ಕೋಲಾರ: ಯಾರು ಯಾವ ಧರ್ಮ ಬೇಕಾದ್ರೂ ಸ್ವೀಕರಿಸಬಹುದು. ಹಿಂದೂ ಆಗಿ ಸಾಯಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಮಹಾನ್ ವ್ಯಕ್ತಿಯನ್ನೇ ಮತಾಂತರದಿಂದ ತಪ್ಪಿಸಲು ಆಗಿಲ್ಲ. ಯಾರಿಗೆ ಯಾವ ಧರ್ಮ ಇಷ್ಟವಾಗತ್ತೋ ಅಲ್ಲಿ ಇರಬಹುದು ಎಂದು ಕೋಲಾರದಲ್ಲಿ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಹೇಳಿಕೆ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಮತಾಂತರ ನಿಷೇಧ ವಿಚಾರವಾಗಿ ಬಹಳಷ್ಟು ಚರ್ಚೆಯಾಗುತ್ತಿದೆ. ರಾಜಕೀಯ ನಾಯಕರು ಈ ಬಗ್ಗೆ ವಿವಿಧ ಹೇಳಿಕೆ ನೀಡುತ್ತಿದ್ದಾರೆ. ಈ ನಡುವೆ ಶನಿವಾರ, ರಮೇಶ್ ಕುಮಾರ್ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.
ಯಾರಿಗೆ ಯಾವ ಮತದಲ್ಲಿ ಇಷ್ಟ ಇದ್ರೆ ಅದರಲ್ಲಿ ಇರಬಹುದು. ಹಿಂದುವಾಗಿ ಹುಟ್ಟುವುದು ತಪ್ಪಿಸಲು ಸಾಧ್ಯವಿಲ್ಲ. ಆದ್ರೆ ಹಿಂದುವಾಗಿ ಸಾಯಿಯುವುದಿಲ್ಲ ಎಂದು ಅಂಬೇಡ್ಕರ್ ಹೇಳಿದ್ರು. ಅದಕ್ಕೆ ಯಾರ ಬಳಿ ಉತ್ತರ ಇಲ್ಲ, ಅವರಿಗಿಂತ ಮಹಾನ್ ವ್ಯಕ್ತಿ ಬೇಕೆ ನಿಮಗೆ. ಬಡತನ, ಅಸ್ಪೃಶ್ಯತೆ ಮೊದಲು ನಿವಾರಣೆಯಾಗಲಿ ಎಂದು ಸ್ವಾಮಿ ವಿವೇಕಾನಂದ ಮದ್ರಾಸ್ನಲ್ಲಿ ಹೇಳುತ್ತಾರೆ. ಮಾನವ ಧರ್ಮ ದೊಡ್ಡದ್ದು ಎಂದು ಬಸವಣ್ಣ ಹೆಳಿದ್ರು. ಯಾರು ಯಾವ ದರ್ಮ ಬೇಕಾದ್ರು ಸ್ವೀಕರಿಸಬಹುದು ಎಂದು ರಮೇಶ್ ಕುಮಾರ್ ಹೇಳಿದ್ದಾರೆ.
ಕೋಲಾರ ಶಾಸಕ ಶ್ರೀನಿವಾಸಗೌಡ ಕಾಂಗ್ರೇಸ್ ಸೇರ್ಪಡೆ ವಿಚಾರವಾಗಿ ಕೋಲಾರದಲ್ಲಿ ರಮೇಶ್ ಕುಮಾರ್ ಮಾತನಾಡಿದ್ದಾರೆ. ಕಾಂಗ್ರೆಸ್ ಒಂದು ದೊಡ್ಡ ಸಂಸ್ಥೆ. ಅದನ್ನು ಸೇರಬೇಕು ಎಂದು ತೀರ್ಮಾನ ಮಾಡಿದ್ರೆ ಸೇರ್ತಾರೆ. ಅವರು ಗ್ರಾಮ ಪಂಚಾಯತಿನಿಂದ ಜನರ ಮಧ್ಯೆ ಆಯ್ಕೆಯಾಗಿ ಬಂದವರು. ಅವರೇನು ಆಕಾಶದಿಂದ ಉದುರಿಬಂದವರಲ್ಲ. ಗಾಳಿಯಲ್ಲಿ ತೇಲಿ ಬಂದವರಲ್ಲ.
ಅವರಿಗೆ ಅವರದೇ ಆದ ಶಕ್ತಿ ಸಾಮರ್ಥ್ಯ ಇದೆ. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಕ್ಷೇತ್ರದಲ್ಲಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಇಷ್ಟು ಹಳೆ ಮನುಷ್ಯ, ಅನುಭವ ಇರುವವರು ಕಾಂಗ್ರೆಸ್ಗೆ ಬಂದ್ರೆ ಶಕ್ತಿ ಬರಲಿದೆ. ಅವರು ಸೆಕ್ಯೂಲರ್ ಆಗಿ ಕೆಲಸ ಮಾಡಬೇಕು ಎಂದುಕೊಂಡಿದ್ದಾರೆ. ಸಂವಿಧಾನದಲ್ಲಿ ಅವಕಾಶವಿದೆ. ಸ್ವತಂತ್ರವಾಗಿ ಅವರು ನಾಯಕರು. ಅವರಿಗೆ ಯಾರ ಕೃಪ ಕಟಾಕ್ಷ ಬೇಕಾಗಿಲ್ಲ ಎಂದು ತಿಳಿಸಿದ್ದಾರೆ. ಈ ವೇಳೆ, ಶಾಸಕರಾದ ರಮೇಶ್‌ಕುಮಾರ್, ಕೃಷ್ಣ ಭೈರೇಗೌಡ ಹಾಗೂ ಶ್ರೀನಿವಾಸಗೌಡರು ಕೆರೆಗೆ ಬಾಗಿನ ಅರ್ಪಣೆ ಮಾಡಿದ್ದಾರೆ. ಕೋಲಾರಮ್ಮ ಕೆರೆಗೆ ಬಾಗಿನ ಅರ್ಪಿಸಿದ್ದಾರೆ.
ಇದನ್ನೂ ಓದಿ: ಉಪಚುನಾವಣೆಯಲ್ಲಿ ಜೆಡಿಎಸ್ನಿಂದ ಮುಸ್ಲಿಂ ಅಭ್ಯರ್ಥಿ ವಿಚಾರ; ಸಿದ್ದರಾಮಯ್ಯ, ಕುಮಾರಸ್ವಾಮಿ ವಾಕ್ಸಮರ
ಇದನ್ನೂ ಓದಿ: ಸದಾನಂದಗೌಡ ವಿರುದ್ಧ ಮಾತಿನ ಚಾಟಿ ಬೀಸಿದ ಕಾಂಗ್ರೆಸ್
Published On - 3:56 pm, Sat, 2 October 21