ಜೈಪುರದ ಕ್ಯಾಸಿನೊ ಮೇಲೆ ಪೊಲೀಸ್​ ದಾಳಿ ಪ್ರಕರಣ: ಬಂಧನಕ್ಕೊಳಗಾದ ಕೋಲಾರದ ಶಿಕ್ಷಕಗೆ ಷೋ ಕಾಸ್​ ನೋಟಿಸ್​ ಜಾರಿ

ಪ್ರಕರಣದ FIR ಪ್ರತಿ ಇನ್ನೂ ತಮಗೆ ದೊರೆತಿಲ್ಲ. ಹಾಗಾಗಿ ಸದ್ಯಕ್ಕೆ ​​ಶಿಕ್ಷಕ ರಮೇಶ್ ಗೆ ಷೋ ಕಾಸ್​ ನೋಟಿಸ್​ ಸರ್ವ್​ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಮೂರ್ತಿ ಅವರು ಟಿವಿ9 ಗೆ ಸ್ಪಷ್ಟನೆ ನೀಡಿದ್ದಾರೆ.

ಜೈಪುರದ ಕ್ಯಾಸಿನೊ ಮೇಲೆ ಪೊಲೀಸ್​ ದಾಳಿ ಪ್ರಕರಣ: ಬಂಧನಕ್ಕೊಳಗಾದ ಕೋಲಾರದ ಶಿಕ್ಷಕಗೆ ಷೋ ಕಾಸ್​ ನೋಟಿಸ್​ ಜಾರಿ
ಅಮಾನತು ಆದ ಶಿಕ್ಷಕ ರಮೇಶ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Aug 23, 2022 | 6:12 PM

ಕೋಲಾರ: ಜೈಪುರದ ಕ್ಯಾಸಿನೊ ಮೇಲೆ ಸೈಬರ್​ ಕ್ರೈಂ ಪೊಲೀಸರ ದಾಳಿ ವೇಳೆ ಜಿಲ್ಲೆಯ ತೇರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೂಡ ಬಂಧನವಾಗಿದೆ. ಆದರೆ ಈ ಪ್ರಕರಣದ FIR ಪ್ರತಿ ಇನ್ನೂ ತಮಗೆ ದೊರೆತಿಲ್ಲ. ಹಾಗಾಗಿ ಸದ್ಯಕ್ಕೆ ​​ಶಿಕ್ಷಕ ರಮೇಶ್ ಗೆ ಷೋ ಕಾಸ್​ ನೋಟಿಸ್​ ಸರ್ವ್​ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಮೂರ್ತಿ ಅವರು ಟಿವಿ9 ಗೆ ಸ್ಪಷ್ಟನೆ ನೀಡಿದ್ದಾರೆ. ಆದರೆ, ಪ್ರಕರಣ ಸಂಬಂಧ ನಿನ್ನೆಯೇ ಸರ್ಕಲ್ ಇನ್ಸ್​​ಪೆಕ್ಟರ್​​​​ ಆಂಜಿನಪ್ಪ​​ ಅವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.

ಪ್ರಕರಣದ ಹಿನ್ನೆಲೆ ಏನು? 

ಕ್ಯಾಸಿನೊ ಹಾಗೂ ಅಶ್ಲೀಲ ನೃತ್ಯ ನಡೆಯುತ್ತಿದ್ದ ಜೈಪುರದ ಸಾಯಿಪುರ ಫಾರ್ಮ್​ ಹೌಸ್​​ ಮೇಲೆ ಜೈಪುರದ ಸ್ಪೆಷಲ್​ ಕ್ರೈಂ ಬ್ರಾಂಚ್​ ಪೊಲೀಸರು ರೇಡ್​ ಮಾಡಿದ್ದಾರೆ. ದೆಹಲಿ ಮೂಲದ ಈವೆಂಟ್​ ಕಂಪನಿ ಹೈಪ್ರೊಪೈಲ್​ ಪಾರ್ಟಿ ಆಯೋಜಿಸಿತ್ತು. ಈ ಪಾರ್ಟಿಗೆ ತಲಾ 2 ಲಕ್ಷ ರೂಪಾಯಿ ಚಾರ್ಜ್​ ಮಾಡಲಾಗಿತ್ತು. ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 84 ಜನರನ್ನು ಪೊಲೀಸರು ಬಂಧಿಸಿದ್ದಾರೆ.  ಕೋಲಾರದ 5 ಜನ ಸೇರಿ ಕರ್ನಾಟಕದ ಒಟ್ಟು ಏಳು ಜನ ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಿಕ್ಕಿ ಬಿದ್ದಿದ್ದಾರೆ. ಕೋಲಾರದ ಸೈಬರ್​ ಕ್ರೈಂ ಇನ್ಪೆಕ್ಟರ್ ಆಂಜಿನಪ್ಪ, ಶಿಕ್ಷಕ ರಮೇಶ್​, ವ್ಯಾಪಾರಿ ಸುಧಾಕರ್​, ಕೋಲಾರ ನಗರಸಭೆ ಸದಸ್ಯ ಸತೀಶ್​, ಹಾಗೂ ಬಿಜೆಪಿ ಮುಖಂಡ ರಾಜೇಶ್​, ಕೆಎಎಸ್​ ಅಧಿಕಾರಿ ಶ್ರೀನಾಥ್​ ಮತ್ತು ಆರ್​ಟಿಒ ಇಲಾಖೆ ಸಿಬ್ಬಂದಿ ಶಬರೀಶ್ ಬಂಧಿತರಾಗಿದ್ದಾರೆ. ದಾಳಿ ವೇಳೆ 14 ವಿಲಾಸಿ ಕಾರುಗಳು, 1 ಟ್ರಕ್​ ಸೇರಿದಂತೆ, ಹಾಗೂ ಹುಕ್ಕಾ ಪಾಟ್​ಗಳು ಫಾರಿನ್​ ಡ್ರಿಂಕ್ಸ್​ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:21 pm, Tue, 23 August 22

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