Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೀಟಬಾಧೆಗೆ ರಾಮಬಾಣ: ಕೋಲಾರದಲ್ಲಿ ಮೋಹಕ ಬಲೆಯ ಮೊರೆಹೋದ ಮಾವು ಬೆಳೆಗಾರರು

ಕೊಳೆತ ಕಾಯಿಗಳಿಂದ ಹೊರ ಬರುವ ಊಜಿ ನೊಣಗಳು ಆರೋಗ್ಯವಂತ ಕಾಯಿಯನ್ನು ಕಚ್ಚಿ ಮೊಟ್ಟೆ ಇಡುತ್ತವೆ. ಮೋಹಕ ಬಲೆಯನ್ನು ಸಾಂಘಿಕವಾಗಿ ಬಳಸುವುದರಿಂದ ಹೆಚ್ಚು ಪ್ರಯೋಜನವಾಗುತ್ತದೆ.

ಕೀಟಬಾಧೆಗೆ ರಾಮಬಾಣ: ಕೋಲಾರದಲ್ಲಿ ಮೋಹಕ ಬಲೆಯ ಮೊರೆಹೋದ ಮಾವು ಬೆಳೆಗಾರರು
ಕೋಲಾರದಲ್ಲಿ ಬಲೆಯ ಮೊರೆ ಹೋದ ಮಾವು ಬೆಳೆಗಾರರು
Follow us
preethi shettigar
|

Updated on: Apr 07, 2021 | 8:17 AM

ಕೋಲಾರ: ಜಿಲ್ಲೆಯು ಮಾವು ಬೆಳೆ ದೇಶ ಹಾಗೂ ರಾಜ್ಯದಲ್ಲೇ ಹೆಸರುವಾಸಿಯಾಗಿದೆ, ಅದರಲ್ಲೂ ಶ್ರೀನಿವಾಸಪುರ ತಾಲ್ಲೂಕು ಮಾವಿನ ತವರು ಎಂದು ಎಂದು ಖ್ಯಾತಿ ಪಡೆದಿದೆ. ಕೇವಲ ಕೋಲಾರ ಜಿಲ್ಲೆಯೊಂದರಲ್ಲೇ ಸುಮಾರು 52 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಿದ್ದು, ರಸಪುರಿ, ಆಲ್ಫಾನ್ಸೊ, ಬಂಗನಪಲ್ಲಿ, ಕೇಸರ್, ಸೆಂಧೂರ, ರಸಪುರಿ, ದಶಹರಿ, ಮಲ್ಲಿಕಾ, ತೋತಾಪುರಿ, ರಾಜ್‌ಗಿರಾ, ಮಲಗೋವಾ, ನೀಲಂ ಮಾವಿನ ತಳಿಗಳನ್ನು ಬೆಳೆಯಲಾಗುತ್ತದೆ.

ಪ್ರತಿ ವರ್ಷ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಮಾವಿಗೆ ಊಜಿ ನೊಣಗಳ ಕಾಟ ಹೆಚ್ಚಾಗಿರುತ್ತದೆ. ಊಜಿ ಅಥವಾ ಹಣ್ಣು ನೊಣದ ಬಾಧೆಯಿಂದ ಸರಾಸರಿ ಶೇ.30 ರಷ್ಟು ಇಳುವರಿ ನಷ್ಟವಾಗುತ್ತದೆ. ಮತ್ತೊಂದೆಡೆ ಹಣ್ಣಿನ ಗುಣಮಟ್ಟ ಕುಸಿದು ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗುತ್ತದೆ. ಹಾಗಾಗಿ ಬಹುತೇಕ ರೈತರು ಊಜಿ ನೊಣದ ಹಾವಳಿಯಿಂದ ಪಾರಾಗಲು ಮೋಹಕ ಬಲೆಯ ಮೊರೆ ಹೋಗಿದ್ದಾರೆ.

