಂಜಿಲ ಪಯೆನ್ರಿ ಮುಸ್ಲಿಂ ಜಮಾತ್ ಸದಸ್ಯತ್ವದಿಂದ ಮೂವರನ್ನು ಅಮಾನತು ಮಾಡಲಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕುಂಜಿಲ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಅಮೀರಾಳಿಗೆ ವಾಟ್ಸಾಪ್ ವಾಯ್ಸ್ನಲ್ಲೇ ಪತಿ ತಲಾಖ್ ನೀಡಿದ್ದ. ಅಲ್ಲದೆ ಪತಿಯ ತಂದೆ- ತಾಯಿ ವಿರುದ್ಧವೂ ವರದಕ್ಷಿಣೆ ಆರೋಪ ಕೇಳಿ ಬಂದಿದೆ. ಹೀಗಾಗಿ ಜಮಾತ್ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ.
ವಾಟ್ಯಾಪ್ ಚಾಟಿಂಗ್ ವಾಯ್ಸ್ ಸಾವಿಗೆ ಕೆಲವೇ ನಿಮಿಷಗಳ ಮೊದಲು ವಾಟ್ಯಾಪ್ ವಾಯ್ಸ್ ಮೆಸೇಜ್ ಮೂಲಕ ಅಮೀರಾ ಪತಿ ತಲಾಖ್ ನೀಡಿದ್ದಾನೆ. ಎರಡು ಬಾರಿ ಪತಿ ರುಬೈಸ್ ತಲಾಖ್ ಹೇಳಿದ್ದಾನೆ. ವಾಟ್ಯಾಪ್ ವಾಯ್ಸ್ನಲ್ಲಿ ತಲಾಖ್ ಬಂದ ಬೆನ್ನಿಗೇ ಅಮೀರ ನೇಣು ಹಾಕಿಕೊಂಡಿದ್ದಾರೆ. ಈಗ ಭಾರತದಲ್ಲಿ ತ್ರಿವಳಿ ತಲಾಖ್ ಸಿಂಧು ಅಲ್ಲ. ಆದರೂ ಗಂಡನ ತಲಾಖ್ ಎಂಬ ವಾಯ್ಸ್ ನೋಟ್ನಿಂದ ನೊಂದ ಅಮೀರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಮೀರಾ ಮತ್ತು ಕುಂಜಿಲ ಗ್ರಾಮದ ರುಬೈಸ್ ಕಾಲೇಜು ದಿನಗಳಲ್ಲೇ ಪ್ರೀತಿಸಿದ್ದರು. ಪಿಯುಸಿ ಮುಗಿಯುತ್ತಿದ್ದಂತೆ ಇಬ್ಬರೂ ಹಠಕ್ಕೆ ಬಿದ್ದು ಪೋಷಕರನ್ನು ಒಪ್ಪಿಸಿ ವಿವಾಹವಾಗಿದ್ದರು. ಕಳೆದ ನವೆಂಬರ್ ತಿಂಗಳಲ್ಲಿ ಇಬ್ಬರ ವಿವಾಹ ನೆರವೇರಿತ್ತು. ವಿವಾಹದ ಸಂದರ್ಭ 25 ತೊಲ ಚಿನ್ನ ಕೊಡುವಂತೆ ಪತಿ ರುಬೈಸ್ ಕುಟುಂಬ ಬೇಡಿಕೆ ಇಟ್ಟಿತ್ತು . ಆದರೆ ಬಡತನದಲ್ಲಿದ್ದ ಅಮೀರಾಳ ತಂದೆ ಮೊಹಮ್ಮದ್ 12 ತೊಲ ಬಂಗಾರ ಹಾಕಿ ಚೆನ್ನಾಗಿಯೇ ವಿವಾಹ ಮಾಡಿಕೊಟ್ಟಿದ್ದರು. ಆದರೆ ವಿವಾಹದ ಬಳಿಕ ಕುಂಜಿಲ ಗ್ರಾಮದ ಪತಿ ಮನೆಯಲ್ಲಿ ಅಮೀರಾಳಿಗೆ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿತ್ತು. ಪ್ರತಿದಿನ ಬಂಗಾರ ಮತ್ತು ಒಡವೆ ತರುವಂತೆ ಪತಿಮನೆಯವರು ಪೀಡಿಸುತ್ತಿದ್ದರು. ಹಾಗಾಗಿ ಹಿಂಸೆ ತಾಳಲಾರದೆ, ಹಲವು ಬಾರಿ ತಂದೆ-ತಾಯಿಗೆ ದೂರವಾಣಿ ಕರೆ ಮಾಡಿ ಅಮೀರಾ ಅತ್ತಿದ್ದಳು. ಕೊನೆಗೆ ಯಾವಾಗ ಹಿಂಸೆ ಜಾಸ್ತಿಯಾಯಿತೋ ತಂದೆ ಮೊಹಮ್ಮದ್ ಸ್ವತಃ ಹೋಗಿ ಮಗಳನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದರು. ಕಳೆದೊಂದು ತಿಂಗಳಿನಿಂದ ಅಮೀರಾ ತನ್ನ ತವರು ಮನೆಯಲ್ಲೇ ಉಳಿದಿದ್ದಳು.
