ಏಷ್ಯಾದಲ್ಲೇ 2ನೇ ದೊಡ್ಡ ಮಾರುಕಟ್ಟೆಯಲ್ಲಿ Driving Seatನಲ್ಲಿ ಕುಳಿತಿದೆ ಕೊರೊನಾ!
ಕಳೆದ 8 ದಿನಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಒಟ್ಟು 11 ಕೊರೊನಾ ಸೋಂಕು ಪತ್ತೆಯಾಗಿವೆ. ಈ ಪೈಕಿ 7 ಜನರು ಡ್ರೈವರ್ ಗಳು ಅನ್ನೋದೆ ವಿಶೇಷ. ಇಲ್ಲಿನ ಎಪಿಎಂಸಿ ಮಾರುಕಟ್ಟೆಗಳಿಂದ ದೂರದ ಒಡಿಸಾ, ಪಕ್ಕದ ಚೆನ್ನೈ ಮಾರುಕಟ್ಟೆಗಳಿಗೆ ತರಕಾರಿ ಹಾಗೂ ಇತರ ವಸ್ತುಗಳನ್ನು ತೆಗೆದುಕೊಂಡು ಹೋದ ಡ್ರೈವರ್ ಮತ್ತು ಕ್ಲೀನರ್ಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಏಷ್ಯಾದಲ್ಲೇ ಎರಡನೇ ದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಗೆ ಹೊಂದಿರುವ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ದೇಶದ ಬಹುತೇಕ ಎಲ್ಲಾ ರಾಜ್ಯಗಳಿಂದಲೂ ವ್ಯಾಪಾರಸ್ಥರು ಬರ್ತಾರೆ. ಹಾಗಾಗಿಯೇ […]
ಕಳೆದ 8 ದಿನಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಒಟ್ಟು 11 ಕೊರೊನಾ ಸೋಂಕು ಪತ್ತೆಯಾಗಿವೆ. ಈ ಪೈಕಿ 7 ಜನರು ಡ್ರೈವರ್ ಗಳು ಅನ್ನೋದೆ ವಿಶೇಷ. ಇಲ್ಲಿನ ಎಪಿಎಂಸಿ ಮಾರುಕಟ್ಟೆಗಳಿಂದ ದೂರದ ಒಡಿಸಾ, ಪಕ್ಕದ ಚೆನ್ನೈ ಮಾರುಕಟ್ಟೆಗಳಿಗೆ ತರಕಾರಿ ಹಾಗೂ ಇತರ ವಸ್ತುಗಳನ್ನು ತೆಗೆದುಕೊಂಡು ಹೋದ ಡ್ರೈವರ್ ಮತ್ತು ಕ್ಲೀನರ್ಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಏಷ್ಯಾದಲ್ಲೇ ಎರಡನೇ ದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಗೆ ಹೊಂದಿರುವ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ದೇಶದ ಬಹುತೇಕ ಎಲ್ಲಾ ರಾಜ್ಯಗಳಿಂದಲೂ ವ್ಯಾಪಾರಸ್ಥರು ಬರ್ತಾರೆ. ಹಾಗಾಗಿಯೇ ಸದ್ಯ ಕೋಲಾರದ ಮಾರುಕಟ್ಟೆಯಿಂದ ಹೊರ ರಾಜ್ಯಗಳಿಗೆ ಹೋಗುವ ಡ್ರೈವರ್ಗಳು ಹೊರ ರಾಜ್ಯಗಳಿಗೆ ಹೋಗಲು ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಕೋಲಾರ ಎಪಿಎಂಸಿ ಮಾರುಕಟ್ಟೆಯಿಂದ ಹೆಚ್ಚಾಗಿ ಆಂಧ್ರ, ತಮಿಳುನಾಡು, ಕೇರಳ, ಒಡಿಸಾ ಸೇರಿದಂತೆ ಹಲವು ರಾಜ್ಯಗಳಿಗೆ ಟೊಮ್ಯಾಟೋ ಸೇರಿದಂತೆ ಅನೇಕ ತರಕಾರಿಗಳು ಸರಬರಾಜಾಗುತ್ತವೆ. ಆದ್ರೆ ಕೊರೊನಾ ಆತಂಕ ಶುರುವಾದಾಗಲಿಂದ ಭಯದಲ್ಲೇ ಹೊರ ರಾಜ್ಯಗಳಿಗೆ ಹೋಗಿ ಬರ್ತಿದ್ರು. ಇದೀಗ, ಕೋಲಾರಕ್ಕೆ ಕೊರೊನಾ ವಕ್ಕರಿಸಿದ್ದೇ ಜನರು ಮನೆಯಿಂದ ಹೊರಗೆ ಬರೋದಕ್ಕೆ ಭಯ ಪಡುತ್ತಿದ್ದಾರೆ. ಹೀಗಿರುವಾಗ ಹೊರ ರಾಜ್ಯಗಳಿಗೆ ಹೋಗಿ ಬರೋದು ಅಷ್ಟು ಸುಲಭದ ಮಾತಲ್ಲ.
