ಬಸ್​​ನಲ್ಲಿ ಕಾಲೇಜು ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸಿದ ವೃದ್ಧ; ಜನರಿಂದ ಧರ್ಮದೇಟು, ಪೊಲೀಸರ ವಶಕ್ಕೆ

| Updated By: ಸಾಧು ಶ್ರೀನಾಥ್​

Updated on: May 28, 2022 | 7:23 PM

ಬಸ್ಸಿನಲ್ಲಿ ವೃದ್ಧ ತನ್ನ ಖಾಸಗಿ ಭಾಗಗಳನ್ನು ಸ್ಪರ್ಷಿಸಿದ ಎಂಬುದು ವಿದ್ಯಾರ್ಥಿನಿಯ ಆರೋಪ. ತನ್ನ ವರ್ತನೆಯನ್ನು ತಡೆಯಲು ಬಂದ ವಿದ್ಯಾರ್ಥಿನಿಗೆ ವೃದ್ಧ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

ಬಸ್​​ನಲ್ಲಿ ಕಾಲೇಜು ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸಿದ ವೃದ್ಧ; ಜನರಿಂದ ಧರ್ಮದೇಟು, ಪೊಲೀಸರ ವಶಕ್ಕೆ
ಪ್ರಾತಿನಿಧಿಕ ಚಿತ್ರ
Follow us on

ಮಡಿಕೇರಿ: ಬಸ್​​ನಲ್ಲಿ ಕಾಲೇಜು ವಿದ್ಯಾರ್ಥಿನಿಯ ಜೊತೆ ವೃದ್ಧನೊಬ್ಬ ಅಸಭ್ಯವಾಗಿ ವರ್ತಿಸಿದ್ದು, ಅದರಿಂದ ತಪ್ಪಿಸಿಕೊಳ್ಳಲು 19 ವರ್ಷದ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಕಿರುಚಿಕೊಂಡಿದ್ದಾಳೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಬೆಟ್ಟಗೇರಿಯಲ್ಲಿ ಘಟನೆ ನಡೆದಿದೆ. ಬಸ್ಸಿನಲ್ಲಿ ವೃದ್ಧ ತನ್ನ ಖಾಸಗಿ ಭಾಗಗಳನ್ನು ಸ್ಪರ್ಷಿಸಿದ ಎಂಬುದು ವಿದ್ಯಾರ್ಥಿನಿಯ ಆರೋಪ. ತನ್ನ ವರ್ತನೆಯನ್ನು ತಡೆಯಲು ಬಂದ ವಿದ್ಯಾರ್ಥಿನಿಗೆ ವೃದ್ಧ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಬೊಳ್ಳಾರ್ಪಂಡ ಪೊನ್ನಪ್ಪ(62) ಎಂಬಾತ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದವ. ವಿದ್ಯಾರ್ಥಿನಿಯ ಕೈ ಬೆರಳುಗಳಿಗೆ ಗಾಯವಾಗಿದ್ದು, ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳದಲ್ಲಿದ್ದ ಜನ ಆರೋಪಿಯನ್ನ ಹಿಡಿದು, ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಸುದ್ದಿ ಪ್ರಸಾರ ಬೆನ್ನಲ್ಲೇ ಎಚ್ಚೆತ್ತ ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿನಿಗೆ 50 ಸಾವಿರ ಅಡ್ಮಿಶನ್ ಹಣ ವಾಪಸ್!

ಚಿಕ್ಕಮಗಳೂರು: ನಾನಾ ರೀತಿಯ ಆಫರ್ ನೀಡಿ ಎಸ್.ಎಸ್.ಎಲ್.ಸಿ. ಫಲಿತಾಂಶ ಬರುವ ಆರು ತಿಂಗಳ ಮೊದಲೇ ಮುಂಗಡವಾಗಿ 50 ಸಾವಿರ ಹಣ ಕಟ್ಟಿಸಿಕೊಂಡಿದ್ದ ಖಾಸಗಿ ವಿದ್ಯಾ ಸಂಸ್ಥೆ 10ನೇ ತರಗತಿ ಫಲಿತಾಂಶ ಪ್ರಕಟವಾದ ಬಳಿಕ ಉಲ್ಟಾ ಹೊಡೆದು ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಆತಂಕ ಹುಟ್ಟಿಸಿತ್ತು. ಈ ಬಗ್ಗೆ ಟಿವಿ9ನಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಖಾಸಗಿ ವಿದ್ಯಾ ಸಂಸ್ಥೆ 50 ಸಾವಿರ ಹಣವನ್ನ ಚೆಕ್ ರೂಪದಲ್ಲಿ ವಾಪಸ್ ನೀಡಿದೆ.

ಅಂದಹಾಗೆ ಚಿಕ್ಕಮಗಳೂರು ತಾಲೂಕಿನ ಆಲ್ದೂರಿನ ಪೂರ್ಣಪ್ರಜ್ಞಾ ಶಾಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿ ಚರಿತಾಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಎಕ್ಸಲೆಂಟ್ ಖಾಸಗಿ ವಿದ್ಯಾ ಸಂಸ್ಥೆ ಹಣವನ್ನ ವಾಪಸ್ ನೀಡಿದೆ. ಕಳೆದ ಡಿಸೆಂಬರ್‍ನಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಆಫರ್ ನೀಡಿತ್ತು. ಪಿಯುಸಿ ಕಾಲೇಜು ಶುಲ್ಕದಲ್ಲಿ ಬಾರಿ ರಿಯಾಯಿತಿ ನೀಡುವುದಾಗಿ ತಿಳಿಸಿತ್ತು.

