AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಿಮೆ ಹೂಡಿಕೆ ಹೆಚ್ಚು ಲಾಭದ ಆಮಿಷ: ಪೊಲೀಸ್ ಖೆಡ್ಡಾಕ್ಕೆ ಬಿದ್ದ ವಂಚಕರು

ಕೊಡಗು ಜಿಲ್ಲೆಯಲ್ಲಿ ಸ್ಮಾರ್ಟ್ ವಿಷನ್ ಎಂಬ ಹೆಸರಿನ ಅಕ್ರಮ ಹೂಡಿಕೆ ಯೋಜನೆಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಕಡಿಮೆ ಹೂಡಿಕೆಯಲ್ಲಿ ಭರ್ಜರಿ ಲಾಭದ ಆಮಿಷವೊಡ್ಡಿ ಸುಮಾರು 11 ಲಕ್ಷ ರೂ ಸಂಗ್ರಹಿಸಲಾಗಿದೆ. ಸದ್ಯ ಪೊಲೀಸರು ಐವರನ್ನು ಬಂಧಿಸಿದ್ದು, ಸಾರ್ವಜನಿಕರು ಮೋಸ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.

ಕಡಿಮೆ ಹೂಡಿಕೆ ಹೆಚ್ಚು ಲಾಭದ ಆಮಿಷ: ಪೊಲೀಸ್ ಖೆಡ್ಡಾಕ್ಕೆ ಬಿದ್ದ ವಂಚಕರು
ಕಡಿಮೆ ಹೂಡಿಕೆ ಹೆಚ್ಚು ಲಾಭದ ಆಮಿಷ: ಪೊಲೀಸ್ ಖೆಡ್ಡಾಕ್ಕೆ ಬಿದ್ದ ವಂಚಕರು
Follow us
Gopal AS
| Updated By: ಗಂಗಾಧರ​ ಬ. ಸಾಬೋಜಿ

Updated on:Feb 17, 2025 | 7:44 PM

ಮಡಿಕೇರಿ, ಫೆಬ್ರವರಿ 17: ಕೇವಲ 1000 ಸಾವಿ ರೂ ಕಟ್ಟಿದರೆ ಸಾಕು ಒಂದು ಥಾರ್ ಜೀಪ್, ಬೈಕ್, ಚಿನ್ನ, ಟಿವಿ ಬಹುಮಾನ, ಆಹಾ ಯಾರಿಗುಂಟು ಯಾರಿಗಿಲ್ಲ ಅಲ್ವಾ? ಹೀಗೆ ನಾನಾ ಸ್ಕೀಂ, ಮನಿ ಡಬ್ಲಿಂಗ್ (Money doubling) ಅಂತೆಲ್ಲಾ ಭರವಸೆ ನೀಡಿ ಜನರಿಗೆ ಕೊಟ್ಯಂತರ ರೂ ಪಂಗನಾಮ ಹಾಕೋ ಪ್ರಕರಣಗಳು ಹೊಸತೇನಲ್ಲ. ಕೊಡಗಿನಲ್ಲೂ ಅಂತಹ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಮುನ್ನೆಚ್ಚರಿಕೆಯಿಂದಾಗಿ ಜನರು ಮೋಸ ಹೋಗುವುದು ತಪ್ಪಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಎಸ್​ ವಿ ಸ್ಮಾರ್ಟ್​ ವಿಸನ್ ಈ ಹೆಸರು ಎಲ್ಲೋ ಕೇಳಿದ ಹಾಗೆ ಇದೆಯಲ್ಲಾ ಅಂತ ನಿಮಗೆ ಅನಿಸಿರಬಹುದು. ಒಬ್ಬೊಬ್ಬರಿಂದ ಸಾವಿರ ಸಾವಿರ ರೂಪಾಯಿ ಕಟ್ಟಿಸಕೊಳ್ಳಲು ಶುರು ಮಾಡುತ್ತೆ. ಒಂದಷ್ಟು ಮಂದಿಗೆ ಬಹುಮಾನ ನೀಡಿ ಆಸೆಯನ್ನೂ ಹುಟ್ಟಿಸುತ್ತೆ. ಈ ಕಂಪನಿ ಇದೀಗ ಕೊಡಗಿನಲ್ಲಿ ತನ್ನ ಜಾಲ ವಿಸ್ತರಣೆ ಮಾಡುವುದಕ್ಕೆ ಹೋಗಿ ಅಲ್ಲಿನ ಪೊಲೀಸರ ಅತಿಥಿಯಾಗಿದ್ದಾರೆ.

ಇದನ್ನೂ ಓದಿ: 50 ವರ್ಷದ ಅಂಕಲ್​ನ ಮದ್ವೆಯಾದ 18 ವರ್ಷದ ಯುವತಿ: ಹುಬ್ಬಳ್ಳಿಯಲ್ಲೊಂದು ವಿಚಿತ್ರ ಪ್ರೇಮ್ ಕಹಾನಿ

