ಕೋಲಾರ, (ಜೂನ್ 03): ಲೋಕಸಭಾ ಚುನಾವಣೆಯ ಫಲಿತಾಂಶ (loksabha Election Results 2024) ನಾಳೆ (ಜೂನ್ 04) ಪ್ರಕಟವಾಗಲಿದ್ದು, ಎಕ್ಸಿಕ್ ಪೋಲ್ಗಳು ಈ ಬಾರಿ ಮತ್ತೊಮ್ಮೆ ಎನ್ಡಿಎ ಅಧಿಕಾರಕ್ಕೆ ಬರುತ್ತೆ. ನರೇಂದ್ರ ಮೋದಿ ಅವರೇ ಪ್ರಧಾನಿಯಾಗುವುದು ಗ್ಯಾರಂಟಿ ಎಂದು ಭವಿಷ್ಯ ನುಡಿದಿವೆ. ಇನ್ನು ಈ ಎಕ್ಸಿಟ್ ಪೋಲ್ ಬಗ್ಗೆ ಪ್ರತಿಕ್ರಿಯಿಸಿರುವ ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್(Kolar Congress MLA kottur manjunath), ಕೇಂದ್ರದಲ್ಲಿ ಬಿಜೆಪಿ ಬರುತ್ತೆ ಅನ್ನೋದು ನನಗೂ ಗೊತ್ತು ಎನ್ನುವ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಕೋಲಾರದಲ್ಲಿಂದು ಎಕ್ಸಿಟ್ ಪೋಲ್ ಬಗ್ಗೆ ಮಾತನಾಡಿರುವ ಕೊತ್ತೂರು ಮಂಜುನಾಥ್, ಕೇಂದ್ರದಲ್ಲಿ ಬಿಜೆಪಿ ಬರುತ್ತೆ ಅನ್ನೋದು ನನಗೂ ಗೊತ್ತು . ನಾನು ಕಾಂಗ್ರೆಸ್ ಶಾಸಕನಾದರೂ ನಿಜ ಹೇಳಬೇಕು, ಸುಳ್ಳು ಹೇಳಬಾರದು. ಕೇಂದ್ರದಲ್ಲಿ ಬಿಜೆಪಿ ಬರುವ ಬಗ್ಗೆ ಮೊದಲೇ ಗೊತ್ತಿರುವ ವಿಚಾರವಾಗಿದೆ. ಈ ಬಾರಿ ಬಿಜೆಪಿ ಬರಲಿ ಮುಂದಿನ ಚುನಾವಣೆ ನಮ್ಮ ಗುರಿ. ಅದಕ್ಕೆ ಬೇಕಾದ ಪೂರ್ವ ತಯಾರಿ ನಡೆಯುತ್ತಿದೆ. ರಾಜ್ಯದಲ್ಲಿ ಶೇಕಡಾ 50-50 ಬರಲಿದೆ. ಕೋಲಾರದಲ್ಲಿ 29 ಸಾವಿರ ಮತಗಳಿಂದ ಕಾಂಗ್ರೆಸ್ ಗೆಲ್ಲದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಮೂಲಕ ಅವರು ಪರೋಕ್ಷವಾಗಿ ಕೇಂದ್ರದಲ್ಲಿ ಐಎನ್ಡಿಎ ಅಧಿಕಾರಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Election Results 2024 Live: ಕರ್ನಾಟಕದಲ್ಲಿ 15-20 ಸ್ಥಾನ ಗೆಲ್ಲುತ್ತೇವೆ; ಸಿದ್ದರಾಮಯ್ಯ
ಈ ಬಾರಿ ಎನ್ಡಿಎಗೆ 295 ಸ್ಥಾನಗಳು ದೊರೆಯಲಿವೆ ಎಂದು ಸ್ವತಃ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿಕೊಂಡಿದ್ದಾರೆ. ಆದ್ರೆ, ಇದೀಗ ಸ್ವತಃ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಈ ಮೂಲಕ ಫಲೊತಾಂಶಕ್ಕೂ ಮುನ್ನವೇ ಸೋಲೋಪ್ಪಿಕೊಂಡಿದ್ದಾರೆ.
ಇನ್ನು ಮಾತು ಮುಂದರೆಸಿರುವ ಮಂಜುನಾಥ್, ರಮೇಶ್ ಕುಮಾರ್ಗೆ ವಿಧಾನಪರಿಷತ್ ಟಿಕೆಟ್ ಕೇಳಿದ್ದೀವಿ. ಆದ್ರೆಮ ಅದು ಸಿಗಲಿಲ್ಲ. ರಮೇಶ್ ಕುಮಾರ್ ಅವರು ಕೇಳಿಲ್ಲ, ನಾವೇ ಹೋಗಿ ಕೇಳಿದ್ದು, ಅವರಿಗೆ ಈಗ ಅವಕಾಶ ತಪ್ಪಿದೆ. ಮುಂದೆ ಒಳ್ಳೆ ಅವಕಾಶ ಕಾಯುತ್ತಿರುತ್ತೆ. ರಾಜ್ಯದಲ್ಲಿ ಸಚಿವ ಸ್ಥಾನ ಬದಲಾವಣೆಯಾದರೆ ಕೋಲಾರಕ್ಕೆ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಿದರು.
ಇನ್ನು ಇದೇ ವೇಳೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಕುರಿತು ಮಾತನಾಡಿದ ಅವರು, ಜನರು ಪ್ರೀತಿಯಿಂದ ಮತ ಹಾಕುವುದಕ್ಕೆ ಬರುತ್ತಿದ್ದಾರೆ. ಶಿಕ್ಷಕರು ಬುದ್ದಿವಂತರು, ಕೋಲಾರದಲ್ಲಿ ಒಳ್ಳೆ ವಾತಾವರಣವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವಿದೆ. ನಮಗೂ ಜವಾಬ್ದಾರಿ ಇರುವುದರಿಂದ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಲಾಗುತ್ತಿದೆ ಎಂದರು.
ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೇ ಅಭಿವೃದ್ದಿ ಕೆಲಸಗಳು ಆರಂಭವಾಗಲಿದೆ. ರಿಂಗ್ ರೋಡ್ ಗೆ ಡಿಪಿಆರ್ ಆಗಿದೆ. ಮೂರು ತಿಂಗಳ ಒಳಗೆ ಟಿಂಡರ್ ಪ್ರಕ್ರಿಯೆ ಸಹ ಮುಗಿಯಲಿದೆ. ಎಪಿಎಂಸಿ ಜಾಗ ಕೂಡಲೇ ಆಗಲಿದೆ. ಚಲುವನಹಳ್ಳಿ ಜಾಗ ನೋಡಿದ್ದು, ಅದೇ ಪೈನಲ್ ಆಗಲಿದೆ ಎಂದು ತಿಳಿಸಿದರು.