ಅದಕ್ಕೆ ಪೂರಕ ಎಂಬಂತೆ ಕೋಲಾರ ಜಿಲ್ಲೆಯಲ್ಲಿ ಈವರಗೆ ಪತ್ತೆಯಾಗಿರುವ ಕೊರೊನಾ ಸೋಂಕಿತರ ಪೈಕಿ ಆರು ಜನ ಹೊರ ರಾಜ್ಯದ ಮಾರುಕಟ್ಟೆಗೆ ಹೋಗಿಬಂದಿರುವ ಡ್ರೈವರ್ಗಳು ಅನ್ನೋದು ಗಮನಾರ್ಹ! ಹಾಗಾಗಿಯೇ ಸದ್ಯ ಕೋಲಾರದ ಎಪಿಎಂಸಿ ಮಾರುಕಟ್ಟೆಗಳಲ್ಲಿ ಡ್ರೈವರ್ಗಳು ಹೊರ ರಾಜ್ಯಗಳಿಗೆ ಹೋಗೋದಕ್ಕೆ ಹೆದರುತ್ತಿದ್ದಾರೆ. ಕೆಲಸ ಬೇಕಾದರೂ ಬಿಡ್ತೇವೆ, ಹೊರ ರಾಜ್ಯಗಳಿಗೆ ಹೋಗೋದಿಲ್ಲ ಅನ್ನೋ ಮಾತುಗಳನ್ನಾಡುತ್ತಿದ್ದಾರೆ ಅನ್ನೋ ಮಾತು ವ್ಯಾಪಾರಸ್ಥರದ್ದು.
ಮಾರುಕಟ್ಟೆಯಲ್ಲಿ ಯಾರಿಂದ ಹೇಗೆ ಕೊರೊನಾ ವಕ್ಕರಿಸುತ್ತೋ? ಅಂತಾ ಮನೆಯಲ್ಲಿ ಕೆಲಸಕ್ಕೆ ಹೋಗ್ಬೇಡ ಅಂತಿದ್ದಾರಂತೆ. ಮನೆಗಳಲ್ಲಿ ಡ್ರೈವರ್ಗಳ ಕುಟುಂಬಸ್ಥರು ಆತಂಕದಿಂದ ಕೆಲಸಕ್ಕೆ ಕಳಿಸುವಂತಾಗಿದೆ. ಇನ್ನು ನಮ್ಮ ಮಾರುಕಟ್ಟೆಗಳಿಗೆ ಬರೋವಾಗಲೇ ಭಯದಿಂದ ಬರುತ್ತೇವೆ. ಹೀಗಿರುವಾಗ ಹೊರ ರಾಜ್ಯಗಳಿಗೆ ಹೇಗೆ ಹೋಗೋದು ಅನ್ನೋದು ಡ್ರೈವರ್ಗಳ ಅಳಲು.
ಇನ್ನು ಯಾವಾಗ ಹೆಚ್ಚಾಗಿ ವ್ಯಾಪಾರಸ್ಥರು ಮತ್ತು ಡ್ರೈವರ್ಗಳಲ್ಲಿ ಕೊರೊನಾ ಸೋಂಕು ಪತ್ತೆಯಾಯಿತೋ, ತಕ್ಷಣ ಎಚ್ಚೆತ್ತುಕೊಂಡಿರುವ ಎಪಿಎಂಸಿ ಮಾರುಕಟ್ಟೆ ಸಮಿತಿಯು ಮಾರುಕಟ್ಟೆಗಳಿಗೆ ಬರುವ ಲಾರಿಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಕಡ್ಡಾಯ ಮಾಡಿದೆ. ಜೊತೆಗೆ ಹೊರ ರಾಜ್ಯಗಳಿಂದ ಬರುವ ಲಾರಿಗಳ ಡ್ರೈವರ್ ಮತ್ತು ಕ್ಲೀನರ್ಗಳ ಸ್ಕ್ರೀನಿಂಗ್ ಮಾಡೋದು. ಜೊತೆಗೆ ಹೊರ ರಾಜ್ಯಕ್ಕೆ ಹೋಗಿ ಬರುವವರ ಮಾಹಿತಿ ಮತ್ತು ಹೊರ ರಾಜ್ಯಗಳಿಂದ ಬರುವ ಡ್ರೈವರ್ ಮತ್ತು ಕ್ಲೀನರ್ಗಳಲ್ಲಿ ನಗರದಲ್ಲಿ ಎಲ್ಲೂ ಓಡಾಡದಂತೆ ಅವರಿಗೆ ಬೇಕಾದ ಊಟ ತಿಂಡಿ ವ್ಯವಸ್ಥೆಯನ್ನ ವ್ಯಾಪಾರಸ್ಥರೇ ಮಾಡುವಂತೆ ಸೂಚಿಸಿದೆ. ಅಷ್ಟೇ ಅಲ್ಲದೆ ರಾಜ್ಯದ ಗಡಿಯಲ್ಲೂ ಅವರಿಗೆ ಸ್ಕೀನಿಂಗ್ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಒಟ್ಟಾರೆ ಹಲವು ದಿನಗಳಿಂದ ಕೋಲಾರಕ್ಕೆ ವಕ್ಕರಿಸೋಕ್ಕೆ ಹೊಂಚುಹಾಕಿದ್ದ ಕೊರೊನಾ ಸದ್ಯ ಮಾರುಕಟ್ಟೆಗಳ ಡ್ರೈವರ್ಗಳ ಮೂಲಕ ವಕ್ಕರಿಸಿರೋದು ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಡ್ರೈವರ್ಗಳಲ್ಲಿ ಆತಂಕ ಶುರುವಾಗಿದೆ. ಸದ್ಯ ಹೊರ ರಾಜ್ಯಕ್ಕೆ ಹೋಗಿ ಬರೋದಕ್ಕೆ ಸರ್ಕಾರ ಅನುಮತಿ ಕೊಟ್ಟರೂ, ಜಿಲ್ಲಾಡಳಿತ ಪಾಸ್ ಕೊಟ್ಟರೂ, ನಮಗೆ ಹೋಗಿ ಬರೋದಕ್ಕೆ ಧೈರ್ಯ ಸಾಲುತ್ತಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಅನ್ನುತ್ತಾರೆ ಚಾಲಕರ ವೃಂದ.
Published On - 6:15 pm, Thu, 21 May 20