12 ವರ್ಷದ ಬಾಲಕ ಅಚಿಂತನಿಗೆ ಅಗಾಧ ನೆನಪಿನ ಶಕ್ತಿ! ತನ್ನ ಬುದ್ದಿವಂತಿಕೆಯಿಂದ ವಿಶ್ವದ ಗಮನ ಸೆಳೆಯುತ್ತಿದ್ದಾನೆ

| Updated By: ಸಾಧು ಶ್ರೀನಾಥ್​

Updated on: Dec 13, 2023 | 4:41 PM

ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು ಎಂಬಂತೆ 12 ವಯಸ್ಸಿನ ಅಚಿಂತ್ ಇವತ್ತು ವಿಶ್ವದ ಗಮನ ಸೆಳೆದಿದ್ದಾನೆ. ಸಾಮಾಜಿಕ ಜಾಲತಾಣಗಳನ್ನು ಕೇವಲ ಮನರಂಜನೆ ಹಾಗೂ ಕೆಟ್ಟದಕ್ಕೆ ಬಳಸಿಕೊಳ್ಳುವ ಬದಲು ಈ ರೀತಿ ವಿಶ್ವ ದಾಖಲೆಗೂ ಬಳಸಿಕೊಳ್ಳಬಹುದು ಅನ್ನೋದನ್ನು ಅಚಿಂತ್ ತೋರಿಸಿಕೊಟ್ಟು ಮಾದರಿಯಾಗಿದ್ದಾನೆ.

12 ವರ್ಷದ ಬಾಲಕ ಅಚಿಂತನಿಗೆ ಅಗಾಧ ನೆನಪಿನ ಶಕ್ತಿ! ತನ್ನ ಬುದ್ದಿವಂತಿಕೆಯಿಂದ ವಿಶ್ವದ ಗಮನ ಸೆಳೆಯುತ್ತಿದ್ದಾನೆ
12 ವರ್ಷದ ಬಾಲಕ ಅಚಿಂತನಿಗೆ ಅಗಾಧ ನೆನಪಿನ ಶಕ್ತಿ!
Follow us on

ಜಾಗತಿಕ ಮಟ್ಟದಲ್ಲಿ ಭಾರತೀಯರ ಬುದ್ಧಿವಂತಿಕೆ ಬಗ್ಗೆ ಅಗಾಗ ಸಾಬೀತಾಗುತ್ತಲೇ ಇದೆ. ಪ್ರತಿ ಕ್ಷೇತ್ರದಲ್ಲೂ ಒಂದಿಲ್ಲೊಂದು ಸಾಧನೆ ಮಾಡುತ್ತಾ ಭಾರತದ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ, ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ಕೋಲಾರ ಮೂಲದ 12 ವರ್ಷ ವಯಸ್ಸಿನ ಬಾಲಕ ತನ್ನ ಬುದ್ದಿವಂತಿಯಿಂದ ವಿಶ್ವದ ಗಮನ ಸೆಳೆದಿದ್ದಾನೆ. ಆ ಹುಡುಗನ ಸಾಧನೆ ಏನು ಇಲ್ಲಿದೆ ಒಂದು ವರದಿ..

ಒಂದೆಡೆ ಹತ್ತಾರು ಪ್ರಶಸ್ತಿಗಳನ್ನು ಪ್ರದರ್ಶಿಸುತ್ತಿರುವ ಬಾಲಕ, ಮತ್ತೊಂದು ಕಡೆ ವಿವಿಧ 23 ದೇಶಗಳ ಮುಂದೆ ಭಾರತದ ಬಾವುಟ ಹಾರಿಸುತ್ತಿರುವ ಬಾಲಕ. ಬಾಲಕನ ಸಾಧನೆಯನ್ನು ಕಂಡು ಸಂತೋಷ ಪಡುತ್ತಿರುವ ಪೊಷಕರು, ಹೀಗೆ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳನ್ನು,ಮೆಡಲ್ ಗಳನ್ನ ಬಾಚಿಕೊಂಡು ಬಂದಿರುವ 12 ವರ್ಷ ವಯಸ್ಸಿನ ಈ ಪುಟ್ಟ ಬಾಲಕನ ಹೆಸರು ಅಚಿಂತ್. ಕೋಲಾರ ನಗರದ ದೊಡ್ಡಪೇಟೆ ನಿವಾಸಿ ಡಾ.ಹರ್ಷಿತಾ ಹಾಗೂ ಅಮಿತ್ ದಂಪತಿಯ ಪುತ್ರನಾಗಿರುವ ಅಚಿಂತ್ ಹುಟ್ಟುನಿಂದಲು ಗ್ರಹಿಕೆ ಮಾಡೋದ್ರಲ್ಲಿ, ನೆನೆಪಿನ ಶಕ್ತಿಯಲ್ಲಿ ನಿಪುಣ.

7ನೇ ತರಗತಿ ಓದುತ್ತಿರುವ ಅಚಿಂತ್ ಶಾಲೆಯಲ್ಲೂ ಫಸ್ಟ್, ಜಾಗತಿಕ ಮಟ್ಟದಲ್ಲಿ ಭಾರತೀಯರ ಬುದ್ಧಿವಂತಿಕೆ ಬಗ್ಗೆ ಸಾಬೀತಾಗುತ್ತಿದೆ. ಅದರಂತೆ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿರುವ ಅಚಿಂತ್ ಇದೀಗ ಇಡೀ ವಿಶ್ವದ ಗಮನ ಸೆಳೆಯುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾನೆ. ಹೌದು ವರ್ಲ್ಡ್ ಮೆಮೊರಿ ಚಾಂಪಿಯನ್ ಶಿಪ್‌ ಸ್ಪರ್ಧೆಯಲ್ಲಿ ಕೋಲಾರ ಮೂಲದ ಬಾಲಕ ಅಚಿಂತ್ ವಿವಿಧ 23 ದೇಶಗಳು, 750 ಸ್ಪರ್ಧಿಗಳ ಎದುರು ಭಾಗವಹಿಸಿ ಹಲವು ಪದಕಗಳ ಜೊತೆಗೆ ಅಂತಾರಾಷ್ಟ್ರೀಯ ನೆನಪಿನ ಶಕ್ತಿಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ ಈ ಮೂಲಕ ಬೇರೆ ದೇಶಗಳ ಮುಂದೆ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾನೆ.

