ಆಷಾಢ ಆರಂಭದಲ್ಲೇ ಮಾಂಸಪ್ರಿಯರಿಗೆ ಶಾಕ್: ಚಿಕನ್, ಮೊಟ್ಟೆ ಬೆಲೆಯಲ್ಲಿ ದಾಖಲೆಯ ಏರಿಕೆ

ಆಷಾಡ ಮಾಸ ಆರಂಭದಲ್ಲೇ ಕೋಲಾರದಲ್ಲಿ ಕೋಳಿ ಮತ್ತು ಮೊಟ್ಟೆ ಬೆಲೆಯಲ್ಲಿ ದಾಖಲೆ ಏರಿಕೆ ಕಂಡಿವೆ. ಕೋಳಿ ಫಾರಂಗಳಲ್ಲಿ ಉತ್ಪಾದನೆ ಕುಸಿತ, ವಾತಾವರಣ ಏರುಪೇರು, ರೋಗಗಳು ಇದಕ್ಕೆ ಮುಖ್ಯ ಕಾರಣ. ಮಾಂಸಪ್ರಿಯರು ಮತ್ತು ಹೋಟೆಲ್ ಮಾಲೀಕರಿಗೆ ಇದು ದೊಡ್ಡ ಆರ್ಥಿಕ ಹೊರೆಯಾಗಿದೆ. ಮುಂದಿನ ಒಂದು-ಎರಡು ತಿಂಗಳು ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ.

ಆಷಾಢ ಆರಂಭದಲ್ಲೇ ಮಾಂಸಪ್ರಿಯರಿಗೆ ಶಾಕ್: ಚಿಕನ್, ಮೊಟ್ಟೆ ಬೆಲೆಯಲ್ಲಿ ದಾಖಲೆಯ ಏರಿಕೆ
ಬೆಲೆ ಏರಿಕೆ
Image Credit source: tv9 kannada
Edited By:

Updated on: Jul 06, 2026 | 5:07 PM

ಮುಖ್ಯಾಂಶಗಳು

  • ಕೋಲಾರ ಜಿಲ್ಲೆಯ ಚಿಕನ್ ಮತ್ತು ಮೊಟ್ಟೆ ಬೆಲೆ ಏರಿಕೆ
  • ಮಾಂಸಪ್ರಿಯರು ಹಾಗೂ ಹೋಟೆಲ್ ಮಾಲೀಕರು ಕಂಗಾಲು
  • ಮೊಟ್ಟೆ ಹಾಗೂ ಕೋಳಿ ಸಾಕಾಣಿಕೆಯಲ್ಲಿ ಇಳಿಕೆ

ಕೋಲಾರ, ಜುಲೈ 06: ಆಷಾಡ ಮಾಸ ಆರಂಭದಲ್ಲೇ ಮಾಂಸಹಾರ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ಕೋಳಿ ಹಾಗೂ ಮೊಟ್ಟೆ ಬೆಲೆಯಲ್ಲಿ (chicken price hike) ಗಣನೀಯ ಏರಿಕೆ ಆಗಿದೆ. ಕಳೆದ ಹದಿನೈದು ದಿನದಲ್ಲಿ ಕೋಲಾರದಲ್ಲಿ (kolar) ಮೊಟ್ಟೆಯ ಬೆಲೆಯಲ್ಲಿ ದಾಖಲೆಯ ಏರಿಕೆ ಆಗಿದ್ದಾರೆ. ಈ ಬೆಲೆ ಏರಿಕೆ ಬಿಸಿಯಿಂದ ಮಾಂಸ ಪ್ರಿಯರು ಹಾಗೂ ಮಾಂಸಹಾರಿ ಹೋಟೆಲ್​​ ಮಾಲೀಕರು ಕಂಗಾಲಾಗಿದ್ದಾರೆ.

ಮೊಟ್ಟೆ ಹಾಗೂ ಚಿಕನ್ ಬೆಲೆಯಲ್ಲಿ ಗಣನೀಯ ಏರಿಕೆ

ಕೋಲಾರ ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಮೊಟ್ಟೆ ಹಾಗೂ ಚಿಕನ್ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಹೋಲ್​ ಸೇಲ್​​ನಲ್ಲಿ ಒಂದು ಮೊಟ್ಟೆ ಬೆಲೆ 7 ರೂ ಇದ್ದರೆ, ರೀಟೇಲ್​ ಅಂಗಡಿಗಳಲ್ಲಿ ಒಂದು ಮೊಟ್ಟೆಯ ಬೆಲೆ 8 ರೂ. ಯಿಂದ 8.50 ಪೈಸೆ ವರೆಗೆ ಏರಿಕೆಯಾಗಿದೆ. ಜೊತೆಗೆ ಚಿಕನ್​​ ಬೆಲೆಯೂ ದಾಖಲೆಯ ಏರಿಕೆಯಾಗಿದೆ. ಕೆಜಿಗೆ 180 ರಿಂದ 200 ರೂ ಇದ್ದ ಚಿಕನ್ ಬೆಲೆ ಇದೀಗ 280 ರಿಂದ 300 ರೂ. ಗೆ ಏರಿಕೆಯಾಗಿದೆ. ಪರಿಣಾಮ ಮಾಂಸಹಾರಿ ಹೋಟೆಲ್​​ ಮಾಲೀಕರು ಹಾಗೂ ಮಾಂಸಪ್ರಿಯರಿಗೆ ಬೆಲೆ ಏರಿಕೆ ಬಿಗ್ ಶಾಕ್ ಕೊಟ್ಟಿದೆ.