ಮೊಬೈಲ್ ಫೋನ್ನಲ್ಲೇ ಟಾರ್ಚರ್ ಕೊಡುತ್ತಿದ್ದ ಪತಿ ರುಬೈಸ್ ಪತಿ ರುಬೈಸ್ ಕಳೆದ ಕೆಲವು ತಿಂಗಳಿನಿಂದ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಾನೆ. ಚಿನ್ನ ಅಥವಾ ಹಣ ತಾರದೆ ತನ್ನ ಮನೆಗೆ ಹೋಗದಂತೆ ಆತ ಪತ್ನಿ ಅಮೀರಾಗೆ ತಾಕೀತು ಮಾಡುತ್ತಿದ್ದ. ಮಾತ್ರವಲ್ಲದೆ ಇತ್ತೀಚೆಗೆ ಕೆಲವು ದಿನಗಳಿಂದ ನೀನು ಸಾಯಿ, ನಾನು ಬೇರೆ ಹುಡುಗಿಯನ್ನು ನೋಡಿದ್ದೇನೆ. ಅವಳನ್ನೇ ಮದುವೆಯಾಗುತ್ತೇನೆ ಎಂದು ಮಾನಸಿಕ ಹಿಂಸೆ ನೀಡುತ್ತಿದ್ದ. ಇವೆಲ್ಲವನ್ನೂ ತಂದೆ -ತಾಯಿ ಜೊತೆ ಮುಕ್ತವಾಗಿ ಅಮೀರಾ ಹೇಳಿಕೊಂಡಿರಲಿಲ್ಲ. ಯಾಕಂದರೆ ತಾನಾಗಿ ಇಷ್ಟಪಟ್ಟು ಆತನ್ನನ್ನು ವಿವಾಹವಾಗಿದ್ದಳು. ಇದೀಗ ತನ್ನಿಂದಾಗಿ ಬಡತನದಲ್ಲಿರುವ ತನ್ನ ತಂದೆಗೆ ಹಿಂಸೆಯಾಗುತ್ತಿದೆ ಎಂದು ನೊಂದುಕೊಳ್ಳುತ್ತಿದ್ದಳು. ಹಾಗಾಗಿ ತಾನೇ ನೋವನ್ನು ನುಂಗಿಕೊಳ್ಳುತ್ತಿದ್ದಳು ಎಂದು ತಂದೆ ಮುಹಮ್ಮದ್ ಬೇಸರ ವ್ಯಕ್ತಪಡಿಸುತ್ತಾರೆ.
ವಾಟ್ಸಾಪ್ನಲ್ಲೇ ತಲಾಖ್ ನೀಡಿದ ಪತಿ – ಮನನೊಂದು ನೇಣಿಗೆ ಶರಣಾದ ಪತ್ನಿ ಮೊನ್ನೆ ಅಕ್ಟೋಬರ್ 4ಕ್ಕೆ ಮಧ್ಯಾಹ್ನ 2.30ರ ಸುಮಾರಿಗೆ ಪತಿ ರುಬೈಸ್ ವಾಟ್ಸಾಪ್ ಆಡಿಯೋ ಮೆಸೇಜ್ ಒಂದನ್ನು ಕಳುಹಿಸಿದ್ದಾನೆ. ಅದನ್ನು ಕೇಳಿದ ಅಮೀರಾಳಿಗೆ ಜಂಘಾಬಲವೇ ಉಡಿದುಹೋಗಿದೆ. ಅದರಲ್ಲಿ ಆತ ಎರಡು ಬಾರಿ ತಲಾಖ್ ಹೇಳಿದ್ದ. ತಾನು ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಇಷ್ಟಪಟ್ಟು ವಿವಾಹವಾಗಿದ್ದ ಅಮೀರಾಳಿಗೆ ಪತಿಯಿಂದ ತಲಾಖ್ ಪದವನ್ನು ಕೇಳಿ ಅರಗಿಸಿಕೊಳ್ಳಲಾಗಿಲ್ಲ. ಈ ವಾಯ್ಸ್ ಮೆಸೇಜ್ ಬಂದ ಐದು ನಿಮಿಷದಲ್ಲೇ ಆಕೆ ನೇಣು ಹಾಕಿಕೊಂಡಿದ್ದಾಳೆ. 20 ವರ್ಷ ಸಾಕಿ ಸಲಹಿದ್ದ ತಮ್ಮ ಮುದ್ದಿನ ಮಗಳು ಕ್ಷಣಮಾತ್ರದಲ್ಲಿ ಹೆಣವಾಗಿ ಹೋಗಿದ್ದು, ಅಮೀರಾಳ ಕುಟುಂಬಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ಅಮೀರಾಳ ಮೊಬೈಲ್ ಲಾಕ್ ಆಗಿದ್ದು ಹಲವು ಮಾಹಿತಿಗಳು ಅದರಲ್ಲಿರುವ ಸಾಧ್ಯತೆ ಇದೆ ಎನ್ನುತ್ತಾರೆ ಪೋಷಕರು ಇದನ್ನೂ ಓದಿ: ಕೊಡಗಿನಲ್ಲಿ ಗೃಹಿಣಿ ಆತ್ಮಹತ್ಯೆ ಪ್ರಕರಣ; ಸಾವಿಗೆ ಹೊಸ ತಿರುವು ನೀಡಿದ ವಾಟ್ಯಾಪ್ ಚಾಟಿಂಗ್
ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ಕೊಟ್ಟು, ಪತ್ನಿಯ ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ ಪತಿ
Published On - 11:39 am, Wed, 13 October 21