Sign In

By signing in or creating an account, you agree with Associated Broadcasting Company's Terms & Conditions and Privacy Policy.

MEA: ಕುವೈತ್​ ನರಕದಿಂದ ಪಾರು ಮಾಡಲು ವಿದೇಶಾಂಗ ಇಲಾಖೆಗೆ ಮೊರೆಯಿಟ್ಟ ಕೊಡಗು ಕಾರ್ಮಿಕ ಮಹಿಳೆ

ಪಾರ್ವತಿ ಅವರನ್ನ ವಿಸಿಟಿಂಗ್ ವೀಸಾದಲ್ಲಿ ಕುವೈತ್​ಗೆ ಕಳುಹಿಸಲಾಗಿರುವುದರಿಂದ ಅವರ ವೀಸಾ ಅವಧಿಯೂ ಮುಗಿದು ಹೋಗಿದೆ. ಹಾಗಾಗಿ ಕಾನೂನು ಸಮಸ್ಯೆ ಕೂಡ ಎದುರಾಗಿದೆ. ಒಂದುಕಡೆ ಈ ಕಾನೂನು ಸಮಸ್ಯೆ ನಿವಾರಿಸಿ ಪಾರ್ವತಿಯನ್ನ ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಜವಾಬ್ದಾರಿ ಇದೀಗ ಕೊಡಗು ಜಿಲ್ಲಾಡಳಿತದ ಮೇಲಿದೆ.

MEA: ಕುವೈತ್​ ನರಕದಿಂದ ಪಾರು ಮಾಡಲು ವಿದೇಶಾಂಗ ಇಲಾಖೆಗೆ ಮೊರೆಯಿಟ್ಟ ಕೊಡಗು ಕಾರ್ಮಿಕ ಮಹಿಳೆ
ಕುವೈತ್​ ನರಕದ ಬದುಕಿಂದ ಪಾರು ಮಾಡಲು ಈಗ ವಿದೇಶಾಂಗ ಇಲಾಖೆಗೆ ಮೊರೆಯಿಟ್ಟ ಕೊಡಗು ಮಹಿಳೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 21, 2023 | 2:33 PM

ಆಕೆಯದ್ದು (woman) ಕುದಿಯುವ ಎಣ್ಣೆ ಬಾಣಲೆಯಿಂದ ಬೆಂಕಿಗೆ ಬಿದ್ದ ಪರಿಸ್ಥಿತಿ. ಒಂದ್ಕಡೆ ಗಂಡನನ್ನ ಕಳೆದುಕೊಂಡ ನೋವು. ಮತ್ತೊಂದ್ಕಡೆ ವಯಸ್ಸಾದ ತಾಯಿ ಮತ್ತು ಇಬ್ಬರು ಮಕ್ಕಳನ್ನ ಸಾಕುವ ಜವಾಬ್ದಾರಿ. ಅದಕ್ಕಾಗಿ ಹೋಗಿದ್ದು ದೂರದ ಕುವೈತ್​ಗೆ. ಆದ್ರೆ ಅಲ್ಲಿಗೆ ಹೋದ ಆ ಮಹಿಳೆಯದ್ದು ಇದೀಗ ಅಕ್ಷರಶಃ ನರಕ ಸದೃಶ ಜೀವನವಾಗಿದೆ. ಫೋಟೋದಲ್ಲಿ ಕಾಣುವ ಮಹಿಳೆಯ ಹೆಸರು ಪಾರ್ವತಿ ಅಂತಾ. 32 ವರ್ಷದ ಇವರು ಕೊಡಗು ಜಿಲ್ಲೆ (Kodagu) ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ನಿವಾಸಿ. ಸಧ್ಯ ಇವರ ಸ್ಥಿತಿ ಅಯ್ಯೋ ಪಾಪ ಎಂಬಂತಾಗಿದೆ. ಯಾಕಂದ್ರೆ ಇವರು ಸದ್ಯ ಸಿಲುಕಿರೋದು ದೂರದ ಕುವೈತ್​ ದೇಶದಲ್ಲಿ. ಏಜೆಂಟ್​ಗಳ ಮೋಸಕ್ಕೆ ಸಿಲುಕಿ ಕುವೈತ್ (Kuwait) ದೇಶದಲ್ಲಿ ಗೃಹಬಂಧನಕ್ಕೆ ಸಿಲುಕಿ ನರಳುತ್ತಿದ್ದಾರೆ.

