
ಮಡಿಕೇರಿ: ಹಿಂದೂ ಕಾರ್ಯಕರ್ತ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೊಡಗು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದಿಂದ ತೀರ್ಪು ನೀಡಿದೆ. ಪ್ರಕರಣದ ಒಂಬತ್ತು ಆರೋಪಿಗಳು ದೋಷ ಮುಕ್ತ ಎಂದು ನ್ಯಾಯಾಲಯ ತೀರ್ಪು ನೀಡಿದೆ. ತುಫೈಲ್, ನಯಾಜ್, ಅಫ್ರಿನ್, ಮೊಹಮ್ಮದ್, ಮುಸ್ತಾಫ, ಇಲಿಯಾಸ್, ಇರ್ಫಾನ್, ಮಝೀದ್, ಹ್ಯಾರಿಸ್ ಖುಲಾಸೆ ಮಾಡಲಾಗಿದೆ.
2016 ರ ಆಗಸ್ಟ್ 14 ರಂದು ಕೊಲೆ ಪ್ರಕರಣ ನಡೆದಿತ್ತು. ಆಟೋ ರಿಕ್ಷಾ ಚಾಲಕನಾಗಿದ್ದ ಹಾಗೂ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನಾಗಿದ್ದ ಪ್ರವೀಣ್ ಹತ್ಯೆ ನಡೆದಿತ್ತು. ಆಗಸ್ಟ್ 14ರ ರಾತ್ರಿ ನಡೆದ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದ, ಪ್ರವೀಣ್ ರಿಕ್ಷಾ ಬಾಡಿಗೆ ಪಡೆದು ಚಾಕುವಿನಿಂದ ಇರಿದು ಕೊಲೆ ನಡೆಸಲಾಗಿತ್ತು. ಕುಶಾಲನಗರ ತಾಲೂಕಿನ ಗುಡ್ಡೆಹೊಸೂರಿನಲ್ಲಿ ಕೊಲೆ ನಡೆದಿತ್ತು. ಇದೀಗ ಆರೋಪಿಗಳು ದೋಷ ಮುಕ್ತ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಪದ್ಮನಾಭ ತೀರ್ಥರ ಆರಾಧನೆಗೆ ಅವಕಾಶ ವಿಚಾರ; ಹೈಕೋರ್ಟ್ ಏಕಸದಸ್ಯ ಪೀಠದಿಂದ ಆದೇಶ
ಪದ್ಮನಾಭ ತೀರ್ಥರ ಆರಾಧನೆಗೆ ಅವಕಾಶ ವಿಚಾರವಾಗಿ ಹೈಕೋರ್ಟ್ ಏಕಸದಸ್ಯ ಪೀಠದಿಂದ ಆದೇಶ ಹೊರಡಿಸಲಾಗಿದೆ. ಮೊದಲ ಒಂದೂವರೆ ದಿನ ಉತ್ತರಾಧಿ ಮಠದಿಂದ ಪೂಜೆ ಹಾಗೂ ನಂತರ ಒಂದೂವರೆ ದಿನ ಮಂತ್ರಾಲಯ ಮಠದಿಂದ ಪೂಜೆ ಎಂದು ಆದೇಶ ನೀಡಲಾಗಿದೆ. ಆರಾಧನೆ ವಿಚಾರಕ್ಕೆ ಅಸಮಾಧಾನ ಕೋರ್ಟ್ ಮೆಟ್ಟಿಲೇರಿತ್ತು. ಪ್ರತಿ ಬಾರಿಯೂ ಕೋರ್ಟ್ ಆದೇಶ ಪಡೆದೇ ಆರಾಧನೆ ಮಾಡಲಾಗುತ್ತಿತ್ತು. ಕೋರ್ಟ್ ಇರುವುದು ನೊಂದವರ ವ್ಯಾಜ್ಯ ಬಗೆಹರಿಸಲು, ಇಂತಹ ವ್ಯಾಜ್ಯ ಪರಂಪರೆ ಮುಂದುವರಿಕೆ ಸೂಕ್ತವಲ್ಲ. ಮರದ ನೆರಳಲ್ಲಿ ಕುಳಿತು ಶಾಶ್ವತ ಪರಿಹಾರ ಕಂಡುಕೊಳ್ಳಿ ಎಂದು ಎರಡೂ ಮಠಗಳಿಗೆ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ತೀರ್ಪು ನೀಡಲಾಗಿದೆ. ಡಿಸೆಂಬರ್ 2, 3, 4 ರಂದು ಪದ್ಮನಾಭ ತೀರ್ಥರ ಆರಾಧನೆ ನಡೆಯಲಿದೆ.
ಇದನ್ನೂ ಓದಿ: ನಿಷೇಧಾಜ್ಞೆ ಉಲ್ಲಂಘನೆ: ಮಡಿಕೇರಿಯಲ್ಲಿ ಹಿಂದೂ ಸಂಘಟನೆ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು, ಕಾರ್ಯಕರ್ತರ ಆಕ್ರೋಶ
ಇದನ್ನೂ ಓದಿ: Shocking News: ಮಡಿಕೇರಿಯ ಮಹಿಳೆಯ ಹೊಟ್ಟೆಯಲ್ಲಿತ್ತು 1.5 ಕೆಜಿ ಕೂದಲು!
Published On - 4:53 pm, Tue, 30 November 21