ಬೈಕ್‌ಗೆ ಬಸ್ ಡಿಕ್ಕಿ: ಊಟ ಮುಗಿಸಿ ಕಚೇರಿಗೆ ವಾಪಸಾಗುತ್ತಿದ್ದಾಗ BEML ಡೆಪ್ಯೂಟಿ ಜನರಲ್ ಮ್ಯಾನೇಜರ್ ಸಾವು
ಮೃತ ಓಂ ಪ್ರಕಾಶ್ (58) ಕೆಜಿಎಫ್ ಘಟಕದ ಬಿಇಎಂಎಲ್ ಕಾರ್ಖಾನೆಯ ಡೆಪ್ಯೂಟಿ ಜನರಲ್ ಮ್ಯಾನೇಜರ್ (KGF BEML Deputy General Manager ) ಆಗಿದ್ದರು. ಮನೆಯಲ್ಲಿ ಊಟ ಮುಗಿಸಿ ಕಚೇರಿಗೆ ವಾಪಸ್ ಆದ ವೇಳೆ ಬೆಮೆಲ್ ಕಾರ್ಖಾನೆ ಎದುರೇ ಅಪಘಾತ ಸಂಭವಿಸಿದೆ.
ಕೋಲಾರ, ನವೆಂಬರ್ 20: ರಸ್ತೆ ಅಪಘಾತದಲ್ಲಿ ನಿವೃತ್ತಿಯ ಅಂಚಿನಲ್ಲಿದ್ದ ಬೆಮೆಲ್ ಹಿರಿಯ ಅಧಿಕಾರಿ ಸಾವಿಗೀಡಾಗಿದ್ದಾರೆ. ಬೆಮೆಲ್ ಅಧಿಕಾರಿ ಸವಾರಿ ಮಾಡುತ್ತಿದ್ದ ಬೈಕ್‌ಗೆ ಖಾಸಗಿ ಬಸ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಬೆಮೆಲ್ ಕಾರ್ಖಾನೆ ಎದುರೇ (Bus collides with bike) ಈ ದುರ್ಘಟನೆ ನಡೆದಿದೆ.
ಮೃತ ಓಂ ಪ್ರಕಾಶ್ (58) ಕೆಜಿಎಫ್ ಘಟಕದ ಬಿಇಎಂಎಲ್ ಕಾರ್ಖಾನೆಯ ಡೆಪ್ಯೂಟಿ ಜನರಲ್ ಮ್ಯಾನೇಜರ್ (KGF BEML Deputy General Manager ) ಆಗಿದ್ದರು. ಮನೆಯಲ್ಲಿ ಊಟ ಮುಗಿಸಿ ಕಚೇರಿಗೆ ವಾಪಸ್ ಆದ ವೇಳೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಡಿಜಿಎಂ ಓಂ ಪ್ರಕಾಶ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ಹೆದ್ದಾರಿ ದರೋಡೆಕೋರ ಬಂಧನ ಮಾಡಿದ ಹಾನಗಲ್ ಪೊಲೀಸರು
ಹಾವೇರಿ: ವಾಹನ ಅಡ್ಡಗಟ್ಟಿ ಹೆದರಿಸಿ, ಬೆದರಿಸಿ ಸೂಲಿಗೆ ಮಾಡುತ್ತಿದ್ದ 5 ಜನ ರಾಜ್ಯ ಹೆದ್ದಾರಿ ದರೋಡೆಕೋರರನ್ನು ಹಾನಗಲ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1 ಲಕ್ಷ ಮೌಲ್ಯದ ನಗದು, ಮೊಬೈಲ್ ಹಾಗೂ ಮೋಟಾರು ಸೈಕಲ್ ವಶ ಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನ ಪ್ರವೀಣ ಸಾತಪತಿ 31 ವರ್ಷ, ರಾಕೇಶ ಬಾರ್ಕಿ 22 ವರ್ಷ, ಜಗದೀಶ್ 21 ವರ್ಷ, ಅಣ್ಣಪ್ಪ 22 ವರ್ಷ, ಗಣೇಶ 21 ವರ್ಷ ಎಂದು ಗುರುತಿಸಲಾಗಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಗಜ್ಜಿಹಳ್ಳಿ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ವಾಹನ ತಡೆದು ಕಳ್ಳತನ ಮಾಡುತ್ತಿದ್ದರು. ಇರ್ಷಾದ್ ಮತ್ತು ಗೌಸ್ ಮಹಿನುದ್ದಿನ್ ಎಂಬಿಬ್ಬರು ತರಕಾರಿ ವ್ಯಾಪಾರಸ್ಥರನ್ನು ಇವರು ದರೋಟೆ ಮಾಡಿದ್ದರು. ಪ್ರಕರಣ ನಡೆದ 8 ಗಂಟೆಗಳಲ್ಲಿ ಆರೋಪಿಗಳನ್ನ ಹಾನಗಲ್ ಪೊಲೀಸರು ಬಂಧಿಸಿದ್ದಾರೆ.
ಲಾಂಗು, ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಯುವಕರಿಬ್ಬರ ಬಂಧನ
ಕೋಲಾರ ನವೆಂಬರ್ 20: ಲಾಂಗು, ಮಚ್ಚು ಹಿಡಿದು ರೀಲ್ಸ್ (Reels) ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದ ಇಬ್ಬರು ಯುವಕರನ್ನು ಪೊಲೀಸರು ಕೋಲಾರ ತಾಲೂಕಿನ ನರಸಾಪುರದಲ್ಲಿ ಬಂಧಿಸಿದ್ದಾರೆ. ಅಕ್ರಮ ಶಸ್ತಾಸ್ತ್ರ ಕಾಯ್ದೆ ಪ್ರಕರಣದಡಿ ನರಸಾಪುರದ ವೇಣು ಮತ್ತು ಪವನ್ ಕುಮಾರ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಇತ್ತೀಚಿಗೆ ಯುವಕರು ಅಪರಾಧ ಪ್ರಕರಣಗಳಲ್ಲಿ ಹಚ್ಚಾಗಿ ಕಾಣಿಸಿಕೊಂಡಿದ್ದರು. ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಟ್ಟಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:22 pm, Mon, 20 November 23