ತಮ್ಮನ್ನು ಈ ನರಕದಿಂದ ಪಾರು ಮಾಡಿ ಎಂದು ಅಂಗಲಾಚುತ್ತಿದ್ದಾರೆ. ಇತ್ತೀಚೆಗೆ ಗಂಡನನ್ನ ಕಳೆದುಕೊಂಡಿದ್ದ ಇವರಿಗೆ ತಮ್ಮಿಬ್ಬರು ಮಕ್ಕಳು ಮತ್ತು ವಯಸ್ಸಾದ ತಾಯಿಯಯನ್ನ ಸಾಕುವ ಜವಾಬ್ದಾರಿ ಇತ್ತು. ಇಂತಹ ಸಂದರ್ಭದಲ್ಲಿ ಕೇರಳ ಮೂಲದ ಆರೀಫ್​ ಎಂಬ ಏಜೆಂಟ್​ ಕುವೈತ್​ ದೇಶದಲ್ಲಿ ಭಾರತೀಯ ಮೂಲದ ಕುಟುಂಬಕ್ಕೆ ಮನೆ ಕೆಲಸದವರು ಬೇಕಾಗಿದ್ದು ಅಲ್ಲಿಗೆ ತೆರಳುವಂತೆ ಪುಸಲಾಯಿಸಿ 2022ರ ಅಕ್ಟೋಬರ್ ನಲ್ಲಿ ಕಳಿಸಿಬಿಟ್ಟಿದ್ದಾನೆ.

ಪಾರ್ವತಿ ಅವರನ್ನ ಶ್ರೀಲಂಕಾ ಮೂಲದ ಒಬ್ಬ ಏಜೆಂಟ್ ಬರಮಾಡಿಕೊಂಡು, ವಿದೇಶಿ ಕುಟುಂಬವೊಂದರ ಮನೆಗೆ ಕೆಲಸಕ್ಕೆ ಕಳುಹಿಸಿದ್ದಾನೆ. ಆದ್ರೆ ಸ್ವಲ್ಪ ದಿನ ಕಳೆಯುವುದರಲ್ಲಿ ವಿದೇಶಿ ಮಾಲೀಕ ಇನ್ನಿಲ್ಲದ ಕಿರುಕುಳ ನೀಡಿದ್ದಾನಂತೆ. ಹಾಗಾಗಿ ಅಲ್ಲಿಂದ ತನ್ನನ್ನ ಬಿಡಿಸುವಂತೆ ಏಜೆಂಟ್​ಗೆ ಮನವಿ ಮಾಡಿದ್ದಾಳೆ. ಆದ್ರೆ ಆತ ಆ ವಿದೇಶಿ ಕುಟುಂಬದ ಕೈಯಿಂದ 3 ಲಕ್ಷ ರೂ ಹಣ ಪಡೆದಿದ್ದನಂತೆ. ಹಾಗಾಗಿ ವಿದೇಶಿ ಮಾಲೀಕ ಪಾರ್ವತಿಯ ಪಾಸ್​ಪೋರ್ಟ್​ ಅನ್ನು ಒತ್ತೆಯಾಗಿಟ್ಟುಕೊಂಡು ಆಕೆಯನ್ನ ಮಾತ್ರ ಕಳುಹಿಸಿದ್ದಾನೆ.

ಮಾಲೀಕನ ಮನೆಯಿಂದ ಹೊರ ಬಂದಿರುವ ಪಾರ್ವತಿಯನ್ನ ಶ್ರೀಲಂಕಾ ಏಜೆಂಟ್​ ಮತ್ತೆಲ್ಲೋ ಕರೆದುಕೊಂಡು ಹೋಗಿ, ಅಲ್ಲಿ ಬಿಟ್ಟುಬಂದು ಕೈತೊಳೆದುಕೊಂಡಿದ್ದಾನೆ. ಸಧ್ಯ ಇವರು ಕುವೈತ್ ನಗರದ ತರಾಫ್ ಬಿನ್ ಅಲ್​ ಅಬ್ ಸ್ಟ್ರೀಟ್​ ಬಳಿಯ ಕಟ್ಟಡವೊಂದರಲ್ಲಿ ಗೃಹಬಂಧನದಲ್ಲಿದ್ದಾರೆ. ಇಲ್ಲಿ ಪಾರ್ವತಿ ಅವರಿಗೆ ವೇತನವೇನೂ ಇಲ್ಲ. ದಿನಪೂರ್ತಿ ಕೆಲಸ ಮಾಡಿಸಿಕೊಂಡು ಹೊರಗಡೆಗೇ ಬಿಡುತ್ತಿಲ್ಲವಂತೆ.

