ಕೊಡಗು: ಸಚಿವ ಬೋಸರಾಜು ಪಿಎ ಹೆಸರಿನಲ್ಲಿ ಹಣ ವಸೂಲಿ: ಇಬ್ಬರ ಬಂಧನ

ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಪಿಎ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು  ಬಂಧಿಸಿದ್ದಾರೆ. ಮೈಸೂರು ಮೂಲದ ರಘುನಾಥ, ಶಿವಮೂರ್ತಿ ಬಂಧಿತರು. ಕುಶಾಲನಗರ ಕಂದಾಯ ನಿರೀಕ್ಷಕರಿಂದ‌ 20 ಸಾವಿರ ರೂ. ಹಣ ವಸೂಲಿ ಮಾಡಿದ್ದಾರೆ. ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಕೊಡಗು: ಸಚಿವ ಬೋಸರಾಜು ಪಿಎ ಹೆಸರಿನಲ್ಲಿ ಹಣ ವಸೂಲಿ: ಇಬ್ಬರ ಬಂಧನ
ಬಂಧಿತರು
Follow us
Gopal AS
| Updated By: ಗಂಗಾಧರ​ ಬ. ಸಾಬೋಜಿ

Updated on: Nov 22, 2023 | 6:43 PM

ಕೊಡಗು, ನವೆಂಬರ್​​​ 22: ಸಚಿವರ ಪಿಎ ಹೆಸರಿನಲ್ಲಿ ಹಣ (money) ವಸೂಲಿ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು  ಬಂಧಿಸಿದ್ದಾರೆ. ಮೈಸೂರು ಮೂಲದ ರಘುನಾಥ, ಶಿವಮೂರ್ತಿ ಬಂಧಿತರು. ಕುಶಾಲನಗರ ಕಂದಾಯ ನಿರೀಕ್ಷಕರಿಂದ‌ 20 ಸಾವಿರ ರೂ. ಹಣ ವಸೂಲಿ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಪಿಎ ಎಂದು ಆರ್​ಐ ಸಂತೋಷ್​ಗೆ ಆರೋಪಿ ರಘುನಾಥ ಫೋನ್​ ಕರೆ ಮಾಡಿದ್ದು, ತುರ್ತಾಗಿ 20,000 ರೂ. ನೀಡುವಂತೆ ಬೇಡಿಕೆಯಿಟ್ಟಿದ್ದ. ಇತ್ತ ರೆವಿನ್ಯೂ ಇನ್ಸ್​ಪೆಕ್ಟರ್ ಸಂತೋಷ್ 20,000 ರೂ. ಗೂಗಲ್​ಪೇ ಮಾಡಿದ್ದಾರೆ. ಬಳಿಕ ಉಸ್ತುವಾರಿ ಸಚಿವರ ಕಚೇರಿಯಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ಬಯಲಾಗಿದೆ. ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಐಪಿಎಸ್, ಮಿಲ್ಟ್ರಿ ಅಧಿಕಾರಿಗಳ ಹೆಸರಲ್ಲಿ ವಂಚನೆ 

ಗದಗ: ಆನ್ ಲೈನ್ ವಂಚಕರು ಐಪಿಎಸ್, ಮಿಲ್ಟ್ರಿ ಅಧಿಕಾರಿಗಳ ಹೆಸರಲ್ಲಿ ಓರ್ವ ವ್ಯಕ್ತಿಗೆ ಸಾವಿರಾರೂ ರೂಪಾಯಿ ಪಂಗನಾಮ ಹಾಕಿದ್ದಾರೆ. ಚೆನ್ನಾಗಿ ಇಂಗ್ಲೀಷ್​​ನಲ್ಲಿ ಮಾತನಾಡಿ ವಂಚನೆ ಮಾಡಿದ್ದು, ವಂಚನೆಗೆ ಬಲಿಯಾದ ವ್ಯಕ್ತಿ ಹಣ ಕಳೆದುಕೊಂಡು ಈಗ ಒದ್ದಾಡುತ್ತಿದ್ದಾರೆ. ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ಸೈಬರ್ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಅಂತ ಕಿಡಿಕಾರಿದ್ದರು.

ಇದನ್ನೂ ಓದಿ: ಜಿಲ್ಲಾ ಉಸ್ತುವಾರಿ ಸಚಿವರ ಹೆಸರಲ್ಲಿ ಬೆದರಿಕೆ ಆರೋಪ; ಕರವೇ ಜಿಲ್ಲಾಧ್ಯಕ್ಷನ ವಿರುದ್ಧ ಎಫ್​ಐಆರ್​​

ಜಿಲ್ಲೆಯಲ್ಲೊಂದು‌ ಅಂಥದ್ದೊಂದು ಪ್ರಕರಣ‌ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಕರ್ನಾಟಕದ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣವರ ಹಾಗೂ‌ ಸಿಆರ್‌ಪಿಎಫ್ ಯೋಧನ ಹೆಸರಲ್ಲಿ ಮೋಸ ವಂಚನೆ ಮಾಡಲಾಗಿತ್ತು. ಈ ವಂಚನೆ ಬಲಿಯಾದವ್ರೇ ಗದಗನ ಬೆಟಗೇರಿಯ ರಮೇಶ ಹತ್ತಿಕಾಳ. 55,000 ರೂಪಾಯಿ ಪಂಗನಾಮ ಹಾಕಿದ ಬಳಿಕ ಎಚ್ಚೆತ್ತುಕೊಂಡಿದ್ದಾರೆ. ಫೇಸ್ಬುಕ್ ಮೂಲಕ ರಮೇಶ ಎಂಬುವರನ್ನು ವಂಚನೆ ಮಾಡಿದ್ದರು.

ಕಾರಿನಲ್ಲಿಟ್ಟಿದ್ದ 10 ಲಕ್ಷ ರೂ. ಹಣ ಕದ್ದು ಪರಾರಿ 

ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗದಲ್ಲಿ ಕಾರಿನಲ್ಲಿಟ್ಟಿದ್ದ 10 ಲಕ್ಷ ರೂ. ಹಣ ಕಳವು ಮಾಡಿರುವಂತಹ ಘಟನೆ ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲಕ್ಕಿಹಳ್ಳಿಯ ರೈತ ಮುದ್ದಪ್ಪ ಎಂಬುವರಿಗೆ ಸೇರಿದ್ದ 10 ಲಕ್ಷ ರೂ. ಹಣ ಕಳುವಾಗಿದೆ. ಬ್ಯಾಂಕ್​ನಿಂದ ಹಣ ಡ್ರಾ ಮಾಡಿಕೊಂಡು ಬಂದು ಕಾರಿನಲ್ಲಿಟ್ಟು, ಅಂಗಡಿಯೊಂದಕ್ಕೆ ತೆರಳಿದ್ದಾಗ ಕಳವು ಮಾಡಲಾಗಿದೆ.

ಇದನ್ನೂ ಓದಿ: ಆನ್​​​​ಲೈನ್​​​​ ಮೋಸ: 300 ರೂ. ಲಿಪ್‌ಸ್ಟಿಕ್​​ಗೆ 1 ಲಕ್ಷ ರೂ. ಕಳೆದುಕೊಂಡ ವೈದ್ಯೆ

ಹಣದ ಬ್ಯಾಗ್ ತೆಗೆದುಕೊಂಡು ಇಬ್ಬರು ಕಳ್ಳರು ಬೈಕ್​ನಲ್ಲಿ ಪರಾರಿ ಆಗಿದೆ. ಕಾರಿನಲ್ಲಿದ್ದ ಹಣ ಕಳವು ಮಾಡುತ್ತಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ ಆಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