ಕೋಲಾರದಲ್ಲಿ ನಷ್ಟ ಅನುಭವಿಸಿದ್ದ ರೈತನ ಕೈ ಹಿಡಿದ ಬೆಳೆ; ನಿರೀಕ್ಷೆಗೂ ಮೀರಿ ಲಾಭ ಪಡೆದು ಹಸನಾದ ಬದುಕು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 17, 2022 | 10:39 AM

ಹಲವು ವರ್ಷದಿಂದ ಟೊಮ್ಯೊಟೊ, ತರಕಾರಿ ಬೆಳೆದು ನಾರಾಯಣ ಸ್ವಾಮಿ ನಷ್ಟ ಅನುಭವಿಸಿದ್ರು. ಹೀಗಾಗಿ, ಅನೇಕ ಕಡೆ ಸುತ್ತಾಡಿ ಕೊನೆಗೆ ಕೋಲ್ಕತ್ತಾದಲ್ಲಿ ಸಿಕ್ಕ ತೈವಾನ್ ಗೋಲ್ಡ್ ಎಂಬ ತಳಿಯ ಲೈಟ್ ಪಿಂಕ್ ಸೀಬೆಯನ್ನು ತಂದು ಬೆಳೆದಿದ್ದಾರೆ. 3 ವರ್ಷದ ಹಿಂದೆ ಬೆಳೆದ ಬೆಳೆಗೆ, ನಿರೀಕ್ಷೆಗೂ ಮೀರಿ ಲಾಭ ಬರ್ತಿದೆ.

ಕೋಲಾರದಲ್ಲಿ ನಷ್ಟ ಅನುಭವಿಸಿದ್ದ ರೈತನ ಕೈ ಹಿಡಿದ ಬೆಳೆ; ನಿರೀಕ್ಷೆಗೂ ಮೀರಿ ಲಾಭ ಪಡೆದು ಹಸನಾದ ಬದುಕು
ಸೀಬೆ
Follow us on

ಕೋಲಾರ: ಈ ಜಿಲ್ಲೆಯ ಬಹುತೇಕ ರೈತರು, ತರಕಾರಿ, ಹಣ್ಣು ಬೆಳೆಯುತ್ತಾರೆ. ಆದ್ರೆ, ಲಾಭಕ್ಕಿಂತ ಅವರು ನಷ್ಟ ಅನುಭವಿಸಿದ್ದೇ ಹೆಚ್ಚು. ಆದ್ರೆ ಅದೃಷ್ಟ ಎನ್ನುವಂತೆ ಅದೊಬ್ಬ ರೈತನಿಗೆ ಜಾಕ್ಪಾಟ್ ಹೊಡೆದಿದೆ. ಸೀಬೆ ಹಣ್ಣು ಬೆಳೆದು, ಬದುಕೇ ಬಂಗಾರವಾಗಿದೆ. ಕೋಲಾರ ತಾಲ್ಲೂಕು ಚದುಮನಹಳ್ಳಿಯಲ್ಲಿ ಗ್ರಾಮದ ನಾರಾಯಣಸ್ವಾಮಿ ಅವರ ತೋಟದಲ್ಲಿ ಬೃಹತ್ ಗಾತ್ರದ ಸೀಬೆ ಹಣ್ಣಿನ ತೋಟ ಅರಳಿದೆ.

ಹಲವು ವರ್ಷದಿಂದ ಟೊಮ್ಯೊಟೊ, ತರಕಾರಿ ಬೆಳೆದು ನಾರಾಯಣ ಸ್ವಾಮಿ ನಷ್ಟ ಅನುಭವಿಸಿದ್ರು. ಹೀಗಾಗಿ, ಅನೇಕ ಕಡೆ ಸುತ್ತಾಡಿ ಕೊನೆಗೆ ಕೋಲ್ಕತ್ತಾದಲ್ಲಿ ಸಿಕ್ಕ ತೈವಾನ್ ಗೋಲ್ಡ್ ಎಂಬ ತಳಿಯ ಲೈಟ್ ಪಿಂಕ್ ಸೀಬೆಯನ್ನು ತಂದು ಬೆಳೆದಿದ್ದಾರೆ. 3 ವರ್ಷದ ಹಿಂದೆ ಬೆಳೆದ ಬೆಳೆಗೆ, ನಿರೀಕ್ಷೆಗೂ ಮೀರಿ ಲಾಭ ಬರ್ತಿದೆ. ಹೀಗಾಗಿ, 3 ಎಕರೆಯಿಂದ ಹತ್ತು ಎಕರೆಗೆ ಸೀಬೆ ತೋಟ ವಿಸ್ತರಿಸಿದ್ದಾರೆ. ಎಕರೆಗೆ ವರ್ಷಕ್ಕೆ ಕನಿಷ್ಠ ಇಪ್ಪತ್ತರಿಂದ ಇಪ್ಪತ್ತೈದು ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ.