ಜಿಲ್ಲೆಯಲ್ಲಿ ವಿವಿಧೆಡೆ ಕಳೆದ ತಿಂಗಳಿನಿಂದ ಕಾರ್ಯಾಚರಣೆ ಮಾಡಿರುವ ಈ ಸಂಸ್ಥೆ ಈಗಾಗಲೇ ಒಂದು ಸಾವಿರ ಮಂದಿಯಿಂದ ತಲಾ 1000 ರೂಪಾಯಿ ಹಣವನ್ನೂ ಸಂಗ್ರಹ ಮಾಡಿದೆ. ಹಾಗೆ ಈ ಒಂದು ತಿಂಗಳಲ್ಲಿ 11 ಲಕ್ಷದ 10 ಸಾವಿರ ರೂ ಸಂಗ್ರಹಿಸಿದೆ. ಇನ್ನೂ ಸಾವಿರಾರು ಮಂದಿಯನ್ನು ಈ ಸ್ಕೀಂಗೆ ಸೇರಿಸಲು ಯೋಜನೆ ರೂಪಿಸಲಾಗುತ್ತಿತ್ತು. ಆದರೆ ಈ ರೀತಿ ಲಕ್ಷಾಂತರ ರೂ ಹಣ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಲು ಅವರು ಯಾವುದೇ ಅನುಮತಿ ಪಡೆದಿರಲಿಲ್ಲ. ಮತ್ತು ಅದಕ್ಕೆ ಕಾನೂನಿನಲ್ಲಿ ಅವಕಾಶವೂ ಇರಲಿಲ್ಲ. ಹಾಗಾಗಿ ಇವರ ಅವ್ಯವಹಾರದ ಬಗ್ಗೆ ಕೊಡಗು ಎಸ್ಪಿ ರಾಮರಾಜನ್​ಗೆ ಮಾಹಿತಿ ಸಿಕ್ಕ ತಕ್ಷಣವೇ ಮಡಿಕೇರಿ ನಗರ ಪೊಲಿಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಸೂರತ್ಕಲ್ ಮೂಲದ ಅಶ್ರಫ್, ಕೊಡಗಿನ ಸುಲೈಮಾನ್, ಅಬ್ದುಲ್, ಗಫೂರ್, ಮಹಮ್ಮದ್, ಕಿಶೋರ್ ಎಂದು ಗುರುತಿಸಲಾಗಿದೆ.

ಈ ರೀತಿ 1000 ಸಾವಿರ ರೂ ಹಣ ಕಟ್ಟಿಸಿಕೊಳ್ಳುವ ಇವರು ಗ್ರಾಹಕರಿಗೆ ಭರ್ಜರಿ ಬಹುಮಾನಗಳ ಆಫರ್ ನೀಡಿದ್ದಾರೆ. ಸೈಟು, ಥಾರ್ ಜೀಪು, ಬೈಕ್​ಗಳು ಟಿವಿ ಹೀಗೆ ದುಬಾರಿ ಬಹುಮಾನಗಳನ್ನು ನೀಡುವುದಾಗಿ ಹೇಳಿದ್ದಾರೆ. ಮೊದಲ ತಿಂಗಳು ಲಾಟರಿ ಹೊಡೆದವನಿಗೆ ಥಾರ್ ಜೀಪ್ ಬದಲು ಒಂದಷ್ಟು ಲಕ್ಷ ಹಣ ನೀಡಿದ್ದಾರೆ. ಏಳು ಮಂದಿಗೆ 7 ಬೈಕ್ ನೀಡುವ ಬದಲು ತಲಾ 42 ಸಾವಿರ ರೂ ಹಣ ನೀಡಿ ಅದರಲ್ಲಿ ಬೈಕ್ ಖರೀದಿಸುವಂತೆ ಹೇಳಿದ್ದಾರೆ. ಯಾಕಂದ್ರೆ ಮೊದಲ ತಿಂಗಳು ಕೇವಲ 11 ಲಕ್ಷ ರೂ ಹಣ ಮಾತ್ರ ಸಂಗ್ರಹವಾಗಿತ್ತು. ಮುಂದಿನ ದಿನಗಳಲ್ಲಿ ಲಕ್ಷಾಂತರ ಮಂದಿ ಹೂಡಿಕೆ ಮಾಡುವಾಗ ಘೋಷಿಸಿದ ಬಹುಮಾನ ನೀಡುವ ಯೋಜನೆ ಇವರದ್ದಾಗಿತ್ತು. ಅಥವಾ ಕೋಟಿ ಕೋಟಿ ರೂ ಹಣ ಸಂಗ್ರಹಿಸಿದ ಬಳಿಕ ಪಂಗನಾಮ ಹಾಕಿ ರಾತ್ರೋರಾತ್ರಿ ಓಡಿ ಹೋಗುವ ಯೋಜನೆಯೂ ಇದ್ದಿರಬಹುದು ಎನ್ನುತ್ತಾರೆ ಪೊಲಿಸರು.

ಇದನ್ನೂ ಓದಿ: ಪರಸ್ತ್ರಿಯೊಂದಿಗೆ ಪತಿ ಲವ್ವಿಡವ್ವಿ: ಮಗಳನ್ನ ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ

ಸದ್ಯ ಪೊಲೀಸರ ಮುನ್ನೆಚ್ಚರಿಕೆಯಿಂದಾಗಿ ಕೊಡಗಿನಲ್ಲಿ ಬೃಹತ್ ವಂಚನೆಯ ಜಾಲವೊಂದು ಬಯಲಾಗಿದೆ. ಎಸ್​ವಿ ಸ್ಮಾರ್ಟ್​ ವಿಷನ್ ಅಥವಾ ಇದೇ ರೀತಿಯ ಬೇರೆ ಬೇರೆ ಸ್ಕಿಂಗಳು ಕಾರ್ಯಾಚರಿಸುತ್ತಿದ್ದರೆ ಅಂತಹ ಯೋಜನೆಗಳಿಗೆ ಹಣ ಹೂಡಿಕೆ ಮಾಡದಂತೆಯೂ ಮತ್ತು ಈ ಬಗ್ಗೆ ಪೊಲಿಸರಿಗೆ ಮಾಹಿತಿ ನೀಡುವಂತೆಯೂ ಪೊಲಿಸರು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:27 pm, Mon, 17 February 25

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್