ಮೈಲಾಂಡಹಳ್ಳಿ: ದಲಿತರಿಗೆ ದೇಗುಲ ಪ್ರವೇಶ ನಿಷೇಧ, ಆಕ್ರೋಶ

ದೀಪೋತ್ಸವ ಹಿನ್ನೆಲೆಯಲ್ಲಿ ದಲಿತರು ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಅವರನ್ನು ದೇಗುಲ ಪ್ರವೇಶಿಸದಂತೆ ಸವರ್ಣೀಯರು ತಡೆದಿದ್ದರು.

ಮೈಲಾಂಡಹಳ್ಳಿ: ದಲಿತರಿಗೆ ದೇಗುಲ ಪ್ರವೇಶ ನಿಷೇಧ, ಆಕ್ರೋಶ
ದೇಗುಲ ಪ್ರವೇಶ ನಿರಾಕರಿಸಿದ್ದನ್ನು ಮಾಲೂರು ತಾಲ್ಲೂಕು ಮೈಲಾಂಡಹಳ್ಳಿಯಲ್ಲಿ ದಲಿತರು ಪ್ರಶ್ನಿಸಿದರು.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 31, 2021 | 8:16 PM

ಕೋಲಾರ: ದೀಪೋತ್ಸವ ವೇಳೆ ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಮಾಲೂರು ತಾಲ್ಲೂಕಿನ ಮೈಲಾಂಡಹಳ್ಳಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಗ್ರಾಮದ ಚೌಡೇಶ್ವರಿ ದೇಗುಲಕ್ಕೆ ನಮಗೆ ಪ್ರವೇಶ ನೀಡಿಲ್ಲ ಎಂದು ಮೈಲಾಂಡಹಳ್ಳಿ ಗ್ರಾಮದ ದಲಿತರು ಬೇಸರ ವ್ಯಕ್ತಪಡಿಸಿದ್ದಾರೆ. ದೀಪೋತ್ಸವ ಹಿನ್ನೆಲೆಯಲ್ಲಿ ದಲಿತರು ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಅವರನ್ನು ದೇಗುಲ ಪ್ರವೇಶಿಸದಂತೆ ಸವರ್ಣೀಯರು ತಡೆದಿದ್ದರು.

ಇದೇ ವಿಚಾರವಾಗಿ ದೇಗುಲದ ಬಳಿ ದಲಿತರು ಮತ್ತು ಸವರ್ಣೀಯರ ನಡುವೆ ವಾಗ್ವಾದ ನಡೆದಿತ್ತು. ಗ್ರಾಮದ ಹಿರಿಯರ ಮಧ್ಯಪ್ರವೇಶದಿಂದ ಪರಿಸ್ಥಿತಿ ಹತೋಟಿಗೆ ಬಂತು. ನಂತರ ದೇವಸ್ಥಾನ ಪ್ರವೇಶಕ್ಕೆ ಮುಖಂಡರು ಅನುವು ಮಾಡಿಕೊಟ್ಟರು. ಸ್ಥಳಕ್ಕೆ ಮಾಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಅಲ್ಲಿದ್ದ ಕೆಲವರು ಇಂತಹ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ದೇವರು ಎಲ್ಲರಿಗೂ ಒಬ್ಬರೇ. ಇದರಲ್ಲಿ ನಿಷೇಧ ಯಾವುದಿಲ್ಲ ಎಂದು ದಲಿತರು ತಕರಾರು ತೆಗೆದಿದ್ದಾರೆ. ಆದರೆ ದೇವಸ್ಥಾನದೊಳಕ್ಕೆ ನಿಮಗೆ ಅವಕಾಶವಿಲ್ಲ ಎಂದು ಸವರ್ಣಿಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಎರಡು ಕಡೆ ಮಾತಿಗೆ ಮಾತು ಬೆಳೆದು ಗಲಾಟೆ ಕೂಡ ನಡೆದಿದೆ. ಗ್ರಾಮದ ಕೆಲವರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ನಂತರ ದೇವಾಲಯ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಅಸ್ಪೃಷ್ಯತೆ ಜೀವಂತ ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಣಿವೆ ಕೊಪ್ಪಲಿನಲ್ಲಿ ದಲಿತರಿಗೆ ಹೇರ್ ಕಟ್ ಮಾಡುವುದಕ್ಕೆ ನಿರಾಕರಿಸಲಾಗಿದೆ. ಗ್ರಾಮದ ಮುಖಂಡರು ಒಪ್ಪಲ್ಲವೆಂದು ನೆಪವೊಡ್ಡಿ ದಲಿತರಿಗೆ ಹೇರ್ ಕಟ್ ಮಾಡಲು ಕ್ಷೌರ ಅಂಗಡಿಯಾತ ಒಪ್ಪದ ಘಟನೆ ನಡೆದಿದೆ.

ಸ್ವಾತಂತ್ರ್ಯ ಬಂದು 75 ವರ್ಷವಾದರೂ ಅಸ್ಪೃಶ್ಯತೆ ಹೀಗಿಲ್ಲ. ಸಾಮಾನರಾಗಿ ಬಾಳಬೇಕೆಂದು ಸಂವಿಧಾನದಲ್ಲೇ ಹೇಳಲಾಗಿದೆ. ನೀನು ಜಾತಿ ನಿಂದನೆ ಮಾಡುತ್ತಿದ್ದೀಯಾ ಎಂದು ಇಂದಿಗೂ ಬಹಿರಂಗ ಅಸ್ಪೃಶ್ಯತೆ ಆಚರಣೆ ಬಗೆಗೆ ಪ್ರಶ್ನಿಸಿ ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದಾರೆ. ಈ ವೇಳೆ ಯಜಮಾನರ ತೀರ್ಮಾನ ನಾನೇನು ಮಾಡಲಿ ಎಂದು ಅಂಗಡಿಯಾತ ಸುಮ್ಮನಾಗಿದ್ದಾನೆ.

ಇದನ್ನೂ ಓದಿ: ಅಸ್ಪೃಶ್ಯತೆಯನ್ನು ತೊಲಗಿಸೋಣ ಎಂದು ಗ್ರಾಮಸ್ಥರ ಬಳಿ ಪ್ರತಿಜ್ಞೆ ಮಾಡಿಸಿದ ಕೊಪ್ಪಳ ಪೊಲೀಸರು ಇದನ್ನೂ ಓದಿ: ಅಸ್ಪೃಶ್ಯತೆಗೆ ಕಡಿವಾಣ ಹಾಕುವುದು ನಮ್ಮ ಗುರಿ: ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ

Published On - 8:15 pm, Sun, 31 October 21