ಅಕಾಲಿಕ ಮಳೆಯಿಂದ ಬೆಳೆಗೆ ಕೀಟ ಬಾದೆ ಕಳೆದು ತಿಂಗಳು ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ ಮಾವಿನ ಮರಗಳಲ್ಲಿ ಹೂವು ಹಾಗೂ ಪಿಂದೆಗೆ ಹೆಚ್ಚಿನ ಹಾನಿಯಾಗಿದೆ. ಊಜಿ ನೊಣದ ಹತೋಟಿಗೆ ರೈತರು ಕ್ರಮ ಕೈಗೊಳ್ಳದಿದ್ದರೆ ಮತ್ತಷ್ಟು ಇಳುವರಿ ನಷ್ಟವಾಗುವ ಅಪಾಯವಿದೆ. ಊಜಿ ನೊಣಗಳು ಪೀಚನ್ನು ಕಚ್ಚಿ ತಿಂದು ಮೊಟ್ಟೆ ಇಡುತ್ತವೆ. ಅವು ಹುಳುಗಳಾಗಿ ಮಾರ್ಪಟ್ಟು ಪೀಚನ್ನು ಪ್ರವೇಶಿಸುತ್ತವೆ. ದಿನ ಕಳೆದಂತೆ ಹುಳುಗಳು ಗಾತ್ರದಲ್ಲಿ ದೊಡ್ಡದಾಗಿ ಬೆಳೆಗೆ ಹಾನಿ ಉಂಟು ಮಾಡುತ್ತವೆ. ಎಳೆ ಹಂತದಲ್ಲಿ ಬೀಜ ಸೇರಿದ ಹುಳುಗಳು ಕಾಯಿಯನ್ನು ಕೊರೆದು ಹೊರಬರುತ್ತವೆ. ಅಂತಹ ಕಾಯಿಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇರುವುದಿಲ್ಲ.

mango

ಮಾವನ್ನು ಕೀಟಬಾಧೆಯಿಮದ ರಕ್ಷಿಸಲು ಹೊಸ ಪ್ರಯತ್ನ

ಕೊಳೆತ ಕಾಯಿಗಳಿಂದ ಹೊರ ಬರುವ ಊಜಿ ನೊಣಗಳು ಆರೋಗ್ಯವಂತ ಕಾಯಿಯನ್ನು ಕಚ್ಚಿ ಮೊಟ್ಟೆ ಇಡುತ್ತವೆ. ಮೊಟ್ಟೆ ಒಡೆದು ಹೊರಬರುವ ಹುಳುಗಳು ಕಾಯಿ ಪ್ರವೇಶಿಸಿ ಕೊಳೆಯುವಂತೆ ಮಾಡುತ್ತವೆ. ಈ ನೊಣಗಳ ಹಾವಳಿಯನ್ನು ವ್ಯವಸ್ಥಿತವಾಗಿ ತಡೆದಲ್ಲಿ ಇಳುವರಿ ಹೆಚ್ಚುತ್ತದೆ. ಮೋಹಕ ಬಲೆಯನ್ನು ಸಾಂಘಿಕವಾಗಿ ಬಳಸುವುದರಿಂದ ಹೆಚ್ಚು ಪ್ರಯೋಜನವಾಗುತ್ತದೆ.

ಏನಿದು ಮೋಹಕ ಬಲೆ? ತಯಾರಿಸೋದು ಹೇಗೆ? ಮೋಹಕ ಬಲೆ ತಯಾರಿಸುವ ವಿಧಾನ ತುಂಬಾ ಸರಳ. ಒಂದು ಲೀಟರ್‌ ಸಾಮರ್ಥ್ಯದ ಖಾಲಿ ಪ್ಲಾಸ್ಟಿಕ್ ಬಾಟಲ್ಗೆ ಸ್ವಲ್ಪ ಕೆಳಭಾಗದಲ್ಲಿ 2 ರಂಧ್ರ ಕೊರೆಯಬೇಕು. ಬಾಟಲ್‌ನ ಒಳಗೆ ಒಂದು ಮರದ ತುಂಡು ಕಟ್ಟಬೇಕು. ಆ ಮರದ ತುಂಡಿನ ಮೇಲೆ 1 ಮಿ.ಲೀ ಮಿಥೈಲ್‌ ಯೂಜಿನಾಲ್ ಮತ್ತು 1 ಮಿ.ಲೀ ನಷ್ಟು ಡೈಕ್ಲೋರಾವಾಸ್‌ ಔಷಧ ಲೇಪಿಸಬೇಕು.

