ಕೋಲಾರದಲ್ಲಿ ಅಕ್ರಮ ಗಾಂಜಾ, ಡ್ರಗ್ಸ್​ ಕೃತ್ಯ ಹೆಚ್ಚಳ; ನಶೆಯಲ್ಲಿ ತೇಲಾಡುತ್ತಿದ್ದ ಯುವಕರಿಗೆ ಚಳಿ ಬಿಡಿಸಿದ ಅಬಕಾರಿ, ಪೊಲೀಸ್​ ಇಲಾಖೆ

ಡ್ರಗ್, ಗಾಂಜಾ, ಅಕ್ರಮ ಮದ್ಯದಿಂದ ಅಪರಾಧ ಕೃತ್ಯಗಳು ಹೆಚ್ಚಾದ ಆರೋಪದ ಹಿನ್ನಲೆ ಕೋಲಾರ ಜಿಲ್ಲಾ ಪೊಲೀಸ್​ ಹಾಗೂ ಅಬಕಾರಿ ಇಲಾಖೆ ಕಳೆದ ಎರಡು ದಿನಗಳಿಂದ ನಿರಂತರ ಕಾರ್ಯಾಚರಣೆ ಮಾಡುವ ಮೂಲಕ ನಶೆಯಲ್ಲಿ ತೇಲಾಡುತ್ತಿದ್ದ ಯುವಕರಿಗೆ ಚಳಿ ಬೀಡಿಸುವ ಜೊತೆಗೆ ಪೊಲೀಸರು, ರೌಡಿ ಶೀಟರ್​ಗಳಿಗೆ ಎಚ್ಚರಿಕೆ ನೀಡುವ ಕೆಲಸಕ್ಕೆ ಮುಂದಾಗಿದೆ. 

ಕೋಲಾರದಲ್ಲಿ ಅಕ್ರಮ ಗಾಂಜಾ, ಡ್ರಗ್ಸ್​ ಕೃತ್ಯ ಹೆಚ್ಚಳ; ನಶೆಯಲ್ಲಿ ತೇಲಾಡುತ್ತಿದ್ದ ಯುವಕರಿಗೆ ಚಳಿ ಬಿಡಿಸಿದ ಅಬಕಾರಿ, ಪೊಲೀಸ್​ ಇಲಾಖೆ
ಕೋಲಾರ
Follow us
| Edited By: Kiran Hanumant Madar

