kodagu: ಹುಲ್ಲು ಮೇಯುತ್ತಿದ್ದ ಹಸುಗಳ ಮೇಲೆ ಗುಂಡು ಹಾರಿಸಿ ಕೊಂದ ಎಸ್ಟೇಟ್ ಮಾಲೀಕ

ಕೊಡಗಿನ ವಿರಾಜಪೇಟೆ ತಾಲೂಕಿನ ಗುಹ್ಯ ಗ್ರಾಮದಲ್ಲಿ ಹುಲ್ಲು ಮೇಯುತ್ತಿದ್ದ ಹಸುಗಳ ಮೇಲೆ ಗುಂಡು ಹಾರಿಸಿ ಕೊಂದಿರುವ ಘಟನೆ ನಡೆದಿದೆ.

kodagu:  ಹುಲ್ಲು ಮೇಯುತ್ತಿದ್ದ ಹಸುಗಳ ಮೇಲೆ ಗುಂಡು ಹಾರಿಸಿ ಕೊಂದ ಎಸ್ಟೇಟ್ ಮಾಲೀಕ
ಕೊಡಗು
Edited By:

Updated on: Dec 07, 2022 | 10:29 AM

ಮಡಿಕೇರಿ: ವಿರಾಜಪೇಟೆ ತಾಲೂಕಿನ ಗುಹ್ಯ ಗ್ರಾಮದಲ್ಲಿ ಮೂರು ಹಸುಗಳು ಹುಲ್ಲು ಮೇಯುತ್ತಾ,  ನರೇಂದ್ರ ನಾಯ್ಡು ಎಂಬುವವರ ಎಸ್ಟೇಟ್​ಗೆ ನುಗ್ಗಿದ್ದು, ನನ್ನ ಜಾಗದಲ್ಲಿ ಮೇಯುತ್ತಿದೆ ಎಂಬ ಕಾರಣಕ್ಕಾಗಿ ಎಸ್ಟೇಟ್ ಮಾಲೀಕ ಮೂರು ಹಸುಗಳಲ್ಲಿ ಎರಡು ಹಸುಗಳನ್ನು ಗುಂಡಿಟ್ಟು ಕೊಂದು ಹಾಕಿದ್ದಾನೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಈ ಹಸುಗಳು ಸಿ.ಕೆ.ಮಣಿ ಎಂಬುವರಿಗೆ ಸೇರಿವೆ. ಹಲವು ಹಸುಗಳನ್ನು ಸಾಕಿದ್ದ ಇವರು ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಮೊನ್ನೆ (ಡಿ.5) ಮಣಿಯ ಮೂರು ಹಸುಗಳಲ್ಲಿ ಒಂದು ಮಾತ್ರ ಮನೆಗೆ ಹಿಂದಿರುಗಿತ್ತು. ಆ ಹಸು ಕೂಡ ಗಂಭೀರವಾಗಿ ಗಾಯಗೊಂಡಿರುವುದನ್ನು ಮಣಿ ಗಮನಿಸಿದ್ದಾರೆ. ನಂತರ ಹಸುವಿಗೆ ಗುಂಡು ತಗುಲಿದ್ದು ಗೊತ್ತಾಗಿ ಚಿಕಿತ್ಸೆ ನೀಡಲಾಗಿದೆ. ಇನ್ನು ಉಳಿದ ಎರಡು ಹಸುಗಳು ಪಕ್ಕದ ಎಸ್ಟೇಟ್‌ನಲ್ಲಿ ಸತ್ತು ಬಿದ್ದಿರುವ ಬಗ್ಗೆ ಮಾಹಿತಿ ಬಂದಿದ್ದು. ಮಣಿ ಅವರು ಹುಡುಕಾಡಲು ಹೋದಾಗ ನರೇಂದ್ರ ನಾಯ್ಡು ಒಡೆತನದ ಎಸ್ಟೇಟ್‌ನಲ್ಲಿ ಹಸುಗಳ ದೇಹ ಪತ್ತೆಯಾಗಿದೆ.

ಇದನ್ನೂ ಓದಿ:ಒಂದಕ್ಕಿಂತ ಹೆಚ್ಚಿನ ಬಂದೂಕು ಹೊಂದಿದ್ದರೆ ತಕ್ಷಣವೇ ಪೊಲೀಸ್​ ಠಾಣೆಗೆ ತಂದೊಪ್ಪಿಸಬೇಕು; ಕೊಡಗು ಜಿಲ್ಲಾಡಳಿತ ಕಟ್ಟಪ್ಪಣೆಗೆ ಜನಾಕ್ರೋಶ

ಹಸುಗಳ ದೇಹದ ಮೇಲೆ ಗುಂಡಿನ ಗುರುತುಗಳಿದ್ದು, ತನ್ನ ಹಸುಗಳನ್ನು ಗುಂಡಿಟ್ಟು ಕೊಲ್ಲಲಾಗಿದೆ ಎಂದು ಮಣಿ ಆರೋಪಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಸಿ.ಕೆ.ಮಣಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಸ್ಟೇಟ್ ಮಾಲೀಕನ ಹುಡುಕಾಟದಲ್ಲಿದ್ದಾರೆ. ಎಸ್ಟೇಟ್ ಮಾಲಿಕ ನರೇಂದ್ರ ನಾಯ್ಡು ತಲೆಮರೆಸಿಕೊಂಡಿದ್ದು, ಪೊಲೀಸರು ಅರೋಪಿಯ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:59 am, Wed, 7 December 22