ಬಾಲಕಿಗೆ ಜನಿಸಿದ್ದ ಶಿಶು ಶವವಾಗಿ ಪತ್ತೆ ಕೇಸ್: ಮೂವರ ಬಂಧನ, ಕೊಂದು ಹುಟ್ಟೇ ಇಲ್ಲ ಎಂದ ಅಜ್ಜಿ
ಕೊಡಗು ಜಿಲ್ಲೆಯಲ್ಲಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ನವಜಾತ ಶಿಶುವಿನ ಶವ ಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಶುವಿನ ತಾಯಿ, ಅಜ್ಜಿ ಮತ್ತು ತಾತನನ್ನು ಬಂಧಿಸಲಾಗಿದೆ. 14 ವರ್ಷದ ಬಾಲಕಿಗೆ ಜನಿಸಿದ ಶಿಶು ನಾಪತ್ತೆಯಾಗಿತ್ತು. ಒಂದು ವಾರದ ನಂತರ ಶಿಶುವಿನ ಶವ ಪತ್ತೆಯಾಗಿತ್ತು. ಪ್ರಕರಣ ಜಿಲ್ಲೆಯಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.
ಕೊಡಗು, ನವೆಂಬರ್ 15: ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ನವಜಾತ ಶಿಶು (baby) ಶವವಾಗಿ ಪತ್ತೆ ಕೇಸ್ಗೆ ಸಂಬಂಧಿಸಿದಂತೆ ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಠಾಣೆ ಪೊಲೀಸರಿಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ನವಜಾತ ಶಿಶುವಿನ ತಾಯಿ, ಅಜ್ಜಿ ಮತ್ತು ತಾತನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯಲ್ಲಿ ಪ್ರಕರಣ ತೀವ್ರ ಸಂಚಲನ ಸೃಷ್ಟಿಸಿತ್ತು.
ಶಿಶು ಕೊಂದು ಹುಟ್ಟೇ ಇಲ್ಲ ಎಂದ ಅಜ್ಜಿ
14 ವರ್ಷದ ಬಾಲಕಿಗೆ ಮಗು ಜನಿಸಿತ್ತು. ಜನಿಸಿದ ಬಳಿಕ ನಿಗೂಢವಾಗಿ ಶಿಶು ನಾಪತ್ತೆಯಾಗಿತ್ತು. 1 ವಾರದ ಬಳಿಕ ಗುಂಡಿಯಲ್ಲಿ ಶಿಶುವಿನ ಶವ ಪತ್ತೆಯಾಗಿತ್ತು. ಅಜ್ಜಿಯೇ ಕೊಂದು ಹೂತಿಟ್ಟಿದ್ದ ಶಂಕೆ ವ್ಯಕ್ತವಾಗಿತ್ತು. ಆದರೆ ಶಿಶು ಕೊಂದು ಹುಟ್ಟೇ ಇಲ್ಲ ಎಂದು ಅಜ್ಜಿ ವಾದಿಸಿದ್ದರು. ಸದ್ಯ ಶಿಶುವಿನ ಪೋಷಕರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ 12 ಅಂತರಾಜ್ಯ ಕಳ್ಳರ ಬಂಧನ: 61 ಬೈಕ್ಗಳು ವಶಕ್ಕೆ
ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ 17ರಂದು ಅಪ್ರಾಪ್ತೆ ಬಾಲಕಿ ರಹಸ್ಯವಾಗಿ ಮಗುವಿಗೆ ಜನ್ಮ ನೀಡಿದ್ದಳು. ಹೆರಿಗೆಯಾಗಿ 4 ದಿನ ಕಳೆದರೂ ನವಜಾತ ಶಿಶು ಪತ್ತೆಯಾಗಿರಲಿಲ್ಲ. ಮೊದಲಿಗೆ ತಾಯಿಯೇ ಮಗುವನ್ನು ನಾಪತ್ತೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು.
ಇನ್ನು ಅಪ್ರಾಪ್ತೆ ಬಾಲಕಿ ಗರ್ಭಿಣಿ ಆಗಲು 13 ವರ್ಷದ ಬಾಲಕ ಕಾರಣ ಎಂದು ಬಾಲಕಿ ಆರೋಪಿಸಿದ್ದಳು. ಹೀಗಾಗಿ ಬಾಲಕನ ವಿರುದ್ಧ ಕೂಡ ಎಫ್ಐಆರ್ ದಾಖಲಾಗಿತ್ತು. ಆದರೆ ಶಿಶುವಿನ ಡಿಎಸ್ಎ ಪರೀಕ್ಷೆಗೆ ಬಾಲಕನ ಪೋಷಕರು ಆಗ್ರಹಿಸಿದ್ದರು.
ಇದನ್ನೂ ಓದಿ: ವೈದ್ಯೆಯ ಕಾಲ್ ರೆಕಾರ್ಡ್ ತೆಗೆದು ಕಿರುಕುಳ: ಬಸವನಗುಡಿ PSI ವಿರುದ್ಧ ಆಯುಕ್ತರಿಗೆ ದೂರು
ಕರ್ನಾಟಕದಲ್ಲಿ ಸಾವಿರ ಮಕ್ಕಳು ಜನಿಸಿದರೆ 19 ಶಿಶುಗಳು ಮರಣ ಹೊಂದುತ್ತಿದೆ. ಆದರೆ ಕೊಡಗಿನಲ್ಲಿ ಈ ಪ್ರಮಾಣ ಕೇವಲ ಶೇ 9ರಷ್ಟು ಮಾತ್ರ ಇದೆ. ಆ ಮೂಲಕ ಜಿಲ್ಲೆಯಲ್ಲಿ ಶಿಶು ಮರಣದ ದರ ರಾಜ್ಯದ ಸೂಚ್ಯಂಕಕ್ಕಿಂತೂ ಶೇ 50ಕ್ಕೂ ಕಡಿಮೆ ಇದೆ. ಹೀಗಾಗಿ ಇಲ್ಲಿ ಹುಟ್ಟುವ ಮಕ್ಕಳು ಸುರಕ್ಷಿತ ಎಂಬ ಕಾರಣಕ್ಕೆ ಬೇರೆ ಬೇರೆ ಜಿಲ್ಲೆಗಳಿಂದಲೂ ಗರ್ಭಿಣಿಯರು ಇಲ್ಲಿಗೆ ಬಂದು ದಾಖಲಾಗುತ್ತಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.