ನೆರೆ ಸಂತ್ರಸ್ತೆಯ ಹಣ ಪೀಕಿದ ಆರೋಪ: ಬಿಲ್ ಕಲೆಕ್ಟರ್ ವಿರುದ್ಧ ದೂರು
ಮಡಿಕೇರಿ: 2018ರಲ್ಲಿ ಬಂದಿದ್ದ ಭೀಕರ ಪ್ರವಾಹದ ವೇಳೆ ಹಲವರು ಮನೆ, ಜಮೀನು ಕಳೆದುಕೊಂಡು ಬೀದಿಗೆ ಬಂದಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದ್ರೆ, ಮನೆ ಮಠ ಕಳೆದುಕೊಂಡಿರುವವರಿಗೆ ಸಹಾಯ ಮಾಡುವ ಬದಲು ವೃದ್ಧ ಪ್ರವಾಹ ಸಂತ್ರಸ್ತೆಯಿಂದ ಹಣ ಪೀಕಿರುವ ಘಟನೆ ಬೆಳಕಿಗೆ ಬಂದಿದೆ. ಮಡಿಕೇರಿ ನಗರಸಭೆಯ ಬಿಲ್ ಕಲೆಕ್ಟರ್ ಲೋಹಿತ್ ವಿರುದ್ಧ ಹಣ ಪಡೆದಿರುವ ಗಂಭೀರ ಆರೋಪ ಕೇಳಿಬಂದಿದೆ. 2018ರ ಪ್ರವಾಹದ ವೇಳೆ ನೂರ್‌ಜಹಾನ್ ಎಂಬುವರ ಮನೆಗೆ ಹಾನಿಯಾಗಿತ್ತು. ಈ ವೇಳೆ ಬಾಡಿಗೆ ರೂಪದಲ್ಲಿ ನೂರ್‌ಜಹಾನ್‌ಗೆ ಸರ್ಕಾರ 1.40 […]
ಮಡಿಕೇರಿ: 2018ರಲ್ಲಿ ಬಂದಿದ್ದ ಭೀಕರ ಪ್ರವಾಹದ ವೇಳೆ ಹಲವರು ಮನೆ, ಜಮೀನು ಕಳೆದುಕೊಂಡು ಬೀದಿಗೆ ಬಂದಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದ್ರೆ, ಮನೆ ಮಠ ಕಳೆದುಕೊಂಡಿರುವವರಿಗೆ ಸಹಾಯ ಮಾಡುವ ಬದಲು ವೃದ್ಧ ಪ್ರವಾಹ ಸಂತ್ರಸ್ತೆಯಿಂದ ಹಣ ಪೀಕಿರುವ ಘಟನೆ ಬೆಳಕಿಗೆ ಬಂದಿದೆ. ಮಡಿಕೇರಿ ನಗರಸಭೆಯ ಬಿಲ್ ಕಲೆಕ್ಟರ್ ಲೋಹಿತ್ ವಿರುದ್ಧ ಹಣ ಪಡೆದಿರುವ ಗಂಭೀರ ಆರೋಪ ಕೇಳಿಬಂದಿದೆ.
2018ರ ಪ್ರವಾಹದ ವೇಳೆ ನೂರ್‌ಜಹಾನ್ ಎಂಬುವರ ಮನೆಗೆ ಹಾನಿಯಾಗಿತ್ತು. ಈ ವೇಳೆ ಬಾಡಿಗೆ ರೂಪದಲ್ಲಿ ನೂರ್‌ಜಹಾನ್‌ಗೆ ಸರ್ಕಾರ 1.40 ಲಕ್ಷ ಹಣ ವರ್ಗಾವಣೆ ಮಾಡಿತ್ತು. ಈ ಹಣದಲ್ಲಿ 45 ಸಾವಿರ ರೂಪಾಯಿಯನ್ನು ಚಾಮುಂಡೇಶ್ವರಿ ನಗರದ ನಿವಾಸಿ ಲೋಹಿತ್ ಪಡೆದಿದ್ದ. ಬಳಿಕ ಮತ್ತೆ ಹಣ ನೀಡುವಂತೆ ನೂರ್‌ಜಹಾನ್‌ಗೆ ಕಿರುಕುಳ ನೀಡುತ್ತಿದ್ದಾನೆ ಎನ್ನಲಾಗಿದೆ. ಹಾಗಾಗಿ ಬಿಲ್ ಕಲೆಕ್ಟರ್ ಕಿರುಕುಳದಿಂದ ಬೇಸತ್ತ ಪ್ರವಾಹ ಸಂತ್ರಸ್ತೆ ಮಡಿಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.