ಸರ್ಕಾರದ ವಿರುದ್ಧವೇ ನಾಲಗೆ ಹರಿಬಿಟ್ಟ ಪಿಎಸ್ಐ; ಗ್ರಾ.ಪಂ ಸದಸ್ಯರೆಲ್ಲರೂ ಲೋಫರ್​ಗಳೆಂದ ಪಿಎಸ್ಐ ವಿಡಿಯೋ ವೈರಲ್

ಸರ್ಕಾರದ ವಿರುದ್ಧವೇ ನಾಲಗೆ ಹರಿಬಿಟ್ಟ ಪಿಎಸ್ಐ; ಗ್ರಾ.ಪಂ ಸದಸ್ಯರೆಲ್ಲರೂ ಲೋಫರ್​ಗಳೆಂದ ಪಿಎಸ್ಐ ವಿಡಿಯೋ ವೈರಲ್
ಸೋಮವಾರಪೇಟೆ ವೃತ್ತ ನಿರೀಕ್ಷಕರ ಕಚೇರಿಯ ಪ್ರೊಬೆಷನರಿ ಪಿಎಸ್ಐ ಕಾಶಿನಾಥ ಬಗಲಿ

ಸರ್ಕಾರ ನಡೀತಾ ಇರೋದೇ ನಮ್ಮಿಂದ, ಸರ್ಕಾರ ಬಡತನದಲ್ಲಿಲ್ಲ, ಈ ಸರ್ಕಾರ ಕೋಟ್ಯಂತರ ರೂಪಾಯಿ ಲೂಟಿ ಹೊಡೆಯುತ್ತಿದೆ, ಗ್ರಾಮ ಪಂಚಾಯಿತಿ ಸದಸ್ಯರೆಲ್ಲರೂ ಲೋಫರ್ಗಳು ಎಂದು ಬೇಕಾಬಿಟ್ಟಿ ಬೈದಿದ್ದಾರೆ.

TV9kannada Web Team

| Edited By: Apurva Kumar Balegere

Apr 26, 2022 | 1:19 PM

ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ವೃತ್ತ ನಿರೀಕ್ಷಕರ ಕಚೇರಿಯ ಪ್ರೊಬೆಷನರಿ ಪಿಎಸ್ಐ ಕಾಶಿನಾಥ ಬಗಲಿ ಸರ್ಕಾರದ ವಿರುದ್ಧವೇ ನಾಲಗೆ ಹರಿಬಿಟ್ಟು ಪೇಚಿಗೆ ಸಿಲುಕಿದ್ದಾರೆ. ಸರ್ಕಾರ ನಡೀತಾ ಇರೋದೇ ನಮ್ಮಿಂದ, ಸರ್ಕಾರ ಬಡತನದಲ್ಲಿಲ್ಲ, ಈ ಸರ್ಕಾರ ಕೋಟ್ಯಂತರ ರೂಪಾಯಿ ಲೂಟಿ ಹೊಡೆಯುತ್ತಿದೆ, ಗ್ರಾಮ ಪಂಚಾಯಿತಿ ಸದಸ್ಯರೆಲ್ಲರೂ ಲೋಫರ್ಗಳು ಎಂದು ಬೇಕಾಬಿಟ್ಟಿ ಬೈದಿದ್ದಾರೆ. ಪ್ರೊಬೇಷನರಿ ಅವಧಿಯಲ್ಲೇ ಹೀಗೆ ನಾಲಗೆ ಹರಿಬಿಟ್ಟ ಪಿಎಸ್ಐ ವಿರುದ್ಧ ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯ ಗಣಪತಿ ಎಂಬುವವರು ಕೊಡಗು ಎಸ್ಪಿ ಎಂ ಅಯ್ಯಪ್ಪ ಅವರಿಗೆ ದೂರು ನೀಡಿದ್ದಾರೆ.