ಇದನ್ನೂ ಓದಿ: ಸರ್ಕಾರಿ ಶಾಲೆ ಗೇಟ್ ಬಿದ್ದು ದುರಂತ: ನಾಲ್ವರು ಮಕ್ಕಳಿಗೆ ಗಾಯ; ಓರ್ವ ವಿದ್ಯಾರ್ಥಿನಿಗೆ ಗಂಭೀರ ಗಾಯ

ಇನ್ನು ಕೋಲಾರ ಜಿಲ್ಲೆಯಲ್ಲಿ ಸುಮಾರು 250ಕ್ಕೂ ಹೆಚ್ಚು ಕೋಳಿ ಫಾರಂಗಳಿವೆ. ಜೊತೆಗೆ ಮೊಟ್ಟೆ ಉತ್ಪಾದನೆ ಮಾಡುವ ಫಾರಂಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇಲ್ಲಿನ ಕೋಳಿ ಹಾಗೂ ಮೊಟ್ಟೆ ಹೊರರಾಜ್ಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ರಪ್ತು ಮಾಡಲಾಗುತ್ತದೆ. ಆದರೆ ವಾತಾವರಣದಲ್ಲಿನ ಏರುಪೇರು ಹಾಗೂ ಕೋಳಿಗಳಿಗೆ ವಿವಿಧ ರೀತಿಯ ರೋಗಗಳ ಪರಿಣಾಮ ಕೋಳಿ ಮೊಟ್ಟೆ ಹಾಗೂ ಮಾಂಸ ಉತ್ಪಾದನೆಯಲ್ಲಿ ಕುಸಿತವಾಗಿರುವುದೇ ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಒಂದು ಮೊಟ್ಟೆ ಬೆಲೆ 10 ರೂ ಸಾಧ್ಯತೆ?

ಕಳೆದ ಹದಿನೈದು ದಿನಗಳಲ್ಲಿ ಮೊಟ್ಟೆ ಬೆಲೆಯಲ್ಲಿ ಏರಿಕೆಯಾಗಿದ್ದು, ಇನ್ನು 1 ರಿಂದ 2 ತಿಂಗಳ ಕಾಲ ಇದೇ ರೀತಿಯ ಬೆಲೆ ಏರಿಕೆಯಾಗುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಒಂದು ಮೊಟ್ಟೆಯ ಬೆಲೆ 9 ರಿಂದ 10 ರೂಪಾಯಿಗೆ ತಲುಪುವ ಸಾಧ್ಯತೆಯಿದೆ. ಅದೇ ರೀತಿ ಚಿಕನ್​ ಬೆಲೆಯು ಕೂಡ ಏರಿಕೆಯಾಗುವ ಸಾಧ್ಯತೆ ಇದೆ ಅನ್ನೋದು ವ್ಯಾಪಾರಿ ಗೋವಿಂದರಾಜು ಅವರು ಮಾತು.

ಇದನ್ನೂ ಓದಿ: ವಿಜಯಪುರ: ಬರಡಾಗಿದ್ದ ಭೂಮಿಯಲ್ಲಿ ಈಗ ಹಾಲಿನ ಹೊಳೆ! ಬಬಲೇಶ್ವರದಲ್ಲಿ ಕ್ಷೀರಕ್ರಾಂತಿ

ಒಟ್ಟಾರೆ ಕೋಳಿಗಳಿಗೆ ರೋಗದ ಕಾರಣದಿಂದ ಕುಕ್ಕುಟೋದ್ಯಮದಲ್ಲಿ ಮೊಟ್ಟೆ ಹಾಗೂ ಚಿಕನ್​ ಉತ್ಪಾದನೆಯಲ್ಲಿ ಇಳಿಕೆಯೇ ಬೆಲೆ ಏರಿಕೆಗೆ ಕಾರಣವಾಗಿದ್ದು, ಉತ್ಫಾದನೆ ಮತ್ತು ಬೇಡಿಕೆ ಎರಡು ಹತೋಟಿಗೆ ಬರುವವರೆಗೂ ಮಾಂಸಪ್ರಿಯರಿಗೆ ಮೊಟ್ಟೆ ಹಾಗೂ ಚಿಕನ್ ಬೆಲೆ ಏರಿಕೆ ಬಿಸಿ ತಟ್ಟುವುದು ಮಾತ್ರ ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us