ಸಂಸದ ಪ್ರತಾಪ್ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುವೆ: ಮಡಿಕೇರಿಯಲ್ಲಿ ಯದುವೀರ್ ಭರವಸೆ
ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ರಾಜವಂಶಸ್ಥ ಯದುವೀರ್ ಟಿಕೆಟ್ ಘೋಷಣೆಯಾದ ಮೇಲೆ ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಕೊಡಗು ಕ್ಷೇತ್ರದ ಅಭಿವೃದ್ಧಿಗೆ ತಾವು ಬದ್ಧರಾಗಿರುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ರು. ಸಂಸದ ಪ್ರತಾಪ್ ಸಿಂಹ ಎರಡು ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದು ಅದನ್ನ ಮುಂದುವರಿಸಿಕೊಂಡು ಹೋಗುವುದಾಗಿಯೂ ಭರವಸೆ ನೀಡಿದ್ರು.
ಈ ಬಾರಿ ಮೈಸೂರು – ಕೊಡಗು ಸಂಸದನಾಗಿ ಆಯ್ಕೆಯಾದ್ರೆ ( mysore kodagu constituency ) ಜಿಲ್ಲೆಯ ಪರಿಸರ ಸಂರಕ್ಷಣೆ ಹಾಗೂ ಕಾಫಿ ಬೆಳೆ ಉತ್ತೇಜನಕ್ಕೆ ಶ್ರಮಿಸುವುದಾಗಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ (Yaduveer Krishnadatta Chamaraja Wadiyar) ಹೇಳಿದ್ದಾರೆ. ಟಿಕೆಟ್ ಘೋಷಣೆಯಾದ ಮೇಲೆ ಮೊದಲ ಬಾರಿಗೆ ನಿನ್ನೆ ಶುಕ್ರವಾರ ಜಿಲ್ಲೆಗೆ ಭೇಟಿ ನೀಡಿದ ಅವರಿಗೆ ಬಿಜೆಪಿ ಕಾರ್ಯಕರ್ತರು ಆತ್ಮೀಯ ಸ್ವಾಗತ ಕೋರಿದ್ರು.
ಮೈಸೂರು – ಕೊಡಗು ಬಿಜೆಪಿ ಅಭ್ಯರ್ಥಿ ರಾಜವಂಶಸ್ಥ ಯದುವೀರ್ ಟಿಕೆಟ್ ಘೋಷಣೆಯಾದ ಮೇಲೆ ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಇವರಿಗೆ ಜಿಲ್ಲೆಯ ವಿವಿಧೆಡೆ ಆತ್ಮೀಯ ಸ್ವಾಗತ ಕೋರಲಾಯಿತು. ಮಡಿಕೇರಿ ನಗರದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಒಬಿಸಿ ಘಟಕದ ಸಮಾವೇಶದಲ್ಲಿ ಅವರು ಪಾಲ್ಗೊಂಡಿದ್ದರು. ಈ ಸಂದರ್ಭ ನಗರಕ್ಕೆ ಆಗಮಿಸಿದ ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಹೆಂಗೆಳೆಯರು ಆರತಿ ಎತ್ತಿ ತಿಲಕವಿಟ್ಟು ಹೂ ಮಳೆಗೆರೆದು ಬರಮಾಡಿಕೊಂಡ್ರು. ಮೈಸೂರು ಕೊಡಗು ಕ್ಷೇತ್ರದ ಅಭಿವೃದ್ಧಿಗೆ ತಾವು ಬದ್ಧರಾಗಿರುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ರು. ಸಂಸದ ಪ್ರತಾಪ್ ಸಿಂಹ ಎರಡು ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದು ಅದನ್ನ ಮುಂದುವರಿಸಿಕೊಂಡು ಹೋಗುವುದಾಗಿಯೂ ಭರವಸೆ ನೀಡಿದ್ರು.
ಇದೇ ವೇಳೆ, ತಮ್ಮ ಅನಿರೀಕ್ಷಿತ ರಾಜಕೀಯ ಎಂಟ್ರಿ ಬಗ್ಗೆಯೂ ಮಾತನಾಡಿದ್ರು. ಕೊಡಗು ತನಗೆ ಹೊಸದೇನಲ್ಲ, ಆದ್ರೆ ಅಭ್ಯರ್ಥಿಯಾಗಿ ಇದೇ ಮೊದಲ ಬಾರಿಗೆ ಬಂದಿದ್ದೇನೆ. ಕೊಡಗಿನ ಜೊತೆಗೆ ತನಗೆ ಭಾವನಾತ್ಮಕ ಸಂಬಂಧ ಹೊಂದಿರುವುದು ತನಗೆ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಳ್ಳಲು ಖುಷಿ ಕೊಡುತ್ತದೆ ಎಂದು ಹೇಳಿದ್ರು.
ರಾಜಕೀಯ ಜೀವನಕ್ಕೆ ಬಂದಮೇಲೆ ಜನಸಾಮಾನ್ಯರ ಕೈಗೆ ತಾನು ಖಂಡಿತ ಸಿಗುತ್ತೇನೆ ಎಂದು ಭರವಸೆ ನೀಡಿದ್ರು. ಅಲ್ಲದೆ ಕೊಡಗಿನ ಪ್ರಕೃತಿ ರಕ್ಷಣೆಯೊಂದಿಗೆ ಅಭಿವೃದ್ಧಿ ಮಾಡುವುದು ಹಾಗೂ ಕಾಫಿ ಉದ್ಯಮದ ಪುನಶ್ಚೇತನಕ್ಕೆ ತಾನು ಶ್ರಮಿಸುವುದಾಗಿ ಅವರು ಇದೇ ಸಂದರ್ಭ ಆಶ್ವಾಸನೆ ನೀಡಿದ್ರು.
ಒಟ್ಟಾರೆ ನಿನ್ನೆಯವರೆಗೂ ತಮ್ಮ ಅಭ್ಯರ್ಥಿ ಪ್ರತಾಪ್ ಸಿಂಹನೇ ಎಂದು ನಂಬಿದ್ದ ಕೊಡಗಿನ ಬಿಜೆಪಿ ಪಾಳ್ಯಕ್ಕೆ ಇದೀಗ ಯದುವೀರ್ ಹೊಸ ಅಚ್ಚರಿಯಾಗಿ ಎಂಟ್ರಿಯಾಗಿದ್ದಾರೆ. ಜೊತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಬ್ಬರು ಎಂಎಲ್ಎಗಳು ಸೋತ ಬಳಿಕ ನಿಸ್ತೇಜವಾಗಿದ್ದ ಕೊಡಗು ಬಿಜೆಪಿಗೆ ಮಹಾರಾಜ ಯದುವೀರ್ ಹೊಸ ಕಳೆ ತರುತ್ತಾರಾ ಕಾದು ನೋಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