Updated on: Nov 19, 2023 | 7:19 PM

ಕೋಲಾರ, ನ.19: ಕಳೆದ ಮೂರು ತಿಂಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಸುಮಾರು 40 ಕೊಲೆಗಳು ನಡೆದಿವೆ. ಅದರಲ್ಲೂ ಮೂರು ಅತೀ ಆತಂಕವಾಗಿ ಕೊಲೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಕೋಲಾರ(Kolar)ದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಣಕ್ಕೆ ತರಲು ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಅಷ್ಟೇ ಅಲ್ಲದೆ ಕಾನೂನು ಸುವ್ಯವಸ್ಥೆ ಹಾಳಾಗಲು ಕಾರಣವಾದ ಮಾದಕ ವಸ್ತುಗಳ ನಿಯಂತ್ರಣ ಮಾಡಲು ಪೊಲೀಸ್​ ಇಲಾಖೆ, ಅಬಕಾರಿ ಇಲಾಖೆ ಹಾಗೂ ಜಿಲ್ಲಾ ಔಷಧ ನಿಯಂತ್ರಣ ಇಲಾಖೆಗಳು ನಿರಂತವಾಗಿ ಮೆಡಿಕಲ್ ಸ್ಟೋರ್​ಗಳು, ಬಾರ್​ಗಳು, ವೈನ್ಸ್​ ಸ್ಟೋರ್​ಗಳ ಮೇಲೆ ನಿರಂತರ ದಾಳಿ ಮಾಡಿ ತಪಾಸಣೆ ಮಾಡುತ್ತಿವೆ.
ಇನ್ನೊಂದೆಡೆ ಪೊಲೀಸರು, ರೌಡಿಶೀಟರ್​​ಗಳ ಮನೆಗಳ ಮೇಲೆ ದಾಳಿ ಮಾಡಿ, ರೌಡಿಗಳಿಗೆ ಎಚ್ಚರಿಕೆ ಕೊಡುವ ಜೊತೆಗೆ ಅವರ ಮನೆಗಳನ್ನು ತಪಾಸಣೆ ಮಾಡುತ್ತಿದೆ. ಇನ್ನು ಯುವಕರು ಹೆಚ್ಚಾಗಿ ಮಾದಕ ವಸ್ತುಗಳಾದ ಗಾಂಜಾ ಸೇರಿದಂತೆ ಇತರ ವಸ್ತುಗಳಿಗೆ ಮಾರು ಹೋಗುತ್ತಿರುವ ಹಿನ್ನೆಲೆಯಲ್ಲಿ ಹಾಸ್ಟಲ್​ಗಳನ್ನೂ ತಪಾಸಣೆ ಮಾಡಲಾಗುತ್ತಿದೆ. ಈ ಮೂಲಕ ಕಳೆದೊಂದು ವಾರದಿಂದ ನಿರಂತರ ಕಾರ್ಯಾಚರಣೆ ಮೂಲಕ ಸದ್ಯ ಕೋಲಾರದಲ್ಲಿ ಹದಗೆಟ್ಟಿರುವ ವ್ಯವಸ್ಥೆಯನ್ನು ಸರಿದಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲೂ ಕೂಡ ಉಸ್ತುವಾರಿ ಸಚಿವ ಬೈರತಿ ಸುರೇಶ್​, ಸ್ವತ: ಗೃಹಸಚಿವರಿಗೆ ಕರೆ ಮಾಡಿ ಜಿಲ್ಲೆಯಲ್ಲಿ ಖಾಲಿ ಇರುವ ಪೊಲೀಸ್ ಅಧಿಕಾರಿಗಳ ಹುದ್ದೆಯನ್ನು ತುಂಬಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇನ್ನು ಕೋಲಾರ ಜಿಲ್ಲೆಯಲ್ಲಿ‌ ಅಪ್ರಾಪ್ತ ಬಾಲಕ ಕಾರ್ತಿಕ್ ಸಿಂಗ್ ಕೊಲೆ ಪ್ರಕರಣದಿಂದ ಬೆಚ್ಚಿಬಿದ್ದಂತಹ ಜನರಲ್ಲಿ ಧೈರ್ಯ ತುಂಬಲು ಸದ್ಯ ಪೊಲೀಸ್ ಇಲಾಖೆ ಶಾಲಾ ಕಾಲೇಜುಗಳಲ್ಲಿ ಕಾನೂನು ಅರಿವು ಹಾಗೂ ಮಾದಕ ವಸ್ತುಗಳ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಅಲ್ಲದೆ ಕೋಲಾರ ನಗರದ ಪ್ರತಿಯೊಂದು ಬಡಾವಣೆಯಲ್ಲಿ ಸ್ಪೆಷಲ್ ಡ್ರೈವ್ ಮಾಡಲು ಮುಂದಾಗಿದೆ. ಹಾಸ್ಟೆಲ್, ‌ಪಾರ್ಕ್, ಹಳೆ ಕಟ್ಟಡಗಳು ಸೇರಿದಂತೆ ಯುವಕರು ಸೇರುವಂತಹ ಅಕ್ರಮ ತಾಣಗಳ ಮೇಲೆ ಕಾರ್ಯಾಚರಣೆ ಮಾಡಿ ಜನರನ್ನು ಠಾಣೆಗೆ ಕರೆತಂದು ಪ್ರಕರಣ ದಾಖಲು ಮಾಡಿ ಎಚ್ಚರಿಕೆ ಕೊಟ್ಟು ಕಳಿಸುವ ಕೆಲಸ ಮಾಡುತ್ತಿದೆ.
ಇದರ ಜೊತೆಗೆ ಯುವಜನತೆಗೆ ಬುದ್ದಿ ಹೇಳುವ ಜೊತೆಗೆ ಪೊಲೀಸರು ಲಾಠಿ ರುಚಿಯನ್ನು ತೋರಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಸುಮಾರು 50 ಕ್ಕೂ ಹೆಚ್ಚು ಅಡ್ಡೆಗಳ ಮೇಲೆ ದಾಳಿ ಮಾಡಿ ಕ್ರಮ ಕೈಗೊಂಡಿದ್ದಾರೆ. ಇನ್ನು ಅಬಕಾರಿ ಹಾಗೂ ಡ್ರಗ್​ ಕಂಟ್ರೋಲರ್​ ಸಹ ಪೊಲೀಸರ ಜೊತೆಗೆ ನಿರಂತರ ಕಾರ್ಯಾಚರಣೆ ಮಾಡಿ ಮಾದಕತೆ ಇರುವ ಮಾತ್ರೆಗಳನ್ನು ಮಾರಾಟ ಮಾಡುವ ಮುನ್ನ ಎಚ್ಚರ ವಹಿಸಲು ಸೂಚಿಸಿದೆ. ಒಟ್ಟಾರೆ ಕೋಲಾರದಲ್ಲಿ ಅತಿಯಾಗಿರುವ ಗಾಂಜಾ, ಡ್ರಗ್ಸ್​, ಸೇರಿದಂತೆ ಕ್ರಿಕೆಟ್ ಬೆಟ್ಟಿಂಗ್ ನಂತರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ವಿಶೇಷ ಡ್ರೈವ್​ಗಳನ್ನು ಮಾಡಲಾಗುತ್ತಿದೆ. ಸದ್ಯ ಇದಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ಮಾತುಗಳು ಕೇಳಿಬರುತ್ತಿವೆ. ಆದರೂ ಅಪರಾಧ ಪ್ರಕರಣಗಳಿಗೆ ಕಡಿವಾಣ ಬೀಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್