ನಿಷೇಧಾಜ್ಞೆ ಉಲ್ಲಂಘನೆ: ಮಡಿಕೇರಿಯಲ್ಲಿ ಹಿಂದೂ ಸಂಘಟನೆ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು, ಕಾರ್ಯಕರ್ತರ ಆಕ್ರೋಶ
ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೊರ ಬಂದಾಗ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. 6 ವರ್ಷದ ಹಿಂದೆ ಟಿಪ್ಪು ಜಯಂತಿ ಗಲಭೆಯಲ್ಲಿ ಕುಟ್ಟಪ್ಪ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕುಟ್ಟಪ್ಪ ಹೆಸರಿನಲ್ಲಿ ಪೂಜೆ ಸಲ್ಲಿಸಲು ಹಿಂದೂ ಮುಖಂಡರು ದೇವಸ್ಥಾನಕ್ಕೆ ಬಂದಿದ್ದರು.
ಮಡಿಕೇರಿ: ಟಿಪ್ಪು ಜಯಂತಿ ಕರಾಳ ನೆನಪು ಹಿನ್ನೆಲೆ ಇಂದು ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಆದ್ರೆ 144 ನಿಷೇಧಾಜ್ಞೆ ಉಲ್ಲಂಘಿಸಿ ಹಿಂದೂ ಸಂಘಟನೆ ಮೆರವಣಿಗೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೊರ ಬಂದಾಗ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. 6 ವರ್ಷದ ಹಿಂದೆ ಟಿಪ್ಪು ಜಯಂತಿ ಗಲಭೆಯಲ್ಲಿ ಕುಟ್ಟಪ್ಪ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕುಟ್ಟಪ್ಪ ಹೆಸರಿನಲ್ಲಿ ಪೂಜೆ ಸಲ್ಲಿಸಲು ಹಿಂದೂ ಮುಖಂಡರು ದೇವಸ್ಥಾನಕ್ಕೆ ಬಂದಿದ್ದರು. ಪೂಜೆ ಮುಗಿಸಿ ಹೊರಕ್ಕೆ ಬರುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೇವಸ್ಥಾನದ ಆವರಣದಲ್ಲಿ ಕೆಲಕಾಲ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದು ಮುಂಜಾಗ್ರತಾ ಕ್ರಮವಾಗಿ ಮುಖಂಡರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಆದರೆ ಈಗ ಮುಖಂಡರನ್ನು ವಶಕ್ಕೆ ಪಡೆದದನ್ನು ಖಂಡಿಸಿ ಮಡಿಕೇರಿಯಲ್ಲಿ ಪೊಲೀಸರ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.
ಟಿಪ್ಪು ಜಯಂತಿ ಆಚರಣೆ ಈ ಮೊದಲು ವಿವಾದ ಸೃಷ್ಟಿಸಿತ್ತು. ಆಚರಣೆಯ ಕಾರಣದಿಂದ ಮಡಿಕೇರಿಯಲ್ಲಿ ಗಲಭೆಯೂ ಉಂಟಾಗಿತ್ತು. ಟಿಪ್ಪು ಜಯಂತಿ ಆಚರಣೆ ಕೋಮು ಸಂಬಂಧಿ ಗಲಭೆಗಳಿಗೂ ಸಾಕ್ಷಿಯಾಗಿತ್ತು. ಈ ಬಗ್ಗೆ ರಾಜಕೀಯ ಪಕ್ಷಗಳು ವಾದ, ಪ್ರತಿವಾದ ಮಾಡಿಕೊಂಡಿದ್ದವು. ಟಿಪ್ಪು ಜಯಂತಿ ಕರಾಳ ನೆನಪಿನ ಹಿನ್ನೆಲೆಯಲ್ಲಿ ಇದೀಗ ನಾಳೆ (ನವೆಂಬರ್ 10) ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ: ಟಿಪ್ಪು ಜಯಂತಿ ಆಚರಿಸಿದ್ದ ಸಿದ್ದರಾಮಯ್ಯರಿಂದ ಪಾಠ ಕಲಿಯಬೇಕಿಲ್ಲ: ನಳಿನ್ ಕುಮಾರ್ ಕಟೀಲ್