ಇತ್ತ ಪಾರ್ವತಿಯ ತಾಯಿ ಕೊಡಗು ಜಿಲ್ಲಾಧಿಕಾರಿಗೆ ದೂರು ನೀಡಿದ್ದು ಮಗಳನ್ನ ಬಿಡಿಸಿಕೊಡುವಂತೆ ಮನವಿ ಮಾಡಿದ್ದಾರೆ. ಈ ಪ್ರಕರಣವನ್ನ ಡಿಸಿ ಡಾ ಬಿಸಿ ಸತೀಶ್ ಅವರು ವಿಪತ್ತು ನಿರ್ವಹಣಾ ಘಟಕಕ್ಕೆ ವರ್ಗಾಯಿಸಿದ್ದಾರೆ. ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಅನನ್ಯ ಕುಮಾರ್ ಈಗಾಗಲೆ ಭಾರತೀಯ ರಾಯಭಾರಿ ಕಚೇರಿಯನ್ನ ಸಂಪರ್ಕಿಸಿದ್ದಾರೆ.

ಆದ್ರೆ ರಾಯಭಾರಿ ಕಚೇರಿ ಅಧಿಕಾರಿಗಳು ಪಾರ್ವತಿಗೆ ಕರೆ ಮಾಡಿ ಕುವೈತ್​ನ ರಾಯಭಾರಿ ಕಚೇರಿಗೆ ಬರುವಂತೆ ಸೂಚಿಸಿದ್ದಾರೆ. ಆದ್ರೆ ಗೃಹಬಂಧನದಲ್ಲಿರೋ ಪಾರ್ವತಿಗೆ ಮನೆಯಿಂದ ಹೊರಬರಲೇ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಟಿವಿ9 ಸ್ಥಳೀಯ ಶಾಸಕ ಕೆಜಿ ಬೋಪಯ್ಯ ಅವರ ಗಮನ ಸೆಳೆದಿದೆ. ವಿದೇಶಾಂಗ ಇಲಾಖೆಯಲ್ಲಿ ( Ministry of External Affairs ) ಇಂತಹ ಪ್ರಕರಣಗಳ ನಿರ್ವಹಣೆಗೆಂದೇ ಒಂದು ವಿಭಾಗವಿದೆ. ಅದರ ಗಮನಕ್ಕೆ ತರುವುದಾಗಿ ಬೋಪಯ್ಯ ಭರವಸೆ ನೀಡಿದ್ದಾರೆ.

ಈ ಮಧ್ಯೆ ಪಾರ್ವತಿ ಅವರನ್ನ ವಿಸಿಟಿಂಗ್ ವೀಸಾದಲ್ಲಿ ಕುವೈತ್​ಗೆ ಕಳುಹಿಸಲಾಗಿರುವುದರಿಂದ ಅವರ ವೀಸಾ ಅವಧಿಯೂ ಮುಗಿದು ಹೋಗಿದೆ. ಹಾಗಾಗಿ ಕಾನೂನು ಸಮಸ್ಯೆ ಕೂಡ ಎದುರಾಗಿದೆ. ಒಂದುಕಡೆ ಈ ಕಾನೂನು ಸಮಸ್ಯೆ ನಿವಾರಿಸಿ ಪಾರ್ವತಿಯನ್ನ ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಜವಾಬ್ದಾರಿ ಇದೀಗ ಕೊಡಗು ಜಿಲ್ಲಾಡಳಿತದ ಮೇಲಿದೆ.

ವರದಿ: ಗೋಪಾಲ್ ಸೋಮಯ್ಯ, ಟಿವಿ 9, ಕೊಡಗು 

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್