AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಸ್ಥಿತಿಯಲ್ಲಿದ್ದ ಶಾಲಾ ಕಟ್ಟಡಕ್ಕೆ ಮೆರುಗು; ಹಳೆ ವಿದ್ಯಾರ್ಥಿಯಿಂದ ಕಲರ್​ ಪುಲ್​ ಆಯ್ತು ಸರ್ಕಾರಿ ಶಾಲೆ..!

ಇದೇ ಚಿಕ್ಕಅಂಕಂಡಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿದ್ದ ಹರೀಶ್​ ಎಂಬಾತ, ಚಿಕ್ಕಅಂಕಂಡಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷನಾಗಿದ್ದು, ಪಂಚಾಯ್ತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದುಸ್ಥಿತಿಯಲ್ಲಿದ್ದ ಶಾಲೆಯನ್ನು ಸರಿಪಡಿಸಿ ನಂತರ, ತನ್ನ ವೈಯಕ್ತಿಕ ಹಣದಿಂದ ಶಾಲೆಗೆ ಸುಣ್ಣಬಣ್ಣ ಮಾಡಿ ಮಕ್ಕಳಿಗೆ ಆಕರ್ಷಕವಾಗಿ ಕಂಡು ಬರುವ ರೀತಿಯಲ್ಲಿ ಅಭಿವೃದ್ದಿ ಪಡಿಸಿದ್ದಾರೆ.

ದುಸ್ಥಿತಿಯಲ್ಲಿದ್ದ ಶಾಲಾ ಕಟ್ಟಡಕ್ಕೆ ಮೆರುಗು; ಹಳೆ ವಿದ್ಯಾರ್ಥಿಯಿಂದ ಕಲರ್​ ಪುಲ್​ ಆಯ್ತು ಸರ್ಕಾರಿ ಶಾಲೆ..!
ಮಕ್ಕಳೊಂದಿಗೆ ಹಳೆ ವಿದ್ಯಾರ್ಥಿ ಹರೀಶ್​,
TV9 Web
| Edited By: |

Updated on: Apr 16, 2022 | 8:12 PM

Share

ಕೋಲಾರ: ಅದು ಶಿಥಿಲಾವಸ್ಥೆ ತಲುಪಿದ್ದ ಸರ್ಕಾರಿ ಶಾಲೆ (Government School) ಶಾಲೆಯ ದುಸ್ಥಿತಿ ಕಂಡು ಮಕ್ಕಳು ಶಾಲೆಗೆ ಬರುವುದಿರಲಿ ಪೊಷಕರು ಕೂಡಾ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದು ಮುಂದು ನೋಡುವಂತಾಗಿತ್ತು. ಇಂಥ ಪರಿಸ್ಥಿತಿ ತಲುಪಿದ್ದ ಶಾಲೆ, ತನ್ನ ದುಸ್ಥಿತಿಯನ್ನು ತಾನೇ ಸರಿಪಡಿಸಿಕೊಂಡು ಸುಸ್ಥಿತಿಗೆ ತಲುಪಿದೆ, ಅಲ್ಲದೆ ನೋಡುವವರ ಕಣ್ಣು ಕುಕ್ಕುವ ರೀತಿಯಲ್ಲಿ ಜಗಮಗಿಸುತ್ತಿದೆ. ತಾನು ಓದಿದ್ದ ಸರ್ಕಾರಿ ಶಾಲೆಗೆ ಹಳೆಯ ವಿದ್ಯಾರ್ಥಿಯಿಂದ ಕಾಯಕಲ್ಪ ದೊರೆತಿದೆ. ಕಲರ್​ ಪುಲ್​ ಆಗಿ ಮಿನುಗುತ್ತಿರುವ ಸರ್ಕಾರಿ ಶಾಲಾ ಕಟ್ಟಡ, ಬುಲೆಟ್​ ಟ್ರೈನ್​ ರೀತಿಯಲ್ಲಿ ವಿಭಿನ್ನವಾಗಿ ಕಂಡು ಬರುತ್ತಿರುವ ಶಾಲೆ, ಶಾಲೆಯಲ್ಲಿ ಮಕ್ಕಳ ಕಲರವ ಇಂಥಾದೊಂದು ದೃಷ್ಯಗಳು ಕಂಡು ಬರೋದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಚಿಕ್ಕಅಂಕಂಡಹಳ್ಳಿ ಗ್ರಾಮದಲ್ಲಿ. ಹೌದು ಈಗ್ರಾಮದಲ್ಲಿ ಒಂದರಿಂದ ಐದನೇ ತರಗತಿವರೆಗೆ ಅಂದರೆ ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ಈ ಶಾಲೆ ಹಲವು ವರ್ಷಗಳಿಂದ ಸರಿಯಾದ ನಿರ್ವಹಣೆ ಇಲ್ಲದೆ ದುಸ್ಥಿತಿಗೆ ತಲುಪಿತ್ತು. ಇಂಥ ಪರಸ್ಥಿತಿಯಲ್ಲಿದ್ದ ಶಾಲೆಯ ಸ್ಥಿತಿಯನ್ನು ಕಂಡ ಇದೇ ಶಾಲೆಯ ಹಳೆಯ ವಿದ್ಯಾರ್ಥಿ ತನ್ನ ಜವಾಬ್ದಾರಿ, ಕಾಳಜಿ ಹಾಗೂ ವೈಯಕ್ತಿಕ ಹಣದಿಂದ ಇಂದು ಶಾಲೆಯನ್ನು ಜಗಮಗಿಸುವಂತೆ ಮಾಡಿದ್ದಾನೆ.