ನಾರಾಯಣಸ್ವಾಮಿ ಅವ್ರು ಒಂದು ಎಕರೆಗೆ 800 ಸೀಬೆ ಗಿಡಗಳನ್ನು ಬೆಳೆದಿದ್ದಾರೆ. ಇದಕ್ಕೆ ಕನಿಷ್ಟ ಒಂದೂವರೆ ಲಕ್ಷ ಖರ್ಚು ಬರುತ್ತೆ. ನಾಟಿ ಮಾಡಿದ ಏಳು ತಿಂಗಳು ಗಿಡವನ್ನ ಚೆನ್ನಾಗಿ ನೋಡ್ಕೊಂಡೆ ಆ ನಂತರ 15 ವರ್ಷ ಫಲ ಸಿಗುತ್ತೆ. ಒಂದು ಹಣ್ಣು 500 ರಿಂದ 800 ಗ್ರಾಮ್ ತೂಕವಿದ್ದು, ಪ್ರತಿ ತಿಂಗಳು 40 ಟನ್ ಸೀಬೆ ಬರುತ್ತಿದೆ. ತೈವಾನ್ ಗೋಲ್ಡ್ ತಳಿಗೆ ಮಾರ್ಕೆಟ್ನಲ್ಲಿ ಡಿಮ್ಯಾಂಡ್ ಇದ್ದು, ಕೆಜಿ ಸೀಬೆ ಹಣ್ಣಿಗೆ 70 ರೂಪಾಯಿ ರೇಟಿದೆ. ಬಿಗ್ ಬ್ಯಾಸ್ಕೇಟ್, ರಿಲಯನ್ಸ್, ಮೋರ್, ಸೇರಿದಂತೆ ದೊಡ್ಡ ದೊಡ್ಡ ಕಂಪನಿಗಳೇ ಇವರ ತೋಟಕ್ಕೆ ಬಂದು ಖರೀದಿ ಮಾಡ್ತಾರಂತೆ. ಸುತ್ತಲಿನ ರೈತರಿಗೂ ಇದು ಮಾದರಿಯಾಗಿದೆ. ಸೀಬೆಹಣ್ಣು, ಬಡವರ ಸೇಬು ಅನ್ನೋ ಮಾತಿದೆ. ಉತ್ತಮ ಕೊಬ್ಬಿನಾಂಶ, ಹಲವು ವಿಟಮಿನ್ಸ್ಗಳನ್ನು ಹೊಂದಿರುವ ಸೀಬೆ ನಿಜಕ್ಕೂ ಆರೋಗ್ಯದ ದೃಷ್ಟಿಯಿಂದಲೂ ಕೂಡಾ ಉಪಯುಕ್ತ. ಇದೀಗ, ತೈವಾನ್ ಗೋಲ್ಡ್ ತಳಿ ಬೆಳೆದು ರೈತನ ಬದುಕು ಕೂಡ ಬಂಗಾರವಾಗಿದೆ.

ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ

ಸೀಬೆ ಹಣ್ಣಿನ ತೋಟ

ರೈತ ನಾರಾಯಣಸ್ವಾಮಿ

ಇದನ್ನೂ ಓದಿ: ಚಿತ್ರಮಂದಿರಗಳ ಎದುರು ತಲೆ ಎತ್ತಿದ ಪುನೀತ್ ಕಟೌಟ್​; ಇಲ್ಲಿದೆ ವಿಡಿಯೋ

ಚಿಕ್ಕಮಗಳೂರು ಪಿಡಬ್ಲ್ಯುಡಿ ಎಇಇ ಗವಿ ರಂಗಪ್ಪನ ಮನೆಯಲ್ಲಿ ಎಸಿಬಿ ಅಧಿಕಾರಿಗಳಿಗೆ ಮುಕ್ಕಾಲು ಕೆಜೆ ತೂಕದ ಚಿನ್ನದ ಗಟ್ಟಿ ಸಿಕ್ಕಿತು!

Published On - 9:51 pm, Wed, 16 March 22