ಘಟನೆ ವಿವರ
ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮ ಪಂಚಾಯಿತಿಯ ವಾರ್ಡ್ ನಂಬರ್ 4ರಲ್ಲಿ ರಮೇಶ ಎಂಬುವವರ ಮನೆಯ ಹಿಂದೆ ರಸ್ತೆ ಬದಿಯ ಬರೆಯಲ್ಲಿ ಹಾವೊಂದು ಸೇರಿಕೊಂಡಿತ್ತಂತೆ. ಈ ಹಾವನ್ನು ಹಿಡಿಯಲು ಪ್ರಯತ್ನಿಸಿದಾಗ ಅದು ಬಿಲ ಸೇರಿಕೊಂಡಿದೆ. ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದ ಸೋಮವಾರಪೇಟೆ ವೃತ್ತ ನಿರೀಕ್ಷಕರ ಕಚೇರಿಯ ಪ್ರೊಬೆಷನರಿ ಪಿಎಸ್ಐ ಕಾಶಿನಾಥ ಬಗಲಿ ರಸ್ತೆ ಸಮೇತ ಆ ಬರೆಯನ್ನು ಅಗೆಯುವಂತೆ ಆದೇಶ ಮಾಡಿದ್ದಾರೆ. ಆದರೆ ಕಾಂಕ್ರಿಟ್ ರಸ್ತೆ ಅಗೆದರೆ ಮತ್ತೆ ಅದನ್ನು ದುರಸ್ಥಿ ಪಡಿಸಲು ಅನುದಾನ ಸಿಗುವುದು ಕಷ್ಟ ಹಾಗಾಗಿ ರಸ್ತೆ ಅಗೆಯುವುದು ಬೇಡ ಎಂದು ಗ್ರಾಮ ಪಂಚಾಯಿತಿ ಸದಸ್ಯ ಗಣಪತಿ ಹೇಳಿದ್ದಾರೆ. ಇದಕ್ಕೆ ಅಸಮಾಧಾನಗೊಂಡ ಪಿಎಸ್ಐ ಕಾಶಿನಾಥ, ಸರ್ಕಾರ ನಡೀತಾ ಇರೋದೇ ನಮ್ಮಿಂದ, ಸರ್ಕಾರ ಬಡತನದಲ್ಲಿಲ್ಲ, ಈ ಸರ್ಕಾರ ಕೋಟ್ಯಂತರ ರೂಪಾಯಿ ಲೂಟಿ ಹೊಡೆಯುತ್ತಿದೆ. ಗ್ರಾಮ ಪಂಚಾಯಿತಿ ಸದಸ್ಯರೆಲ್ಲರೂ ಲೋಫರ್ಗಳು ಎಂದು ಬೈಯ್ದಿದ್ದಾರೆ. ಈ ವಿಚಾರ ಚೌಡ್ಲು ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪಿಎಸ್ಐ ವಿರುದ್ಧ ಅವರದ್ದೇ ಠಾಣೆಯಲ್ಲಿ ದೂರು ನೀಡಿದರೂ ಅದಕ್ಕೆ ಸ್ಪಂದನೆ ಸಿಕ್ಕಿಲ್ಲ, ಹಾಗಾಗಿ ಕೊಡಗು ಎಸ್ಪಿ ಮಲಚ್ಚಿರ ಕ್ಯಾಪ್ಟನ್ ಅಯ್ಯಪ್ಪ ಅವರಿಗೆ ಲಿಖಿತ ದೂರು ನೀಡಿದ್ದೇನೆ ಎಂದು ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯ ಗಣಪತಿ ಹೇಳಿದ್ದಾರೆ. ಪ್ರೊಬೆಷನರಿ ಅವಧಿಯಲ್ಲೇ ಈ ಅಧಿಕಾರಿ ಇಷ್ಟೊಂದು ಉದ್ಧಟತನ ಮೆರೆದರೆ ಇನ್ನು ಮುಂದಿನ ದಿನಗಳಲ್ಲಿ ಕತೆ ಹೇಗೆ ಅಂತ ಕೊಡಗಿನ ಜನರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಸಿಎಂ ಸಭೆ ಬೆನ್ನಲ್ಲೇ ಇಂದು ಅಧಿಕಾರಿಗಳ ಸಭೆ; ಕೊರೊನಾ 4ನೇ ಅಲೆ ಬಗ್ಗೆ ಎಚ್ಚರಿಕೆಯಿಂದಿರಿ ಎಂದ ಸಚಿವ ಕೆ.ಸುಧಾಕರ್

Optical Illusion: ಈ ಚಿತ್ರ ನೋಡಿದಾಗ ಮೊದಲು ಕಂಡಿದ್ದೇನು?-ನಿಮ್ಮ ಲವ್​ ಲೈಫ್​ ಬಗ್ಗೆ ಹೇಳುವ ಫೋಟೋ ಇದು !

Follow us on

Related Stories

Most Read Stories

Click on your DTH Provider to Add TV9 Kannada