ಬಾಟಲ್‌ನ ಮುಚ್ಚಳ ಹಾಕಿದ ಬಳಿಕ ಅದನ್ನು ಆಳೆತ್ತರದಲ್ಲಿ ಮಾವಿನ ಮರದ ಕೊಂಬೆಗೆ ಕಟ್ಟಬೇಕು. ಔಷಧಿಯ ವಾಸನೆಯಿಂದ ಆಕರ್ಷಿತವಾದ ಊಜಿ ನೊಣಗಳಲ್ಲಿ ಶೇ 90ರಷ್ಟು ಬಾಟಲಿಯನ್ನು ಪ್ರವೇಶಿಸಿ ಸಾಯುತ್ತವೆ. ಮಾರುಕಟ್ಟೆಯಲ್ಲಿ ಸಿದ್ಧ ಮೋಹಕ ಬಲೆಗಳು ಸಿಗುತ್ತವೆ. ಒಂದು ಎಕರೆ ಮಾವಿನ ತೋಟಕ್ಕೆ ಐದರಿಂದ ಆರು ಕಡೆ ಮೋಹಕ ಬಲೆ ಕಟ್ಟಬೇಕು. ಮಾವು ಬೆಳೆಗಾರರ ಅನುಕೂಲಕ್ಕಾಗಿ ಮಾವು ಅಭಿವೃದ್ಧಿ ಮಂಡಳಿಯು ಕೀಟಗಳ ನಿವಾರಣೆಗೆ ಮೋಹಕ ಬಲೆ ತಯಾರಿಸಿದ್ದು, ರೈತರಿಗೆ ಸಬ್ಸಿಡಿ ದರದಲ್ಲಿ ನೀಡುತ್ತಿದೆ.

ಊಜಿ ನೊಣಗಳ ನಿಯಂತ್ರಣದಿಂದ ಫಸಲು ಹೆಚ್ಚುವುದರ ಜತೆಗೆ ಮಾವಿನ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಉತ್ತಮ ಗುಣಮಟ್ಟದ ಮಾವಿಗೆ ಮಾರುಕಟ್ಟೆಯಲ್ಲಿ ಲಾಭದಾಯಕ ಬೆಲೆ ಸಿಗುತ್ತದೆ. ಮಾವನ್ನು ಬಾಧಿಸುವ ಕೀಟಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮೋಹಕ ಬಲೆ ಬಳಸುವುದು ಸೂಕ್ತ. ಮಾವಿನ ಕಾಯಿಗಳು ಗೋಲಿ ಗಾತ್ರದಲ್ಲೇ ಇದ್ದಾಗ ಮೋಹಕ ಬಲೆ ಕಟ್ಟಬೇಕು. ಆಗ ನಿಯಂತ್ರಣಕ್ಕೆ ಬರುತ್ತದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಎಂ.ಗಾಯತ್ರಿ ಹೇಳಿದ್ದಾರೆ.

(ವರದಿ: ರಾಜೇಂದ್ರ ಸಿಂಹ-9980914108)

ಇದನ್ನೂ ಓದಿ: ವಾತಾವರಣದ ಏರುಪೇರು ಹಾಗೂ ಕೀಟಬಾಧೆ; ಕೋಲಾರದ ಮಾವು ಬೆಳೆಗಾರರಲ್ಲಿ ಹೆಚ್ಚಿದ ಆತಂಕ

(Kolar Mango Growers fed up of Infects and using infect nets to save fruits)

ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