ಕೊಡಗು: ಆನಂದಪುರ ಗ್ರಾಮದ ಪುರಾತನ ಈಶ್ವರ ದೇವಸ್ಥಾನದ ಆವರಣದಲ್ಲಿ ನಿಧಿ ಪತ್ತೆ

| Updated By: Rakesh Nayak Manchi

Updated on: Nov 12, 2023 | 7:19 PM

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಆನಂದಪುರ ಗ್ರಾಮದಲ್ಲಿರುವ ಪುರಾತನ ಈಶ್ವರ ದೇವಸ್ಥಾನ ಆವರಣದಲ್ಲಿ ನಿಧಿ ಪತ್ತೆಯಾಗಿದೆ. ದೇವಸ್ಥಾನ ಆವರಣದಲ್ಲಿ ಕೆಲಸಮಾಡುತ್ತಿದ್ದ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಮಣ್ಣಿನ ಮಡಕೆಯಲ್ಲಿ ಚಿನ್ನದ ನಗನಾಣ್ಯ ಪತ್ತೆಯಾಗಿವೆ.

ಕೊಡಗು: ಆನಂದಪುರ ಗ್ರಾಮದ ಪುರಾತನ ಈಶ್ವರ ದೇವಸ್ಥಾನದ ಆವರಣದಲ್ಲಿ ನಿಧಿ ಪತ್ತೆ
ಆನಂದಪುರ ಗ್ರಾಮದ ಪುರಾತನ ಈಶ್ವರ ದೇವಸ್ಥಾನದ ಆವರಣದಲ್ಲಿ ನಿಧಿ ಪತ್ತೆ
Follow us on

ಮಡಿಕೇರಿ, ನ.12: ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಆನಂದಪುರ ಗ್ರಾಮದಲ್ಲಿರುವ ಪುರಾತನ ಈಶ್ವರ ದೇವಸ್ಥಾನ ಆವರಣದಲ್ಲಿ ನಿಧಿ ಪತ್ತೆಯಾಗಿದೆ (Treasure found). ದೇವಸ್ಥಾನ ಆವರಣದಲ್ಲಿ ಕೆಲಸಮಾಡುತ್ತಿದ್ದ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಮಣ್ಣಿನ ಮಡಕೆಯಲ್ಲಿ ಚಿನ್ನದ ನಗನಾಣ್ಯ ಪತ್ತೆಯಾಗಿವೆ.

ಟಾಟಾ ಕಾಫಿ ಸಂಸ್ಥೆಗೆ ಸೇರಿದ ಕಾಫಿತೋಟದಲ್ಲಿ‌ ಪುರಾತನ ಈಶ್ವರ ದೇವಸ್ಥಾನ ಇದೆ. ಈ ದೇವಸ್ಥಾನದ ಆವರಣದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಭೂಮಿಯಡಿಯಲ್ಲಿ ಮಣ್ಣಿ ಮಡಕೆ ಪತ್ತೆಯಾಗಿದ್ದು, ಅದರಲ್ಲಿ ಚಿನ್ನದ ಆಭರಣಗಳು ಪತ್ತೆಯಾಗಿವೆ.

ಇದನ್ನೂ ಓದಿ: ತುಮಕೂರು: ನಿಧಿ ಆಸೆ ತೋರಿಸಿ 16 ಲಕ್ಷ ಹಣ ಪಡೆದಿದ್ದ ಜ್ಯೋತಿಷಿ; ಹಣ ಕೊಟ್ಟವರಿಂದಲೇ ಕಿಡ್ನಾಪ್, ಮುಂದೇನಾಯ್ತು?​

ಈ ಬಗ್ಗೆ ಟಾಟಾ ಕಾಪಿ ತೋಟ ಸಂಸ್ಥೆ ವ್ಯವಸ್ಥಾಪಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ವಿರಾಜಪೇಟೆ ತಹಶೀಲ್ದಾರ್‌ ಸಮ್ಮುಖದಲ್ಲಿ ಮಹಜರು ನಡೆಸಿ ಕೊಡಗು ಜಿಲ್ಲಾಧಿಕಾರಿ ವಶಕ್ಕೆ ನಿಧಿಯನ್ನು ಹಸ್ತಾಂತರಿಸಿದ್ದಾರೆ.

ದೇವರ ವಿಗ್ರಹ ಭಗ್ನಗೊಳಿಸಿದ ಕಿಡಿಗೇಡಿಗಳು

ಬೆಂಗಳೂರು: ಸುಬ್ರಹ್ಮಣ್ಯಸ್ವಾಮಿ ದೇವರ ವಿಗ್ರಹವನ್ನು ಕಿಡಿಗೇಡಿಗಳು ಭಗ್ನಗೊಳಿಸಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಲಮುರಿ ದೇವಾಲಯದ ಗೋಪುರದ ಮೇಲ್ಭಾಗದಲ್ಲಿದ್ದ ಸುಬ್ರಹ್ಮಣ್ಯಸ್ವಾಮಿ‌ ಹಿಡಿದಿದ್ದ ಆಯುಧ ಭಗ್ನಗೊಳಿಸಲಾಗಿದೆ. ಘಟನೆ ಸಂಬಂಧ ಬೊಮ್ಮನಹಳ್ಳಿ ಠಾಣೆಗೆ ಮುನಿರೆಡ್ಡಿ ಎಂಬುವರು ದೂರು ನೀಡಿದ್ದು, ಪೊಲೀಸರು ಎಫ್​ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