D Devaraj: ಕೋಲಾರ ಜಿಲ್ಲೆಯ ನೂತನ ಎಸ್ಪಿಯಾಗಿ ಡಿ.ದೇವರಾಜ್ ಅಧಿಕಾರ ಸ್ವೀಕಾರ

ಸಾರ್ವಜನಿಕರು ನೇರವಾಗಿ ನಮ್ಮನ್ನು ಸಂಪರ್ಕಿಸಿ ಸಮಸ್ಯೆ‌ ಹೇಳಿಕೊಳ್ಳಬಹುದು. ನನ್ನ ಸಂಪರ್ಕ ಮಾಡಲು ಯಾವುದೇ ಮುಖಂಡರ‌ ಅವಶ್ಯಕತೆ ಇಲ್ಲ. ನೇರವಾಗಿ ತಮ್ಮ ಕಚೇರಿಗೆ ಅಥವಾ ಮೊಬೈಲ್ ನಂಬರ್​ಗೆ ಕರೆ ಮಾಡಿ ಮಾತನಾಡಬಹುದು ಎಂದು ನೂತನ ಎಸ್ಪಿ ಡಿ.ದೇವರಾಜ್ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ತಿಳಿಸಿದ್ರು.

D Devaraj: ಕೋಲಾರ ಜಿಲ್ಲೆಯ ನೂತನ ಎಸ್ಪಿಯಾಗಿ ಡಿ.ದೇವರಾಜ್ ಅಧಿಕಾರ ಸ್ವೀಕಾರ
ಕೋಲಾರ ಜಿಲ್ಲೆಯ ನೂತನ ಎಸ್ಪಿ ಡಿ.ದೇವರಾಜ್

ಕೋಲಾರ: ಕೋಲಾರ ಜಿಲ್ಲೆಯ ನೂತನ ಎಸ್ಪಿಯಾಗಿ ಡಿ.ದೇವರಾಜ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಕೋಲಾರ ತಾಲೂಕು ಕೋರಗೊಂಡಹಳ್ಳಿ ಗ್ರಾಮದವರಾದ ದೇವರಾಜ್ ಅವರಿಗೆ ತನ್ನ ಸ್ವಂತ ಜಿಲ್ಲೆಯಲ್ಲಿ ಕೆಲಸ ಮಾಡೋದು ಒಂದು ವಿಶೇಷ ಹಾಗೂ ಸವಾಲಿನ ಕೆಲಸ. ಇದೇ ವೇಳೆ ಮಾತನಾಡಿದ ಅವರು, ಸಾರ್ವಜನಿಕರು ನೇರವಾಗಿ ನಮ್ಮನ್ನು ಸಂಪರ್ಕಿಸಿ ಸಮಸ್ಯೆ‌ ಹೇಳಿಕೊಳ್ಳಬಹುದು. ನನ್ನ ಸಂಪರ್ಕ ಮಾಡಲು ಯಾವುದೇ ಮುಖಂಡರ‌ ಅವಶ್ಯಕತೆ ಇಲ್ಲ. ನೇರವಾಗಿ ತಮ್ಮ ಕಚೇರಿಗೆ ಅಥವಾ ಮೊಬೈಲ್ ನಂಬರ್​ಗೆ ಕರೆ ಮಾಡಿ ಮಾತನಾಡಬಹುದು ಎಂದರು.

ಮಟ್ಕ, ಜೂಜಾಟ, ಗಾಂಜಾ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಅವಕಾಶವಿಲ್ಲ. ಅಕ್ರಮ ಚಟುವಟಿಕೆ ಬಗ್ಗೆ ದೂರು ಬರುವಂತಹ ಆಯಾ ಪೊಲೀಸ್ ಠಾಣೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಬೇರೆಯವರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಧಕ್ಕೆ ಬಂದರೆ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲು ಮಾಡಿಕೊಂಡು ಕ್ರಮ ಕೈಗೊಳ್ಳುತ್ತೇವೆ. ಜನರ ಮತ್ತು ಪೊಲೀಸ್ ಇಲಾಖೆ ಸಾಮರಸ್ಯ ಮೂಡಿಸಲು ತಿಂಗಳ ನಾಲ್ಕನೇ ವಾರದಲ್ಲಿ ಒಂದು ದಿನ ಜನಸಂಪರ್ಕ ಸಭೆ ಮಾಡಲಾಗುವುದು ಈ ಮೂಲಕ ಪೊಲೀಸ್ ಇಲಾಖೆ‌ ಜನ ಸ್ನೇಹಿಯಾಗಿ ಕೆಲಸ ಮಾಡುವುದಾಗಿ ಹೇಳಿದರು.

ಮೀಟರ್ ಬಡ್ಡಿಯವರ ಮೇಲೆ ನಿಗಾ ವಹಿಸಿ ಕಟ್ಟು‌ನಿಟ್ಟಿನ‌ ಕ್ರಮ ಕೈಗೊಳ್ಳಲು ಈಗಾಗಲೇ ಪ್ಲಾನ್ ಸಿದ್ಧವಿದೆ. ಇನ್ನು ಜಿಲ್ಲೆಯಲ್ಲಿ ಸಂಘ ಸಂಸ್ಥೆಗಳು ಪ್ರತಿಭಟನೆ ಮಾಡುವ ಮುನ್ನ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅನುಮತಿ ಕಡ್ಡಾಯ. ಮೊದಲು ಸಮಸ್ಯೆಯನ್ನು ಜಿಲ್ಲಾಡಳಿತ ಗಮನಕ್ಕೆ ತಂದು ನಂತರ ಪ್ರತಿಭಟನೆ ಮಾಡಬೇಕು. ವಿನಾಕಾರಣ ಪ್ರತಿಭಟನೆ ಮಾಡಿದರೆ ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಇನ್ನು‌ ಇದೇ ಜಿಲ್ಲೆಯವರು ಅನ್ನೋ ಕಾರಣಕ್ಕೆ ನಾನು ಯಾರಿಗೂ ಅನುಕೂಲ ಮಾಡಲು ಬಂದಿಲ್ಲ. ಬದಲಾಗಿ‌ ಕಾನೂನಿನ ಅಡಿಯಲ್ಲಿ ಕೆಲಸ ಮಾಡುವುದಾಗಿ ಬಂದಿದ್ದೇನೆ. ಇದೇ ವೇಳೆ ಜಿಲ್ಲೆಯ ಹೆಚ್ಚುವರಿ ಎಸ್ಪಿ ಸಚಿನ್ ಗೋರ್ಪಡೆ ಅವರೂ ಕೂಡಾ ಹೊಸದಾಗಿ ಜಿಲ್ಲೆಗೆ ಬಂದಿದ್ದು ಇಬ್ಬರೂ ಒಟ್ಟಾಗಿ ಕೆಲಸ ಮಾಡುವುದಾಗಿ ತಿಳಿಸಿದರು.

ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ

D Devaraj

ಕೋಲಾರ ಜಿಲ್ಲೆಯ ನೂತನ ಎಸ್ಪಿಯಾಗಿ ಡಿ.ದೇವರಾಜ್ ಅಧಿಕಾರ ಸ್ವೀಕಾರ

ಇದನ್ನೂ ಓದಿ: ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಮಾಯಾವತಿ ಸ್ಪರ್ಧಿಸುವುದಿಲ್ಲ; ಬಿಎಸ್​ಪಿ ಸಂಸದ ಮಾಹಿತಿ

Click on your DTH Provider to Add TV9 Kannada