ಗ್ರಾಮ ಪಂಚಾಯ್ತಿ ಅಧ್ಯಕ್ಷನಾದ ಮೇಲೆ ಆಧ್ಯತೆ ಮೇರೆಗೆ ಮಾಡಿದ ಕೆಲಸ..! ಇದೇ ಚಿಕ್ಕಅಂಕಂಡಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿದ್ದ ಹರೀಶ್​ ಎಂಬಾತ, ಚಿಕ್ಕಅಂಕಂಡಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷನಾಗಿದ್ದು, ಪಂಚಾಯ್ತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದುಸ್ಥಿತಿಯಲ್ಲಿದ್ದ ಶಾಲೆಯನ್ನು ಸರಿಪಡಿಸಿ ನಂತರ, ತನ್ನ ವೈಯಕ್ತಿಕ ಹಣದಿಂದ ಶಾಲೆಗೆ ಸುಣ್ಣಬಣ್ಣ ಮಾಡಿ ಮಕ್ಕಳಿಗೆ ಆಕರ್ಷಕವಾಗಿ ಕಂಡು ಬರುವ ರೀತಿಯಲ್ಲಿ ಅಭಿವೃದ್ದಿ ಪಡಿಸಿದ್ದಾರೆ. ಈ ಮೂಲಕ ನಮ್ಮೂರಿನ ಶಾಲೆಯ ಪರಿಸ್ಥಿತಿ ಸರಿಹೋದ ಮೇಲೆ ಈಗ ನಮ್ಮೂರಿನ ಶಾಲೆಯಿಂದ ಶಾಲೆಯೇ ಬೇಡ ಎಂದು ಶಾಲೆ ತೊರೆದು ಹೋಗಿದ್ದ ಮಕ್ಕಳು ಈಗ ಮತ್ತೆ ಶಾಲೆಗೆ ಬಂದು ದಾಖಲಾಗುತ್ತಿದ್ದಾರೆ ಎಂದು ಹರೀಶ್​ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ಹೊರಗಿನಿಂದ ನೋಡಿದರೆ ಬುಲೆಟ್​ ಟ್ರೈನ್​ ಮಕ್ಕಳಿಗೆ ಖುಷಿಯೋ ಖುಷಿ..! ಚಿಕ್ಕಅಂಕಂಡಹಳ್ಳಿ ಸರ್ಕಾರಿ ಶಾಲೆ ಮೊದಲು ಮಳೆ ಬಂದರೆ ಸೋರುವ ಸ್ಥಿತಿ ಇತ್ತು, ಆದರೆ ಈಗ ಅದರ ಸ್ಥಿತಿಯೇ ಬದಲಾಗಿ ಹೋಗಿದೆ, ಹೊರಗಿನಿಂದ ನೋಡಿದರೆ ಬುಲೆಟ್​ ಟ್ರೈನ್​ ರೀತಿಯಲ್ಲಿ ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸಲಾಗಿದೆ, ಶಾಲೆಯ ಹೊರ ನೋಟ ಬುಲೆಟ್ ಟ್ರೈನ್​ ರೀತಿ ಕಂಡು ಬಂದರೆ, ಓಳಗೆ ಮಕ್ಕಳ ಕಲಿಕೆಗೆ ಅನುಕೂಲವಾಗುವ ರೀತಿಯಲ್ಲಿ, ನಮ್ಮ ನಾಡು ನುಡಿ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಕಲೆಯನ್ನು ಬಿಡಿಸಲಾಗಿದ್ದು ಶಾಲೆಗೆ ಬರುವ ಮಕ್ಕಳಿಗೆ ಇದೊಂದು ಹೊಸ ಅನುಭವ ನೀಡುತ್ತಿದೆ ಹಾಗಾಗಿ ಶಾಲೆಗೆ ಬರುವ ಮಕ್ಕಳು ಸಂತೋಷದಿಂದ ಶಾಲೆಗೆ ಬಂದು ಕಲಿಯುತ್ತಿದ್ದಾರೆ, ಅಲ್ಲದೆ ಶಾಲೆ ಸರಿ ಇಲ್ಲ ಎಂದು ಶಾಲೆ ತೊರೆದು ಹೋಗಿದ್ದ ಮಕ್ಕಳು ಈಗ ಮತ್ತೆ ಇದೇ ಶಾಲೆಗೆ ಬಂದು ದಾಖಲುಗುತ್ತಿದ್ದಾರೆ ಸುಣ್ಣ ಬಣ್ಣ ಮಾಡಿದ ಮೇಲೆ ಶಾಲೆಗೆ ಬರುವುದಕ್ಕೆ ಖುಷಿಯಾಗುತ್ತೆ ಎನ್ನುತ್ತಾಳೆ ಈ ಶಾಲಾ ವಿದ್ಯಾರ್ಥಿನಿ ವೈಷ್ಣವಿ..

ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಕ್ಕರೆ ಖಾಸಗಿ ಶಾಲೆಗಳ ಸುಲಿಗೆಗೆ ಕಡಿವಾಣ..! ನಮ್ಮೂರು ನಮ್ಮ ಶಾಲೆ ಅನ್ನೋ ಮೂಲಕ ಪ್ರತಿಯೊಬ್ಬ ಅನುಕೂಲವಂತರು ತಮ್ಮೂರಿನ ವಿದ್ಯಾಕೇಂದ್ರಗಳನ್ನು ಅಭಿವೃದ್ದಿ ಪಡಿಸಿದ್ದೇ ಆದರೆ ನಿಜಕ್ಕೂ ಶಾಲೆಯಿಂದ ದೂರ ಉಳಿಯುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. ಎಲ್ಲದಕ್ಕಿಂತ ಪ್ರಮುಖವಾಗಿ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲೇ ಸಿಗುವಂತಾದರೆ ಸಾಮಾನ್ಯ ಜನರನ್ನು ಶಿಕ್ಷಣದ ಹೆಸರಲ್ಲಿ ಸುಲಿಗೆ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳ ಸುಲಿಗೆ ಆಟಕ್ಕೂ ಕಡಿವಾಣ ಬೀಳೋದ್ರಲ್ಲಿ ಅನುಮಾನವಿಲ್ಲ.

ವರದಿ : ರಾಜೇಂದ್ರ ಸಿಂಹ

ಇದನ್ನೂ ಓದಿ:

Zomato: ಗಿಗ್ಸ್​ ರದ್ದು ಪಡಿಸಲು ಆಗ್ರಹಿಸಿ ಬೆಂಗಳೂರಿನಲ್ಲಿ ಜೊಮ್ಯಾಟೋ ಡೆಲಿವರಿ ಬಾಯ್ಸ್​ ಪ್ರತಿಭಟನೆ

450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​