ನವೆಂಬರ್ ತಿಂಗಳ 24, 25 ಮತ್ತು 26 ರಂದು ಪ್ರಥಮ ಬಾರಿಗೆ ಮುಂಬೈನ ಸಿಐಡಿಇಒ ಎಕ್ಸಿಬಿಷನ್ ಸೆಂಟರ್‌ನಲ್ಲಿ ನಡೆದ ವರ್ಲ್ಡ್ ಮೆಮೊರಿ ಚಾಂಪಿಯನ್ ಶಿಪ್‌ನಲ್ಲಿ ಅಚಿಂತ್ ಭಾಗವಹಿಸಿದ್ದು,10 ಪದಕಗಳನ್ನು ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ. ವರ್ಲ್ಡ್ ಮೆಮೊರಿ ಚಾಂಪಿಯನ್ ಶಿಪ್‌ ಸ್ಪರ್ಧೆಯಲ್ಲಿ ಅಚಿಂತ್ 1 ಚಿನ್ನದ ಪದಕ, 5 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಒಟ್ಟಾರೆ ಚಾಂಪಿಯನ್ ಶಿಪ್ ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾನೆ.

ಇದನ್ನೂ ಓದಿ: ಶಾಲೆಗೇ ಫುಲ್ ಮಾರ್ಕ್ಸ್​! ಕುಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಟ-ಪಾಠ-ಊಟ ಹೈಟೆಕ್

3 ದಿನಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ ನೆನಪಿನ ಶಕ್ತಿಯ ಆಧಾರದ ಮೇಲೆ ನಂಬರ್​, ಬೈನರಿ, ಸ್ಪೀಡ್‌ಕಾರ್ಡ್ಸ್, ಸ್ಪೋಕನ್ ನಂಬರ್ಸ್, ನೇಮ್ಸ್ ಅಂಡ್ ಫೇಸಸ್, ಹಿಸ್ಟಾರಿಕಲ್ ಡೇಟ್ಸ್, ಐಪಿಸಿ ಸೆಕ್ಷನ್ಸ್ ಸ್ಪರ್ಧೆಗಳು ಸೇರಿದಂತೆ 10 ವಿವಿಧ ಸುತ್ತುಗಳನ್ನು ಒಳಗೊಂಡು ಆಡಿಸಲಾಗಿತ್ತು. ಇದರಲ್ಲಿ ಕೆಲವೇ ಸೆಕೆಂಡ್ ಗಳಲ್ಲಿ ಕ್ಲಿಯರ್ ಮಾಡುವ ಮೂಲಕ ಅಚಿಂತ್ ಎಲ್ಲರ ಗಮನ ಸೆಳೆದಿದ್ದಾನೆ. ವಿಶೇಷ ಅಂದ್ರೆ 10 ವಯಸ್ಸಿನಿಂದ 60 ವರ್ಷ ವಯಸ್ಸಿನ ವರೆಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಇದರಲ್ಲಿ ಸಾಕಷ್ಟು ಸ್ಪರ್ಧಿಗಳು ಹಲವಾರು ಭಾರಿ ಸ್ಪರ್ಧಿಸಿದ್ರು ಸಹ ಇನ್ನು ಪದಕ ಪಡೆದುಕೊಂಡಿಲ್ಲ, ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿರುವ ಅಚಿಂತ್ ಕೆಲವೇ ಸೆಕೆಂಡ್ ಗಳಲ್ಲಿ ಆಟ ಮುಗಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾನೆ.ಈ ಬಾಲಕನ ವಿಶ್ವ ದಾಖಲೆಗೆ ಎಲ್ಲೆಡೆ ಮೆಚ್ಚುಗೆ ಸಹ ವ್ಯಕ್ತವಾಗಿದೆ. ಇನ್ನು ಹುಟ್ಟುನಿಂದಲೂ ಚುರುಕಾಗಿರುವ ಅಚಿಂತ್ ನ ಪ್ರತಿಭೆಯನ್ನು ಗಮನಿಸಿ ತಾಯಿ ಡಾ.ಹರ್ಷಿತಾ ಸಹ ಮಗನ ಸಾಧನೆ ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು ಎಂಬಂತೆ 12 ವಯಸ್ಸಿನ ಅಚಿಂತ್ ಇವತ್ತು ವಿಶ್ವದ ಗಮನ ಸೆಳೆದಿದ್ದಾನೆ. ಸಾಮಾಜಿಕ ಜಾಲತಾಣಗಳನ್ನು ಕೇವಲ ಮನರಂಜನೆ ಹಾಗೂ ಕೆಟ್ಟದಕ್ಕೆ ಬಳಸಿಕೊಳ್ಳುವ ಬದಲು ಈ ರೀತಿ ವಿಶ್ವ ದಾಖಲೆಗೂ ಬಳಸಿಕೊಳ್ಳಬಹುದು ಅನ್ನೋದನ್ನು ಅಚಿಂತ್ ತೋರಿಸಿಕೊಟ್ಟಿರುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:37 pm, Wed, 13 December 23