ಎಸ್ಸೆಸ್ಸೆಲ್ಸಿಯಲ್ಲಿ ಶೇಕಡಾ 90 ಬಂದರೆ 25 ಸಾವಿರ ಡಿಸ್ಕೌಂಟ್, 95% ಬಂದರೆ 50 ಸಾವಿರ ಡಿಸ್ಕೌಂಟ್, ಶೇಕಡಾ 95ಕ್ಕೂ ಅಧಿಕ ಬಂದರೆ 75 ಸಾವಿರ ಡಿಸ್ಕೌಂಟ್, 100% ಬಂದರೆ ಒಂದು ಲಕ್ಷ ಡಿಸ್ಕೌಂಟ್ ಎಂದು ಆಫರ್ ನೀಡಿತ್ತು. ಆಲ್ದೂರಿನ ವಿದ್ಯಾರ್ಥಿನಿ ಚರಿತಾ ತನಗೆ 95% ಬರುತ್ತೆ. ಭವಿಷ್ಯಕ್ಕೆ ಅನುಕೂಲವಾಗಲಿ ಎಂದು ಡಿಸೆಂಬರ್‍ನಲ್ಲೇ 50 ಸಾವಿರ ಮುಂಗಡ ಹಣ ಕಟ್ಟಿ ಆಡ್ಮಿಷನ್ ಆಗಿದ್ದರು.

ಆದರೆ, 10ನೇ ತರಗತಿಯಲ್ಲಿ ಚರಿತಾ ಔಟ್ ಆಫ್ ಔಟ್ ಅಂಕಗಳನ್ನು ತೆಗೆದಿದ್ದಾಳೆ. ಆದರೆ, ಫಲಿತಾಂಶ ಪ್ರಕಟವಾದ ಬಳಿಕ ಕಾಲೇಜು ಆಡಳಿತ ಮಂಡಳಿ ಸೀಟು-ಹಣ ಎರಡೂ ನೀಡಿಲ್ಲ! ಸೀಟು ಬೇಕಾದರೆ 2 ಲಕ್ಷದ 25 ಸಾವಿರ ಹಣ ಪೂರ್ತಿ ಕಟ್ಟಬೇಕು ಎಂದು ಹೇಳಿದೆ. ಅಲ್ಲದೆ, ಕಟ್ಟಿದ 50 ಸಾವಿರ ಹಣವೂ ವಾಪಸ್ ಬರೋದಿಲ್ಲ ಎಂದಿದ್ದರಂತೆ! ಅಂದು ಒಂದು ರೀತಿ ಹೇಳಿ, ಅಡ್ಮಿಷನ್ ಮಾಡಿಸಿಕೊಂಡು ಈಗ, ಮತ್ತೊಂದು ರೀತಿ ಹೇಳುತ್ತಿದ್ದಾರೆ. ನಮ್ಮ ಹಣ ವಾಪಸ್ ನೀಡಿ ನಾವೇ ಬೇರೆ ಕಾಲೇಜಿಗೆ ಸೇರುತ್ತೇವೆ ಎಂದರೂ ಹಣ ನೀಡುತ್ತಿಲ್ಲ ಎಂದು ಚರಿತಾ ಹಾಗೂ ತಾಯಿ ಪುಷ್ಪ ಟಿವಿ9 ಬಳಿ ಅಳಲು ತೋಡಿಕೊಂಡಿದ್ದರು. ಈ ಬಗ್ಗೆ ಟಿವಿ9ನಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಮೂಡಬಿದರೆ ಖಾಸಗಿ ಪಿಯು ಕಾಲೇಜು ಎಕ್ಸಲೆಂಟ್ ಆಡಳಿತ ಸಿಬ್ಬಂದಿ ಮುಂಗಡವಾಗಿ ಕಟ್ಟಿಸಿಕೊಂಡಿದ್ದ 50 ಹಣವನ್ನ ಚೆಕ್ ರೂಪದಲ್ಲಿ ಚರಿತಾಗೆ ವಾಪಸ್ ನೀಡಿದ್ದಾರೆ. ಚರಿತಾ ತಾಯಿ ಟಿವಿ9 ಗೆ ಧನ್ಯವಾದ ಸಲ್ಲಿಸಿದ್ದಾರೆ.

Also Read:

Tesla EV Cars in India: ಭಾರತದಲ್ಲಿ ಕಾರು ಉತ್ಪಾದನಾ ಘಟಕ ಸ್ಥಾಪನೆ ಬಗ್ಗೆ ಟ್ವಿಟ್ಟರ್​​ನಲ್ಲಿಯೇ ಉತ್ತರ ನೀಡಿದ ಎಲಾನ್ ಮಸ್ಕ್​, ಹೇಳಿದ್ದೇನು ಗೊತ್ತಾ!?

Also Read:

Rahul Gandhi: ಅನುಮತಿ ಪಡೆಯದೆ ಲಂಡನ್​ಗೆ ಹೋದ ಸಂಸದ ರಾಹುಲ್ ಗಾಂಧಿ; ಪಕ್ಷದ ವತಿಯಿಂದ ಬಂತು ಪ್ರತಿಕ್ರಿಯೆ: ಏನದು? ಮತ್ತದೇ ಯಡವಟ್ಟು!

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:19 pm, Sat, 28 May 22