ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಪೋಸ್ಟ್: ಬಿಜೆಪಿ ಮುಖಂಡ ಸೇರಿ ಇಬ್ಬರ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 27, 2024 | 10:43 PM

ತೆರಿಗೆ ಕಟ್ಟುವ ವಿಚಾರದಲ್ಲಿ ಮುಸ್ಲಿಂ ಸಮುದಾಯವನ್ನ ಟೀಕಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಹಿನ್ನೆಲೆ ಬಿಜೆಪಿ ಮುಖಂಡ ಸೇರಿದಂತೆ ಇಬ್ಬರನ್ನು ಕೋಲಾರ ಜಿಲ್ಲೆಯ ಕೆಜಿಎಫ್​​ನ ರಾಬರ್ಟ್​​ಸನ್ ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಬರ್ಟ್​​ಸನ್ ಪೇಟೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಪೋಸ್ಟ್: ಬಿಜೆಪಿ ಮುಖಂಡ ಸೇರಿ ಇಬ್ಬರ ಬಂಧನ
ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಪೋಸ್ಟ್: ಬಿಜೆಪಿ ಮುಖಂಡ ಸೇರಿ ಇಬ್ಬರ ಬಂಧನ
Follow us on

ಕೋಲಾರ, ಜುಲೈ 27: ಮುಸ್ಲಿಮರ (Muslim) ವಿರುದ್ಧ ಅವಹೇಳನಕಾರಿ ಪೋಸ್ಟ್ ಹಿನ್ನೆಲೆ ಬಿಜೆಪಿ (BJP) ಮುಖಂಡ ಸೇರಿದಂತೆ ಇಬ್ಬರನ್ನು ಜಿಲ್ಲೆಯ ಕೆಜಿಎಫ್​​ನ ರಾಬರ್ಟ್​​ಸನ್ ಪೇಟೆ ಠಾಣೆ ಪೊಲೀಸರಿಂದ ಬಂಧಿಸಿದ್ದಾರೆ.  ನವೀನ್ ಜೈನ್, ಚೇತನ್​ ಬಂಧಿತರು. ತೆರಿಗೆ ಕಟ್ಟುವ ವಿಚಾರದಲ್ಲಿ ಮುಸ್ಲಿಂ ಸಮಾಜವನ್ನು ಟೀಕಿಸಿ ಕಾರ್ಟೂನ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು.

ಈ ವಿಚಾರ ತಿಳಿಯುತ್ತಿದ್ದಂತೆ ಠಾಣೆ ಎದುರು ಮುಸ್ಲಿಂ ಮುಖಂಡರು ಜಮಾಯಿಸಿದ್ದರು. ಇಬ್ಬರನ್ನು ಬಂಧಿಸಿ ಕ್ರಮ ಜರುಗಿಸುವ ಭರವಸೆ ಬಳಿಕ ವಾಪಸ್ ಹೋಗಿದ್ದರು. ಅದರಂತೆ ಇದೀಗ ಇಬ್ಬರ ಬಂಧನವಾಗಿದ್ದು, ರಾಬರ್ಟ್​​ಸನ್ ಪೇಟೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿ: ವ್ಯಕ್ತಿ ಸ್ಥಳದಲ್ಲೇ ಸಾವು

ಶ್ರೀನಿವಾಸಪುರ ತಾಲೂಕಿನ ಕಮತಂಪಲ್ಲಿ ಕ್ರಾಸ್​ ಬಳಿ ಕಡಪ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡಿದೆ. ಗಾಂಡ್ಲಹಳ್ಳಿ ಗ್ರಾಮದ ನಾರಾಯಣಸ್ವಾಮಿ ಮೃತ ವ್ಯಕ್ತಿ. ಗೌನಿಪಲ್ಲಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಆಟವಾಡುವಾಗ ಆಯತಪ್ಪಿ ಎಸ್‌ಟಿಪಿ ಟ್ಯಾಂಕ್‌ಗೆ ಬಿದ್ದು ಬಾಲಕಿ ಸಾವು

ಬೆಂಗಳೂರು: ಆಟವಾಡುವಾಗ ಆಯತಪ್ಪಿ ಎಸ್‌ಟಿಪಿ ಟ್ಯಾಂಕ್‌ಗೆ ಬಿದ್ದು ಬಾಲಕಿ ಸಾವನ್ನಪ್ಪಿರುವಂತಹ ಘಟನೆ ನಗರದ ದೊಡ್ಡತೋಗೂರಿನ ಸೆಲೆಬ್ರಿಟಿ ಪ್ಯಾರಡೈಸ್ ಲೇಔಟ್‌ನಲ್ಲಿ ನಡೆದಿದೆ. ಡಾರ್ಜಿಲಿಂಗ್ ಮೂಲದ ಎಲೀನಾ ಲೆಪ್ಚ(10) ಮೃತಪಟ್ಟಿರುವ ಬಾಲಕಿ.

ಇದನ್ನೂ ಓದಿ: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಪುನೀತ್​ ಕೆರೆಹಳ್ಳಿ 14 ದಿನ ನ್ಯಾಯಾಂಗ ಬಂಧನ

ಎಸ್‌ಟಿಪಿ ಟ್ಯಾಂಕ್‌ಗೆ ಯಾವುದೇ ಪೆನ್ಸಿಂಗ್‌ ಹಾಕಿರಲಿಲ್ಲ. ಆಟವಾಡುತ್ತಾ ಎಸ್‌ಟಿಪಿ ಟ್ಯಾಂಕ್‌ ಬಳಿ ಹೋಗಿದ್ದಾಗ ಆಯತಪ್ಪಿ ಬಿದ್ದಿದೆ. ಅಪಾರ್ಟ್‌ಮೆಂಟ್‌ನ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಬಾಲಕಿ ಮೃತಪಟ್ಟಿದ್ದು, ಮಗು ಮೃತದೇಹ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಸಾಲಬಾಧೆ: ಕಳೆನಾಶಕ ಸೇವಿಸಿ ಶಿವಮೊಗ್ಗ ರೈತ ಆತ್ಮಹತ್ಯೆ

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚನಾಲ ಗ್ರಾಮದಲ್ಲಿ ಓರ್ವ ರೈತ ಸಾಲಬಾಧೆ ತಾಳಲಾರದೇ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಕೊಲ್ಲೂರಪ್ಪ (55) ಮೃತ ರೈತ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.