ಮಡಿಕೇರಿ ಆಸ್ಪತ್ರೆಯಲ್ಲಿದ್ದ ರೋಗಿ ಮೇಲೆ ಹಲ್ಲೆ! ಪೊಲೀಸ್ ಕಾನ್ಸ್​ಟೇಬಲ್ ವಿರುದ್ಧ ದೂರು ದಾಖಲು

ಕಾನ್ಸ್​ಟೇಬಲ್ ಶಿವಪ್ಪ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ರೋಗಿಯೊಬ್ಬ ವಾರ್ಡ್​ನಿಂದ ಹೊರಬಂದು ಆಸ್ಪತ್ರೆಯ ಕಂಪ್ಯೂಟರ್ ಆನ್ ಮಾಡಲು ಯತ್ನಿಸುತ್ತಿದ್ದನಂತೆ.

ಮಡಿಕೇರಿ ಆಸ್ಪತ್ರೆಯಲ್ಲಿದ್ದ ರೋಗಿ ಮೇಲೆ ಹಲ್ಲೆ! ಪೊಲೀಸ್ ಕಾನ್ಸ್​ಟೇಬಲ್ ವಿರುದ್ಧ ದೂರು ದಾಖಲು
ಹಲ್ಲೆಗೊಳಗಾದ ರೋಗಿ
Follow us
TV9 Web
| Updated By: sandhya thejappa

Updated on: Sep 13, 2021 | 8:52 AM

ಕೊಡಗು: ಆಸ್ಪತ್ರೆಯಲ್ಲಿದ್ದ ರೋಗಿ ಮೇಲೆ ಪೊಲೀಸ್ ಕಾನ್ಸ್​ಟೇಬಲ್ (Police Constable) ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಕಾನ್ಸ್​ಟೇಬಲ್ ಲಾಠಿ ಏಟಿನಿಂದ ರೋಗಿಗೆ ಗಂಭೀರ ಗಾಯವಾಗಿದ್ದು, ಕೊಡಗು ಜಿಲ್ಲೆಯ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ರಾತ್ರಿ ವೇಳೆ ರೋಗಿ ವಾರ್ಡ್​ನಿಂದ ಹೊರಬಂದು ಆಸ್ಪತ್ರೆಯಲ್ಲಿ ಅಸಂಬದ್ಧವಾಗಿ ವರ್ತಿಸಿದ ಹಿನ್ನೆಲೆ ಕಾನ್ಸ್​ಟೇಬಲ್ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಕಾನ್ಸ್​​ಟೇಬಲ್ ಶಿವಪ್ಪ ಎಂಬುವವರು ರೋಗಿಯ ಮೇಲೆ ಲಾಠಿಯಲ್ಲಿ ಹಲ್ಲೆಗೈದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಶಿವಪ್ಪ ವಿರುದ್ಧ ರೋಗಿ ಸಂಬಂಧಿಕರು ಎಸ್​ಪಿಗೆ ದೂರು ನೀಡಿದ್ದಾರೆ.

ಕಾನ್ಸ್​ಟೇಬಲ್ ಶಿವಪ್ಪ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ರೋಗಿಯೊಬ್ಬ ವಾರ್ಡ್​ನಿಂದ ಹೊರಬಂದು ಆಸ್ಪತ್ರೆಯ ಕಂಪ್ಯೂಟರ್ ಆನ್ ಮಾಡಲು ಯತ್ನಿಸುತ್ತಿದ್ದನಂತೆ. ಅಲ್ಲದೇ ಸ್ವಾಗತ ವಿಭಾಗದಲ್ಲಿ ಏನೇನೋ ತಡಕಾಡುತ್ತಿದ್ದನಂತೆ. ಹೀಗಾಗಿ ರೋಗಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆಗೊಳಗಾದ ರೋಗಿಗೆ ಗಂಭೀರ ಗಾಯವಾಗಿದ್ದು, ಕಾನ್ಸ್​ಟೇಬಲ್ ವಿರುದ್ಧ ಜಿಲ್ಲಾ ಎಸ್​ಪಿ ಕ್ಷಮಾ ನಿಶ್ರಾಗೆ ರೋಗಿ ಸಂಬಂಧಿಕರು ಮೌಕಿಕ ದೂರು ನೀಡಿದ್ದಾರೆ.

ಪತ್ನಿಯಿಂದಲೇ ಪತಿ ಹತ್ಯೆ ತುಮಕೂರು: ಪತಿ ಮೇಲೆ ಪೆಟ್ರೋಲ್ ಸುರಿದು ಪತ್ನಿ ಹತ್ಯೆಗೈದಿರುವ ಘಟನೆ ತುಮಕೂರಿನ ಬಡ್ಡಿಹಳ್ಳಿಯಲ್ಲಿ ಸಂಭವಿಸಿದೆ. 52 ವರ್ಷದ ನಾರಾಯಣ ಎಂಬುವವರು ಕೊಲೆಯಾದ ವ್ಯಕ್ತಿ. ಮನೆಯಲ್ಲಿ ಗಂಡ- ಹೆಂಡತಿ ಪ್ರತಿದಿನ ಜಗಳ ಆಡುತ್ತಿದ್ದರಂತೆ. ಕಳೆದ 8 ವರ್ಷಗಳಿಂದ ಪ್ರತಿನಿತ್ಯ ಜಗಳವಾಗುತ್ತಿದ್ದರಂತೆ. ಪತ್ನಿ ಅನ್ನಪೂರ್ಣಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ನೆಲಮಂಗಲ ಬಳಿಯ ಟೋಲ್​ನಲ್ಲಿ ನಾರಾಯಣ ಕೆಲಸ ಮಾಡಿಕೊಂಡಿದ್ದರಂತೆ.

ಇದನ್ನೂ ಓದಿ

ಯಾದಗಿರಿ ಜಿಲ್ಲೆಯಲ್ಲೊಂದು ಅಮಾನವೀಯ ಘಟನೆ? ಮಹಿಳೆ ನಗ್ನಗೊಳಿಸಿ ಅಂಗಾಂಗ ಮುಟ್ಟಿ ಪೈಶಾಚಿಕ ಕೃತ್ಯ

Health Tips: ಒಮ್ಮೆ ಮಾಡಿಟ್ಟ ಚಹಾ ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುವುದು ಒಳ್ಳೆಯದಲ್ಲ; ಕಾರಣ ತಿಳಿದುಕೊಳ್ಳಿ

(Police Constable Attack on Patient at Madikeri hospital)

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